ಅಪ್ರಾಪ್ತ ಬಾಲಕಿ ಗರ್ಭಿಣಿ : ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು : ಆರೋಪಿ ಬಂಧನ
Team Udayavani, Jun 5, 2022, 10:42 PM IST
ಕುಣಿಗಲ್ : ಅಪ್ರಾಪ್ತೆ ಬಾಲಕಿಯೊಂದಿಗೆ ಲೈಂಗಿಕ ಸಂಬಂಧ ಬೆಳಸಿ ಗರ್ಭಿಣಿಯಾಗಿಸಿದ ಯುವಕನ ವಿರುದ್ದ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ತಾಲೂಕಿನ ಕೊತ್ತಗೆರೆ ಹೋಬಳಿ ಸೋಬಗಾನಹಳ್ಳಿ ಗ್ರಾಮದ ಅಶೋಕ್ (22) ಬಂಧಿತ ಆರೋಪಿ.
ಬಾಲಕಿ ಎಡಿಯೂರು ಹೋಬಳಿ ನಾಗಸಂದ್ರ ಗ್ರಾಮದವರಾಗಿದ್ದು, ಕುಣಿಗಲ್ ಟೌನ್ ಡಾ.ಅಂಬೇಡ್ಕರ್ ನಗರದ ದೊಡ್ಡಮನ ಮಗಳ ಮನೆಗೆ ಬಾಲಕಿ ಕಳೆದ ನಾಲ್ಕು ತಿಂಗಳ ಹಿಂದೆ ಬಂದಿದ್ದಾಳೆ, ಆಗ ಸೋಬಗಾನಹಳ್ಳಿ ಗ್ರಾಮದ ಅಶೋಕ್ ಈಕೆಗೆ ಪರಿಚಯವಾಗಿತ್ತು ಎನ್ನಲಾಗಿದೆ, ದೊಡ್ಡಮ್ಮನ ಮಗಳು ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿದ್ದಾಗ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭ ಅಶೋಕ್ ಮನೆಗೆ ಬಂದು ಜೊತೆಯಲ್ಲೇ ಇದ್ದು ಸಂಜೆ ಹೋಗುತ್ತಿದ್ದ ಎಂದು ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.
ಇದನ್ನೂ ಓದಿ : ಸಬ್ಸಿಡಿ ತೆಗೆದರೂ ಹಜ್ ಯಾತ್ರಿಕರಿಗೆ ಹೊರೆಯಾಗಿಲ್ಲ: ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ
ನಂತರ ಒಂದು ವಾರದ ಬಳಿಕ ಸೋಬಗಾನಹಳ್ಳಿ ಗ್ರಾಮದಲ್ಲಿ ಕಾಲಘಟ್ಟಮ್ಮ ದೇವಸ್ಥಾನದ ಹಬ್ಬಕ್ಕೆಂದು ಹೋಗಿದ್ದಾಗ ಹಬ್ಬದ ಮರು ದಿನರಾತ್ರಿ ಬಾಲಕಿಯ ದೊಡ್ಡಮ್ಮನ ಮನೆಗೆ ರಾತ್ರಿ ಹತ್ತು ಗಂಟೆಗೆ ಬಂದು ಆಕೆಯ ಜೋತೆಯಲ್ಲಿ ಇದ್ದ ಎಂದು ದೂರಿದ್ದಾಳೆ. ಈಗ 4 ತಿಂಗಳ ಗರ್ಣಿಣಿಯಾಗಿದ್ದಾಳೆ ಈ ಕುರಿತು ಬಾಲಕಿಯ ತಾಯಿ ವಿಚಾರಿಸಿದಾಗ ಇದಕ್ಕೆ ಅಶೋಕನೇ ಕಾರಣ ಎಂದು ಬಾಲಕಿ ತಿಳಿಸಿದ್ದಾಳೆ.
ಬಾಲಕಿ ಪೋಷಕರು ಅಶೋಕನ ವಿರುದ್ಧ ದೂರು ನೀಡಿದ್ದು ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಅಶೋಕನನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ಬಾಲಕಿಯನ್ನು ನಾಗಸಂದ್ರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್- ಸಿ.ಟಿ.ರವಿ ವಾಗ್ವಾದ
Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ “ಕೈ’ ಹಾಕಲಿದೆಯೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ನಡುರಾತ್ರಿ ದೇವರ ಮುಂದೆ ಒಂಟಿಯಾಗಿ ಕೂತು ಪ್ರಾರ್ಥಿಸಿದ ಚೈತ್ರಾ.!
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.