Kunigal; ಎಮ್ಮೆ ಕರುವಿನ ಮೇಲೆ ಚಿರತೆ ದಾಳಿ: ಕಂಗೆಟ್ಟ ಕುಟುಂಬ
Team Udayavani, Nov 12, 2023, 8:01 PM IST
ಕುಣಿಗಲ್ : ಬಡ ರೈತ ಕುಟುಂಬ ನಿತ್ಯವೂ ಚಿರತೆಯ ಭಯದಲ್ಲಿ ಬದುಕುವಂತ ಪರಿಸ್ಥಿತಿ ನಿರ್ಮಾಣವಾಗಿರುವ ಘಟನೆ ತಾಲೂಕಿನ ಕೊತ್ತಗೆರೆ ಹೋಬಳಿ ಕೆಂಪಸಾಗರದಲ್ಲಿ ನಡೆದಿದೆ.
ಗ್ರಾಮದ ರೈತ ಗಂಗಾಧರಯ್ಯ ಆತನ ಆತನ ಹೆಂಡತಿ ಮತ್ತು ಮಕ್ಕಳು ಚಿರತೆಯ ಉಪಟಳಕ್ಕೆ ಹೆದರಿ ರಾತ್ರಿ ವೇಳೆ ಮನೆಯಿಂದ ಹೊರಗೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನ 7 ರಂದು ಗಂಗಾಧರಯ್ಯ ಮನೆಯ ಕೊಟ್ಟಿಗೆಯಲ್ಲಿ ಎಮ್ಮೆ ಕರುವನ್ನು ಕಟ್ಟಿ ಹಾಕಿದ್ದರು, ಏಕಾಏಕಿ ಚಿರತೆ ಕರುವಿನ ಮೇಲೆ ದಾಳಿ ಮಾಡಿದೆ, ಕರು ಕಿರಿಚಿಕೊಂಡಾಗ ಮನೆಯಿಂದ ಗಂಗಾಧರಯ್ಯ ಹೊರಗೆ ಬಂದು ನೋದುವಾಗ ಕರುವನ್ನು ತಿನ್ನುತ್ತಿತ್ತು. ಗಂಗಾಧರಯ್ಯ ಅವರ ಮೇಲೂ ದಾಳಿ ಮಾಡಲು ಮುಂದಾಗಿದೆ. ಕಿರುಚಿಕೊಂಡಾಗ ಅಕ್ಕ ಪಕ್ಕದ ಮನೆಯವರು ಓಡಿ ಬಂದ ಕಾರಣ ಚಿರತೆ ಪರಾರಿಯಾಗಿದೆ. ಈ ಸಂಬಂಧ ಹುಲಿಯೂರುದುರ್ಗ ಅರಣ್ಯ ಸಂರಕ್ಷಣಾಧಿಕಾರಿಗೆ ಗಂಗಾಧರಯ್ಯ ದೂರು ನೀಡಿದ್ದಾರೆ.
ಪದೇ ಪದೇ ಬರುವ ಚಿರತೆ
ತೋಟದಲ್ಲಿ ಗಂಗಾಧರಯ್ಯ ಮನೆ ಕಟ್ಟಿಕೊಂಡು ತನ್ನ ಹೆಂಡತಿ ಮಕ್ಕಳೊಂದಿಗೆ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಆದರೆ ಚಿರತೆ ಎಮ್ಮೆ ಕರುವನ್ನು ತಿಂದು ಹಾಕಿದ ಬಳಿ ಪ್ರತಿ ದಿನ ರಾತ್ರಿ ವೇಳೆ ಗಂಗಾಧರಯ್ಯನ ಮನೆ ಬಳಿ ಬರುತ್ತಿದೆ, ಗಂಗಾಧರಯ್ಯ ಕುಟುಂಬ ಚಿರತೆ ಎಲ್ಲಿ ದಾಳಿ ಮಾಡುತ್ತದೆ ಎಂದು ಭಯದಿಂದ ರಾತ್ರಿ ವೇಳೆ ಬೆಂಕಿ ಹಾಕಿಕೊಂಡು ಕಾಯುತ್ತಿದ್ದಾರೆ.
ಭೇಟಿ ನೀಡದ ಅಧಿಕಾರಿಗಳು
ಗಂಗಾಧರಯ್ಯ ಕುಟುಂಬ ಭೀತಿ ಎದುರಿಸುತ್ತಿದ್ದರೂ ಈವರೆಗೂ ಅರಣ್ಯ ಇಲಾಖಾಧಿಕಾರಿಗಳಾಗಲಿ ಹಾಗೂ ಯಾವುದೇ ಇಲಾಖೆಯ ಅಧಿಕಾರಿಗಳಾಗಲಿ ಗ್ರಾಮಕ್ಕೆ ಭೇಟಿ ನೀಡಿ ಚಿರತೆ ಸೆರೆ ಹಿಡಿಯುವಂತ ಗೋಜಿಗೆ ಹೋಗಿಲ್ಲ. ಕಳೆದ ಹಲವು ವರ್ಷಗಳ ಹಿಂದೆ ಇದೇ ಹೋಬಳಿಯ ದೊಡ್ಡಮಳಲವಾಡಿ ಗ್ರಾಮದ ಆನಂದಯ್ಯ ಅವರ ಮೇಲೆ ಅವರ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿತ್ತು.
ಈಗ ಕೆಂಪಸಾಗರದಲ್ಲಿ 64 ವರ್ಷದ ಗಂಗಾಧರಯ್ಯ ಚಿರತೆ ಎಲ್ಲಿ ನಮ್ಮ ಮೇಲೆ ದಾಳಿ ಮಾಡುತ್ತದೆ ಎಂದು ದಿನ ನಿತ್ಯ ಭಯದ ನೆರಳಲ್ಲೇ ಬದುಕುತ್ತಿರುವುದು ವಿಪರ್ಯಾಸವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಗ್ರಾಮದಲ್ಲಿ ಬೋನು ಇಟ್ಟು ಚಿರತೆ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.