Kunigal; ಜೂಜು ಅಡ್ಡೆ ಮೇಲೆ ಕುಣಿಗಲ್ ಪೊಲೀಸರ ದಾಳಿ : 9 ಮಂದಿ ಬಂಧನ
Team Udayavani, Nov 1, 2023, 11:33 PM IST
ಕುಣಿಗಲ್ : ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಕುಣಿಗಲ್ ಪೊಲೀಸರು ಒಂಭತ್ತು ಮಂದಿ ಆರೋಪುಗಳನ್ನು ಬಂದಿಸಿ ಪಣಕ್ಕೆ ಇಟ್ಟಿದ್ದ ಹಣವನ್ನು ವಶ ಪಡಿಸಿಕೊಂಡಿರುವ ಘಟನೆ ತಾಲೂಕಿ ಹುತ್ರಿದುರ್ಗ ಹೋಬಳಿ ಇಪ್ಪಾಡಿ ಗ್ರಾಮದ ಬಸವೇಶ್ವರ ದೇವಾಲಯದ ಸಾಮಾಜಿಕ ಆರಣ್ಯ ಪ್ರದೇಶದಲ್ಲಿ ಬುಧವಾರ ನಡೆದಿದೆ.
ರಾಮನಗರ ಜಿಲ್ಲೆ, ಮಾಗಡಿ ತಾಲೂಕು ಚಕ್ರಬಾವಿ ಗ್ರಾಮದ ಚಂದ್ರ ಅಲಿಯಾಸ್ ಚಂದ್ರಶೇಖರ್, ಕಸಬಾ ಹೋಬಳಿಯ ಕೊಂಡಹಳ್ಳಿ ಗ್ರಾಮದ ರಂಗಸ್ವಾಮಿ, ಸಾಬರ್‌ಪಾಳ್ಯ ವಾಸಿಂಅಕ್ರಂ, ಹಲಸಬೆಲೆ ಗ್ರಾಮದ ಮಹೇಶ್, ಮಾಡಬಾಳ್ ಹೋಬಳಿ ನಾಗಾಭೋವಿ ದೊಡ್ಡಿಯ ವೈ.ಎನ್.ನಾರಾಯಣ್, ಕೊಟಕಲ್ಲು ಹೋಬಳಿ ಹೋಬಳ ಚಿಕ್ಕ ಗಂಗವಾಡಿ ಗ್ರಾಮದ ಸಿ.ಎಂ ರವಿ, ಕುಣಿಗಲ್ ತಾಲೂಕು ಹುಲಿಯೂರುದುರ್ಗ ಹೋಬಳಿ ಹಳೇಪೇಟೆ ಗ್ರಾಮದ ಹೆಚ್.ಸಿ.ಹನುಮಂತಯ್ಯ, ತುಮಕೂರು ಜಿಲ್ಲೆ ಹೆಬ್ಬೂರು ಹೋಬಳಿ ಗರಗದ ಕುಪ್ಪೆ ಗ್ರಾಮದ ಹನುಂತಯ್ಯ ಬಂಧಿತ ಆರೋಪಿಗಳು.
ಅರಣ್ಯ ಪ್ರದೇಶದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿರುವ ಸಂಬಂಧ ಖಚಿತ ಮಾಹಿತಿ ಪಡೆದ ಕುಣಿಗಲ್ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಡಿವೈಎಸ್‌ಪಿ ಲಕ್ಷ್ಮಿಕಾಂತ್ ಅವರ ಮಾರ್ಗದರ್ಶನಲ್ಲಿ ಕುಣಿಗಲ್ ವೃತ್ತ ನಿರೀಕ್ಷಕ ನವೀನ್‌ಗೌಡ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ, ಒಂಭತ್ತು ಮಂದಿ ಆರೋಪಿಗಳನ್ನು ಬಂಧಿಸಿ, ಪಣಕ್ಕೆ ಇಟ್ಟಿದ 62.150 ರೂ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ, ಈ ಸಂಬಂಧ ಪೊಲೀಸರು ಪ್ರಕಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ದಾಳಿಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಿಥುನ್, ರಂಗಸ್ವಾಮಿ, ಮನೋಜ್, ಗವಿರಂಗೇಗೌಡ, ಹನುಮಂತು ಮತ್ತಿತರರು ಪಾಲ್ಗೊಂಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.