Kunigal:ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟದ ಇಬ್ಬರು ಗಾಯಾಳುಗಳು ಸಾವು
ಚಿಕಿತ್ಸೆ ಫಲಕಾರಿಯಾಗಲಿಲ್ಲ...
Team Udayavani, May 22, 2024, 9:14 AM IST
ಕುಣಿಗಲ್: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಸ್ಪೋಟದಲ್ಲಿ ಕುಣಿಗಲ್ ಪಟ್ಟಣ ಕೋಟೆ ಪ್ರದೇಶದ ಸಂತೆ ಮೈದಾನ ನಿವಾಸಿ ಶಿವಣ್ಣ( 45 ), ಕುಶಾಲ್ (11) ಮೃತ ದುರ್ದೈವಿಗಳು.
ಘಟನೆ ವಿವರ
ರವಿಕುಮಾರ್ ಖಾರಪುರಿ ವ್ಯಾಪಾರಿಯಾಗಿದ್ದು, ಪುರಿಯನ್ನು ಹುರಿಯಲು ಹಾಗೂ ಅಡುಗೆ ಮಾಡಲು ನಾಲ್ಕು ಕೆ.ಜಿ ಗ್ಯಾಸ್ ಸಿಲಿಂಡರ್ ಸ್ಟವ್ ಬಳಸುತ್ತಿದ್ದರು, ರವಿಕುಮಾರ್ ಹೆಂಡತಿ ಶೃತಿ ಆಕೆಯ ಮಗಳು ಹೇಮಲತಾಳನ್ನು ಟ್ಯೂಷನ್ ಗೆ ಬಿಡಲು ಶುಕ್ರವಾರ ಮೇ (17) ಮನೆಯಿಂದ ಹೊರ ಬರುತ್ತಿದಂತೆ ಮನೆಯಲ್ಲಿ ಸ್ಪೋಟದ ಶಬ್ದ ಕೇಳಿ ಬಂದಿತ್ತು. ಮನೆ ಒಳಗೆ ಹೋಗಿ ನೋಡಲಾಗಿ ಸಿಲಿಂಡರ್ ಸ್ಪೋಟಗೊಂಡು ಮನೆಯಲ್ಲಿ ಬೆಂಕಿ ಹತ್ತಿಕೊಂಡು ಉರಿಯುತ್ತಿತ್ತು. ಆ ವೇಳೆ ಮನೆಯಲ್ಲಿ ಇದ್ದ ಕುಶಾಲ್ ಹಾಗೂ ಶೃತಿ, ಹೇಮಲತಾಗೆ ಗಂಭೀರ ಸ್ವರೂಪದ ಗಾಯವಾಗಿತ್ತು.
ನೋಡಲು ಬಂದವರಿಗೂ ಗಾಯ
ಸಿಲಿಂಡರ್ ಸ್ಪೋಟದ ಶಬ್ದವನ್ನು ಕೇಳಿದ ಅಕ್ಕ ಪಕ್ಕದ ಮನಯವರಾದ ಶಿವಣ್ಣ, ಮಂಜಮ್ಮ, ಹಾಗೂ ಸಮೀನಾ ಅವರಿಗೂ ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ಎರಡು ಮನೆಗೆ ಹಾನಿ ಉಂಟಾಗಿತ್ತು.
ತೀವ್ರವಾಗಿ ಗಾಯಗೊಂಡ ಕುಶಾಲ್, ಶಿವಣ್ಣ, ಮಂಜಮ್ಮ, ಹೇಮಲತಾ, ಸಮೀನಾ ಅವರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಶಿವಣ್ಣ, ಕುಶಾಲ್ ಬುಧವಾರ ಮುಂಜಾನೆ ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಸಂಕ್ರಾಂತಿ ಹಬ್ಬಕ್ಕೆ ಹಸುಗಳಿಗೆ ಪೂಜೆ
ತುಮಕೂರು ಅಥವಾ ನೆಲಮಂಗಲ ಸಮೀಪವೇ ಮತ್ತೊಂದು ಏರ್‌ಪೋರ್ಟ್ ಆಗಲಿ: ವಿ.ಸೋಮಣ್ಣ
Finance Debt: ಫೈನಾನ್ಸ್ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.