Kunigal; ಇಂಜಿನ್‌ನಲ್ಲಿ ಆಕಸ್ಮಿಕ ಬೆಂಕಿ: ಹೊತ್ತಿ ಉರಿದ ಜಾಗ್ವಾರ್ ಕಾರು
Team Udayavani, Nov 9, 2023, 11:25 PM IST
ಕುಣಿಗಲ್ : ಜಾಗ್ವಾರ್ ಕಾರಿನ ಎಂಜಿನ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕಾರು ಧಗಧಗನೆ ಹೊತ್ತಿ ಉರಿದಘಟನೆ ಕುಣಿಗಲ್ ಪಟ್ಟಣದ ನಕ್ಷತ್ರ ಪ್ಯಾಲೇಸ್ ಬಳಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಅದೃಷ್ಟವಷಾತ್ ಯಾರಿಗೂ ಗಾಯವಾಗಿಲ್ಲ. ಬೆಂಗಳೂರು ಯಲಹಂಕ ಮೂಲದ ರಾಜಕುಮಾರ್ ಅವರಿಗೆ ಸೇರಿದ ಜಾಗ್ವಾರ್ ಕಾರು ಬೆಂಕಿಗೆ ಅಹುತಿಯಾಗಿದೆ.
ಸಂಬಂಧಿಕರ ಮದುವೆಗೆಂದು ರಾಜಕುಮಾರ್ ಹಾಗೂ ಅವರ ಕುಟುಂಬ ಕಾರಿನಲ್ಲಿ ಬಂದಿದ್ದರು.ಕಾರನ್ನು ಪ್ಯಾಲೇಸ್ ಮುಂಭಾಗದಲ್ಲಿ ನಿಲ್ಲಿಸಿ ಧಾರಾ ಮುಹೂರ್ತಕ್ಕೆ ಹೋಗಿದ್ದರು. ಈ ವೇಳೆ ಕಾರಿನ ಇಂಜಿನ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಇದಕ್ಕಿದಂತೆ ಧಗಧಗನೆ ಹೊತ್ತಿ ಉರಿಯಿತು. ಬೆಂಕಿಯ ಹೊಗೆ ಪ್ಯಾಲೇಸ್ ಸುತ್ತ ಅವರಿಸಿತ್ತು. ಮದುವೆಗೆ ಬಂದಿದ್ದ ಜನರು ಕಾರು ಹೊತ್ತಿ ಉರಿಯುತ್ತಿರುವುದನ್ನು ನೋಡಿ ಗಾಬರಿಗೊಂಡು ಕಲ್ಯಾಣ ಮಂಟಪದಿಂದ ಕೆಲವರು ಹೊರಗೋಡಿ ಬಂದರು. ಮತ್ತೆ ಕೆಲವರು ಕಲ್ಯಾಣ ಮಂಟಪದಲ್ಲೇ ಕುಳಿತು ಜ್ವಾಲೆಯನ್ನು ನೋಡಿ ಆತಂಕಗೊಂಡರು. ಪ್ಯಾಲೇಸ್‌ನ ಅಕ್ಕ ಪಕ್ಕದಲ್ಲಿ ಇದ್ದ ಅಂಗಡಿ ಮಾಲಕರು, ಕೆಎಸ್‌ಆರ್‌ಟಿಸಿ ಡಿಪೋ ಸಿಬಂದಿ ಡಿಪೋ ನಿಂದ ಹೊರ ಬಂದು ಬೆಂಕಿಯನ್ನು ನಂದಿಸಲು ನೀರು ಹಾಕಿದರು. ಆದರೆ ಇದ್ಯಾವುದು ಪ್ರಯೋಜನಕ್ಕೆ ಬಾರದ ಕಾರಣ ಅಗ್ನಿಶಾಮಕ ದಳಕ್ಕೆ ತಿಳಿಸಿದರು.
ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಶಾಮಕ ದಳ ಸಿಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ. ಕಾರಿನ ಮೌಲ್ಯ ಸುಮಾರು 25 ಲಕ್ಷ ರೂ. ಎಂದು ಅಂದಾಜಿಸಲಾಗಿದೆ, ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.