ಹಾಸಿಗೆ ಕೊರತೆ: ಕಂಗಾಲಾದ ಸೋಂಕಿತರು


Team Udayavani, Apr 29, 2021, 5:28 PM IST

Lack of bed

ತುಮಕೂರು: ಕಳೆದ ಒಂದು ವಾರದಿಂದ ಜ್ವರ, ತಲೆನೋವು ಗಂಟಲು ನೋವು ಇದೆ. ನನಗೆ ಕೊರೊನಾಪಾಸಿಟಿವ್‌ ಬಂದಿದೆ. ಪಲ್ಸ್‌ ರೈಟ್‌ ತುಂಬಾ ಕಡಿಮೆಇದೆ. ನನ್ನ ಲಂಗ್ಸ್‌ ಶೇ. 60ರಷ್ಟು ಡ್ಯಾಮೇಜ್‌ ಆಗಿದೆ.ಉಸಿರಾಟ ಸಮಸ್ಯೆ ಇದೆ. ಯಾವ ಆಸ್ಪತ್ರೆಗೆಹೋದರೂ ಬೆಡ್‌ ಇಲ್ಲ ಎನ್ನುತ್ತಿದ್ದಾರೆ.

ಬಡವರ ಕಷ್ಟಕೇಳುವವರು ಯಾರು ಸ್ವಾಮಿ?…ಇದು ಕೊರೊನಾದಿಂದ ಸಂಕಷ್ಟಪಡುತ್ತಿದ್ದಸೋಂಕಿತರೊಬ್ಬರು ಬಹಿರಂಗವಾಗಿ ಜಿಲ್ಲಾ ಆಸ್ಪತ್ರೆಯಆವರಣದಲ್ಲಿ ತನ್ನ ಅಳಲನ್ನು ತೋಡಿಕೊಂಡರೆ ಅವರಕುಟುಂಬದವರು ಸೋಂಕಿತರ ಸ್ಥಿತಿ ನೋಡಿ ಕಣ್ಣೀರುಹಾಕುತ್ತಿದ್ದದ್ದು ಎಂಥವರ ಕರಳು ಹಿಂಡುವಂತಿತ್ತು.

ಇದು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರನೋವಿನ ಕಥೆ. ಜಿಲ್ಲಾಡಳಿತ ಹೇಳುತ್ತಿದೆ ಹಾಸಿಗೆಕೊರತೆ ಇಲ್ಲ ಎಂದು ಆದರೆ, ಆಸ್ಪತ್ರೆಗಳಲ್ಲಿ ಹಾಸಿಗೆಇಲ್ಲ, ವೆಂಟಿಲೇಟರ್‌ ಇಲ್ಲ. ಆಮ್ಲಜನಕ ಕೊರತೆಯಿಂದಜಿಲ್ಲೆಯಲ್ಲಿ ಮೃತಪಡುತ್ತಿರುವ ಸೋಂಕಿತರ ಸಂಖ್ಯೆತೀವ್ರವಾಗಿಯೇ ಇದೆ.

ರೋಗಿಗಳ ಪರದಾಟ: ಯಾವುದೇ ಆಸ್ಪತ್ರೆಗೆಹೋದರೂ ಬೆಡ್‌ ಖಾಲಿ ಇಲ್ಲ, ಆಸ್ಪತ್ರೆಗಳಮುಂದೆಯೇ ಬೆಡ್‌ ಖಾಲಿ ಇಲ್ಲ ಎನ್ನುವ ಬೋರ್ಡ್‌.ತೀವ್ರ ಉಸಿರಾಟದಿಂದ ತೊಂದರೆ ಅನುಭವಿಸುತ್ತಿರುವರೋಗಿಗಳ ಪರದಾಟ ಹೇಳ ತೀರದಾಗಿದೆ. ಸುಡುಬಿಸಿಲ ಬೇಗೆಯ ನಡುವೆ ಜನರಲ್ಲಿ ಹೆಚ್ಚು ಭೀತಿಹುಟ್ಟಿಸುತ್ತಿರುವ ರೂಪಾಂತರಿ ಕೊರೊನಾ ವೈರಸ್‌.ಒಂದೇ ದಿನಕ್ಕೆ 1800 ರಿಂದ 1900 ರವರೆಗೆಕೊರೊನಾ ಸೋಂಕಿತರು ಪತ್ತೆ ಆಗುತ್ತಿರುವುದುಜಿಲ್ಲೆಯ ಜನರಲ್ಲಿ ಭಯ ಹುಟ್ಟುವಂತೆ ಮಾಡುತ್ತಿದೆ.

ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿಕೊರೊನಾ ಹೆಚ್ಚು ವ್ಯಾಪಿಸುತ್ತಿರುವ ಜಿಲ್ಲೆಗಳಲ್ಲಿ ರಾತ್ರಿಕರ್ಫ್ಯೂ ಜಾರಿ ಮಾಡಿತ್ತು, ವೀಕೆಂಡ್‌ ಲಾಕ್‌ಡೌನ್‌ಘೋಷಣೆ ಮಾಡಿತ್ತು. ಆದರೆ, ಜಿಲ್ಲೆಯಲ್ಲಿ ಮಾತ್ರಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿಲ್ಲ.ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತನ್ನ ಆರ್ಭಟವನ್ನುಹೆಚ್ಚಿಸಿಕೊಂಡಿರುವ ಕಿಲ್ಲರ್‌ ಕೊರೊನಾ ತುಮಕೂರುಜಿಲ್ಲೆಯಲ್ಲಿಯೂ ಮಹಾಮಾರಿಯಾಗಿ ತನ್ನ ಅಟ್ಟಹಾಸವನ್ನು ಕಡಿಮೆ ಮಾಡದೇ ಮುನ್ನುಗ್ಗುತ್ತಿದೆ. ಒಂದುದಿನಕ್ಕೆ 1308 ಜನರಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದು ಜನರನ್ನು ಆತಂಕ ಪಡಿಸುತ್ತಿದ್ದು, ಇದನ್ನುಎದುರಿಸಲು ಜಿಲ್ಲಾಡಳಿತ ಸಜ್ಜುಗೊಂಡಿದೆ.

ಪ್ರತಿದಿನ 7000 ಕೋವಿಡ್‌ ಪರೀಕ್ಷೆ: ಈಗಬರುತ್ತಿರುವ ಆರೋಗ್ಯ ಇಲಾಖೆಯ ಮಾಹಿತಿಪ್ರಕಾರ ಒಂದು ದಿನಕ್ಕೆ ಕನಿಷ್ಠ 1300 ರಿಂದ 1950ರಒಳಗೆ ಕೊರೊನಾ ಸೋಂಕಿತರು ಆಸ್ಪತ್ರೆಗೆದಾಖಲಾಗುತ್ತಿದ್ದಾರೆ. ಬುಧವಾರದವರೆಗೆ ಜಿಲ್ಲೆಯಲ್ಲಿಕೊರೊನಾ ಸೋಂಕಿತರು 41,856 ಇದ್ದು, ಇದೇ ರೀತಿಜಿಲ್ಲೆಯಲ್ಲಿ ಕೊರೊನಾ ತನ್ನ ವ್ಯಾಪ್ತಿಯನ್ನು ಹೆಚ್ಚುಮಾಡುತ್ತಾ ಹೋದರೆ ಮೇ ವೇಳೆಗೆ ಸೋಂಕಿತರು 60ಸಾವಿರ ಮೇಲಾಗುವ ಸಾಧ್ಯತೆ ಕಂಡು ಬಂದಿದೆ.

ಎಲ್ಲಕಡೆ ಕೊರೊನಾ ಪರೀಕ್ಷೆ ಮಾಡಿಸಲು ಜಿಲ್ಲಾಡಳಿತಕ್ರಮಕೈಗೊಂಡಿದೆ. ಒಂದು ದಿನಕ್ಕೆ 7000 ಕೋವಿಡ್‌ಪರೀಕ್ಷೆ ಮಾಡಲಾಗುತ್ತಿದೆ.ತುಮಕೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಹಿನ್ನೆಲೆ ಆಸ್ಪತ್ರೆಗಳ ಮುಂದೆ ಕೊರೊನಾ ಪರೀಕ್ಷೆಗೆ ಜನಸಾಲುಗಟ್ಟಿ ನಿಲ್ಲುತ್ತಿದ್ದಾರೆ ಜೊತೆಗೆ ಕೊರೊನಾಸೋಂಕಿತರು ಲ್ಯಾಬ್‌ ಗಳ ಮುಂದೆ ಶ್ವಾಸಕೋಶದ ಸಿಟಿಸ್ಕ್ಯಾನಿಂಗ್‌ ಮಾಡಿಸಲು ಕೊರೊನಾ ಪಾಸಿಟಿವ್‌ ಬಂದಿರುವವರು ಕಾಯುತ್ತಿರುವುದು ಸಾಮಾನ್ಯವಾಗಿದೆ.

ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ವಿಫ‌ಲ: ಕೊರೊನಾವೈರಸ್‌ ದಿನೇ ದಿನೆ ಹೆಚ್ಚಳವಾಗಿರುವ ಹಿನ್ನೆಲೆ ಜಿಲ್ಲಾಡಳಿತ ಅಗತ್ಯ ಕ್ರಮ ಗಳನ್ನು ಕೈಗೊಂಡಿದೆ. ಕೊರೊನಾಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲಾ ಕೇಂದ್ರತುಮಕೂರಿ ನಲ್ಲಿ 200 ಹಾಸಿಗೆಗಳು ಉಳಿದಂತೆಸಿದ್ಧಾರ್ಥ ಆಸ್ಪತ್ರೆಯಲ್ಲಿ 110 ಶ್ರೀದೇವಿ ಆಸ್ಪತ್ರೆಯಲ್ಲಿ125, ಸೂರ್ಯ ಆಸ್ಪತ್ರೆಯಲ್ಲಿ 30, ಪೃಥ್ವಿ ಆಸ್ಪತ್ರೆಯಲ್ಲಿ30 ಹಾಸಿಗೆಗಳು ಸೇರಿದಂತೆ ವಿವಿಧ ಆಸ್ಪತ್ರೆ ಕೋವಿಡ್‌ಆಸ್ಪತ್ರೆಯಂದು ಘೋಷಿಸಿದೆ. ಕಳೆದ ವರ್ಷಆರಂಭವಾಗಿದ್ದ ಅಶ್ವಿ‌ನಿ ಆಯುರ್ವೇದಿಕ್‌ ಆಸ್ಪತ್ರೆಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಇನ್ನು ಕೋವಿಡ್‌ರೋಗಿಗಳ ದಾಖಲಾತಿ ಆರಂಭವಾಗಿಲ್ಲ.

ಸೋಂಕಿತರುಹೆಚ್ಚಾದರೆ ಎಲ್ಲ ಕಡೆ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಅದುಈವರೆ‌ಗೂ ಸಾಧ್ಯವಾಗಿಲ್ಲ, ಅಲ್ಲದೆ ಪ್ರತಿ ತಾಲೂಕಿನಲ್ಲಿ50 ಹಾಸಿಗೆಗಳು ಲಭ್ಯವಿದೆ. ಸೋಂಕಿತರ ಸಂಖ್ಯೆಗೆಅನುಗುಣವಾಗಿ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತಸಿದ್ಧವಾಗಿದೆ. ಆದರೆ, ರೋಗಿಗಳ ಸಂಖ್ಯಾ ವೇಗಕ್ಕೆಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತದಿಂದ ಆಗುತ್ತಿಲ್ಲ.

ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24-pavagada

Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

suicide (2)

Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.