Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Team Udayavani, May 17, 2024, 9:32 PM IST
ಕುಣಿಗಲ್ : ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟಗೊಂಡು ಆರು ಮಂದಿ ತೀವ್ರವಾಗಿ ಗಾಯಗೊಂಡು ಎರಡು ಮನೆಗಳಿಗೆ ಹಾನಿಯಾಗಿರುವ ಘಟನೆ ಕುಣಿಗಲ್ ಪಟ್ಟಣದ ಕೋಟೆ ಪ್ರದೇಶದ ಸಂತೇಮೈದಾನ ಬಳಿ ಶುಕ್ರವಾರ ನಡೆದಿದೆ.
ಘಟನೆಯಲ್ಲಿ ಕೋಟೆ ವಾಸಿಗಳಾದ ಮಂಜಮ್ಮ (42), ಶಿವಣ್ಣ (45), ಸಮೀನಾ(46), ಕುಶಾಲ್ (11), ಹೇಮಲತಾ(16) ತೀವ್ರವಾಗಿ ಗಾಯಗೊಂಡಿದ್ದು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ, ಶೃತಿ (45) ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ.
ಘಟನೆ ವಿವರ
ರವಿಕುಮಾರ್ ಖಾರಪುರಿ ವ್ಯಾಪಾರಿಯಾಗಿದ್ದು, ಪುರಿಯನ್ನು ಹುರಿಯಲು ಹಾಗೂ ಅದುಗೆ ಮಾಡಲು ನಾಲ್ಕು ಕೆ.ಜಿ ಗ್ಯಾಸ್ ಸಿಲಿಂಡರ್ ಸ್ಟವ್ ಬಳಸುತ್ತಿದ್ದರು, ರವಿಕುಮಾರ್ ಹೆಂಡತಿ ಶೃತಿ ಆಕೆಯ ಮಗಳು ಹೇಮಳನ್ನು ಟ್ಯೂಷನ್ ಗೆ ಬಿಡಲು ಮನೆಯಿಂದ ಹೊರ ಬರುತ್ತಿದಂತೆ ಮನೆಯಲ್ಲಿ ಸ್ಪೋಟದ ಶಬ್ದ ಕೇಳಿ ಬಂದಿದೆ. ಮನೆ ಒಳಗೆ ಹೋಗಿ ನೋಡಿದಾಗ ಸಿಲಿಂಡರ್ ಸ್ಪೋಟಗೊಂಡು ಮನೆಯಲ್ಲಿ ಬೆಂಕಿ ಹತ್ತಿಕೊಂಡು ಉರಿಯುತ್ತಿತ್ತು. ಆ ವೇಳೆ ಮನೆಯಲ್ಲಿ ಇದ್ದ ಕುಶಾಲ್ ಹಾಗೂ ಶೃತಿ, ಹೇಮಲತಾಗೆ ಗಾಯವಾಗಿದೆ.
ನೋಡಲು ಬಂದವರಿಗೂ ಗಾಯ
ಸಿಲಿಂಡರ್ ಸ್ಪೋಟದ ಶಬ್ದವನ್ನು ಕೇಳಿ ನೋಡಲು ಬಂದ ಅಕ್ಕ ಪಕ್ಕದ ಮನೆಯವರಾದ ಶಿವಣ್ಣ, ಮಂಜಮ್ಮ, ಹಾಗೂ ಸಮೀನಾ ಅವರಿಗೂ ತೀವ್ರವಾಗಿ ಗಾಯಗೊಂಡಿದ್ದಾರೆ.
ಎರಡು ಮನೆಗೆ ಹಾನಿ
ಸಿಲಿಂಡರ್ ಸ್ಪೋಟದಿಂದ ಬೆಂಕಿ ಅವರಿಸಿಕೊಂಡು ಮನೆಯಲ್ಲಿ ಇದ್ದ ದವಸ ಧಾನ್ಯ, ಯುಪಿಎಸ್, ಗೃಹ ಬಳಕೆ ವಸ್ತುಗಳು ಹೊತ್ತಿ ಉರಿದಿವೆ. ಸ್ಪೋಟದ ಶಬ್ದಕ್ಕೆ ಮನೆಯ ಬಾಗಿಲು ಮುರಿದು ಅಪಾರ ನಷ್ಟ ಉಂಟಾಗಿದೆ. ಘಟನೆಯಲ್ಲಿ ರವಿಕುಮಾರ್ ಹಾಗೂ ನಟರಾಜ ಅವರ ಮನೆಗೆ ಹಾನಿಯಾಗಿದ್ದು ಸ್ಥಳಕ್ಕೆ ಅಗ್ನಿಶಾಮಕ ಸಿಬಂದಿಗಳು ತೆರಳಿ ಬೆಂಕಿಯನ್ನು ನಂದಿಸಿದ್ದಾರೆ, ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಅರ್ಹರಿಗಷ್ಟೇ ಬಿಪಿಎಲ್ ಕಾರ್ಡ್: ಸಿಎಂ ಸಿದ್ದರಾಮಯ್ಯ
Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ
Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್
Karnataka Lokayukta: ನಾಲ್ವರಿಗೆ ಲೋಕಾ ಶಾಕ್: 27 ಕೋಟಿ ರೂ. ಆಸ್ತಿ ಪತ್ತೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
MUST WATCH
ಹೊಸ ಸೇರ್ಪಡೆ
Karnataka: ಅರ್ಹರಿಗಷ್ಟೇ ಬಿಪಿಎಲ್ ಕಾರ್ಡ್: ಸಿಎಂ ಸಿದ್ದರಾಮಯ್ಯ
Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ
Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್
Eden Gardens; ‘ಬಿ’ ಬ್ಲಾಕ್ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
Karnataka Lokayukta: ನಾಲ್ವರಿಗೆ ಲೋಕಾ ಶಾಕ್: 27 ಕೋಟಿ ರೂ. ಆಸ್ತಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.