ಉಪನ್ಯಾಸಕರಿಲ್ಲದೆ ಸೊರಗುತ್ತಿರುವ ಸರ್ಕಾರಿ ಪದವಿ ಕಾಲೇಜು


Team Udayavani, Dec 18, 2020, 8:37 PM IST

tk-tdy-1

ತಿಪಟೂರು: ಶಿಕ್ಷಣವೇ ಶಕ್ತಿ, ಶಿಕ್ಷಣ ದೇಶದ ಭದ್ರ ಬುನಾದಿ. ಹೀಗೆ ಸರ್ಕಾರದ ಹಲವು ಸ್ಲೋಗನ್‌ಗಳು ಅನಕ್ಷರಸ್ಥರನ್ನೂ ಕೂಡ ಬಡಿದೆಚ್ಚರಿಸಿ ಅಕ್ಷರಭ್ಯಾಸಕ್ಕೆ ಉತ್ತೇಜನ ನೀಡುವ ಮಹಾತ್ವಾಕಾಂಕ್ಷೆಹೊಂದಿವೆ. ಯಾವುದೇ ಸರ್ಕಾರಗಳು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದರೂ ಶೈಕ್ಷಣಿಕ ಕ್ಷೇತ್ರಕ್ಕೆತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಲೇ ಬರುತ್ತಿದ್ದು ಈ ನಿಟ್ಟಿನಲ್ಲಿ ಸಾಕಷ್ಟು ಅನುದಾನವೂ ಕೂಡ ಶೈಕ್ಷಣಿಕ ಕ್ಷೇತ್ರಕ್ಕೆ ವಿವಿಧ ಯೋಜನೆ ಹಾಗೂ ಹಂತಗಳಲ್ಲಿ ಪೂರೈಕೆಯಾಗುತ್ತಲೇಇದ್ದರೂ ಸಮಸ್ಯೆಗಳ ಸರಮಾಲೆ ಹಾಗೆ ಉಳಿದುಬಿಡುತ್ತಿವೆ.

ರಾಜ್ಯ ಸರ್ಕಾರದ ಸರ್ಕಾರಿ ಶಾಲಾ-ಕಾಲೇಜುಗಳು ಇಲ್ಲಿನ ಬೇಜವಾಬ್ದಾರಿ ರಾಜಕಾರಣದ ಕಪಿಮುಷ್ಠಿಗೆ ಸಿಲುಕಿ ಹಿಂದುಳಿದ ಹಾಗೂಮಧ್ಯಮವರ್ಗದವಿದ್ಯಾರ್ಥಿಗಳಿಗೆವ್ಯವಸ್ಥಿತಶಿಕ್ಷಣನೀಡುವಲ್ಲಿ ವಿಫ‌ಲಗೊಳ್ಳುತ್ತಿವೆ ಅನ್ನುವುದಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ.,ಬಿ.ಕಾಂ,ಬಿ.ಎಸ್‌.ಸಿ,ಬಿ.ಬಿ.ಎಂ,ಪತ್ರಿಕೋದ್ಯಮವಿಭಾಗಗಳಿದ್ದುಒಟ್ಟು3 ಸಾವಿರಕ್ಕೂವಿದ್ಯಾರ್ಥಿಗಳುದಾಖಲಾಗಿದ್ದಾರೆ. ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪೈಕಿ ಶೇ.70ರಷ್ಟು ಮಂದಿ ವಿದ್ಯಾರ್ಥಿನಿಯರೇ ಇದ್ದು, ಕಾಲೇಜಿನಲ್ಲಿ ಉಪನ್ಯಾಸಕರಕೊರತೆಯಿಂದ ಪಾಠಗಳೇ ನಡೆಯುತ್ತಿಲ್ಲ. ಕಾಲೇಜುಪ್ರಾರಂಭವಾದ ಈ ಕಡಿಮೆ ಅವಧಿಯಲ್ಲಿ ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗಿರುವ ಕಾಲೇಜು ಇದಾಗಿದ್ದರೂ ಸಮಸ್ಯೆಗಳ ಸರಮಾಲೆಗಳು ನೂರಾರು.

ತರಗತಿಯೇ ನಡೆಯದೆ ಪರೀಕ್ಷೆ?: ಕನ್ನಡ ಮತ್ತು ಇಂಗ್ಲಿಷ್‌ ವಿಷಯ ಬಿಟ್ಟರೆ ಇನ್ನುಳಿದ 4-5 ವಿಷಯಗಳಿಗೆ ಒಬ್ಬ ಉಪನ್ಯಾಸಕರು ಮಾತ್ರ ತರಗತಿ ತೆಗೆದುಕೊಳ್ಳುತ್ತಾರೆ. ಅಲ್ಲದೆ ವಿಜ್ಞಾನ ವಿದ್ಯಾರ್ಥಿಗಳಿಗೆ ಲ್ಯಾಬ್‌, ಪ್ರಾಕ್ಟಿಕಲ್‌ನಂತಹ ಸಾಕಷ್ಟು ಪ್ರಾಯೋಗಿಕ ತರಗತಿಗಳನ್ನು ನಡೆಸಬೇಕಾಗುತ್ತದೆ. ವಿವಿಗಳುಹಾಗೂ ಕಾಲೇಜು ಶಿಕ್ಷಣ ಇಲಾಖೆ ಮುಂದಿನ ಫೆ.24ಕ್ಕೆ ಅಂತಿಮವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಘೋಷಣೆ ಮಾಡಿದೆ. ಆದರೆ ವಿದ್ಯಾರ್ಥಿಗಳಿಗೆ ತರಗತಿಗಳೇ ಸರಿಯಾಗಿ ನಡೆಯುತ್ತಿಲ್ಲ. ಪರೀಕ್ಷೆಯನ್ನು ಹೇಗೆ ಬರೆಯಬೇಕೆಂಬುದು ಗೊಂದಲವಾಗಿದೆ.ಸರ್ಕಾರದ ಎಡವಟ್ಟು: ಅಂತಿಮ ಪದವಿ ತರಗತಿಗಳನ್ನು ನಡೆಸ ಬೇಕೆಂದು ಸರ್ಕಾರ ಅನೇಕ ನಿಯಮಾವಳಿ ಗಳನ್ನು ರೂಪಿಸಿ ಕಾಲೇಜು ಶಿಕ್ಷಣ ಇಲಾಖೆ ಮೂಲಕ ಪದವಿ ತರಗತಿಗಳನ್ನು ನಡೆಸಲು ಆದೇಶವನ್ನೇನೋ ನೀಡಿದ್ದು ಆಯ್ತು, ತರಗತಿಗಳಪ್ರಾರಂಭವೂ ಆಯ್ತು. ಆದರೆ ಸರ್ಕಾರಿ ಕಾಲೇಜುಗಳಲ್ಲಿ(ರಾಜ್ಯಾದ್ಯಂತ) ಅನೇಕ ವಿಷಯಗಳಿಗೆ ಕಾಯಂ ಬೋಧಕರೇ ಇಲ್ಲ. ಒಂದೊಂದು ವಿಷಯಕ್ಕೆ ಒಬ್ಬ ಬೋಧಕರಿದ್ದರೆ, ವಿದ್ಯಾರ್ಥಿಗಳಸಂಖ್ಯೆ ಹಾಗೂ ಸೆಕ್ಷನ್‌ಗಳು ಹೆಚ್ಚಾಗಿರುತ್ತವೆ. ಆದರೆ ಈ ವರೆಗೂ ಅತಿಥಿ ಉಪನ್ಯಾಸಕರನ್ನು ಬಳಸಿಕೊಂಡು ಪಾಠ ನಡೆಯುತ್ತಿದ್ದವು. ಕೋವಿಡ್‌ ಹಿನ್ನೆಲೆಯಲ್ಲಿ ಕಾಲೇಜುಗಳನ್ನು ಬಂದ್‌ ಮಾಡಿದ ನಂತರ ಅವರಿಗೆ ಸರಿಯಾಗಿ ಸಂಬಳವನ್ನೂ ನೀಡಿಲ್ಲ. ಈಗ ಪುನಃ ಕಾಲೇಜುಗಳು ಪ್ರಾರಂಭವಾದ ನಂತರ ಕಾಲೇಜು ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂಬ ಸುತ್ತೋಲೆಯನ್ನೂ ನೀಡಿಲ್ಲ.

ಕಾಯಂ ಬೋಧಕರ ನೇಮಿಸಿ: ಹಾಗಾಗಿ ಅಂತಿಮ ವರ್ಷದ ಪದವಿ

ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಾಂಕ(ಫೆ. 24) ನಿಗದಿಯಾ ಗಿದ್ದರೂ ಕಾಲೇಜುಗಳಲ್ಲಿ ಬೋಧನೆ ಆಡಲು ಉಪನ್ಯಾಸಕರ ಕೊರತೆ ತೀವ್ರವಾಗಿದ್ದು ಕೇವಲ ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಗಳ ಬೋಧನೆ ಮಾತ್ರ ನಡೆಯುತ್ತಿದ್ದು ಇನ್ನುಳಿದ ವಾಣಿಜ್ಯ ಶಾಸ್ತ್ರ, ಲೆಕ್ಕಶಾಸ್ತ್ರ, ವ್ಯವಹಾರ ಶಾಸ್ತ್ರ, ಗಣಿತ ಶಾಸ್ತ್ರ, ಭೌತಶಾಸ್ತ್ರ, ಅರ್ಥಶಾಸ್ತ್ರ ಸೇರಿದಂತೆ ಅನೇಕ ವಿಷಯಗಳಿಗೆ ಕಾಯಂ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ. ಇದೇ ಸಮಸ್ಯೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲೂ ಇದ್ದು ನೂರಾರು ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನ ತ್ರಿಶಂಕುಸ್ಥಿತಿಯಲ್ಲಿದ್ದು ಕೂಡಲೆ ಸರ್ಕಾರ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು(ರಾಜ್ಯಾದ್ಯಂತ) ಸ್ಪಷ್ಟ ಆದೇಶ ನೀಡಬೇಕೆಂದು ಪ್ರಾಂಶುಪಾಲರು, ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಉಪನ್ಯಾಸಕರೇ ಇಲ್ಲ :  ಕೋವಿಡ್‌-19ನಿಂದಾಗಿ ಈಗ ಪ್ರಥಮ, ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತಗರತಿಗಳು ನಡೆಯುತ್ತಿವೆ. ಇನ್ನುಳಿದ ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿಯೇತರಗತಿಗಳುನಡೆಯುತ್ತಿವೆ.ಆದರೆಇಲ್ಲಿಉಪನ್ಯಾಸಕರ ಕೊರತೆ ಎದ್ದುಕಾಣುತ್ತಿದ್ದು ಬರುವ ಸುಮಾರು150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಬ್ಬರೇ ಉಪನ್ಯಾಸಕರು. ಬಿಸಿಎ ವಿಭಾಗದ ಲ್ಲಂತೂ 100 ವಿದ್ಯಾರ್ಥಿಗಳಿಗೆ ಇಬ್ಬರು ಉಪನ್ಯಾಸಕರಿದ್ದು, ಅದರಲ್ಲಿ ಒಬ್ಬರು ಬೇರೆಡೆಗೆ ವರ್ಗಾವಣೆಯಾಗಿದ್ದಾರೆ. ಇಷ್ಟು ವಿದ್ಯಾರ್ಥಿಗಳಿಗೇ ಒಬ್ಬರೇ ಉಪನ್ಯಾಸಕರು

ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಹಾಗೂ ಆಫ್ಲೈನ್‌ ತರಗತಿಗಳು ಪ್ರಾರಂಭವಾಗಿವೆ. ಆದರೆ ಉಪನ್ಯಾಸಕರ ಕೊರತೆಯಿಂದ ಪರಿಪೂರ್ಣ ಬೋಧನೆಗೆ ತೀವ್ರ ತೊಂದರೆಯಾಗು ತ್ತಿದೆ. ಪರೀಕ್ಷೆ ಯು ಸಮೀಪಿಸುತ್ತಿರುವಕಾರಣವಿದ್ಯಾರ್ಥಿಗಳಭವಿಷ್ಯಕ್ಕೆ ಮಾರಕವಾಗಲಿ ದೆಯೋಎಂಬಭಯಕಾಡುತ್ತಿದೆ. ಪ್ರೊ.ಕೆ.ಎಂ.ರಾಜಣ್ಣ, ಪ್ರಾಂಶುಪಾಲ, ಸ. ಪ್ರಥಮ ದರ್ಜೆ ಕಾಲೇಜು, ತಿಪಟೂರು

ಪರೀಕ್ಷೆಗೆ ಕೇವಲ ಎರಡು ತಿಂಗಳಿದೆ. ಆದರೆ ನಮಗೆ ಸರಿಯಾದ ಪಠ್ಯಕ್ರಮಗಳು ನಡೆದಿಲ್ಲ. ಉಪನ್ಯಾಸಕರಿಲ್ಲದೆ ನಾವು ತರಗತಿಗಳಿಗೆ ಸುಮ್ಮನೆ ಬಂದು ಹೋಗುತ್ತಿದ್ದೇವೆ.ದೂರದಊರುಗಳಿಂದ ಬರುವ ನಮಗೆ ತರಗತಿಗಳನ್ನುಯಾರು ತೆಗೆದುಕೊಳ್ಳುತ್ತಿಲ್ಲ. ಲ್ಯಾಬ್‌, ತರಗತಿಗಳು ನಡೆಯುತ್ತಿಲ್ಲ. ಹೀಗೆ ಆದರೆ ಪರೀಕ್ಷೆ ಬರೆಯುವುದು ಹೇಗೆ. ಸ್ನೇಹ, ಅಂತಿಮ ವರ್ಷದ ವಿದ್ಯಾರ್ಥಿನಿ

 

-ಬಿ. ರಂಗಸ್ವಾಮಿ, ತಿಪಟೂರು

ಟಾಪ್ ನ್ಯೂಸ್

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನು ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-DYSP

ಮಧುಗಿರಿ: ಕಚೇರಿಯಲ್ಲೇ DYSP ರಾಸಲೀಲೆ!!: ವಿಡಿಯೋ ಸೆರೆ

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

Minister ಸೋಮಣ್ಣ, ಸಿ.ಎಸ್‌. ಹೆಸರಲ್ಲಿ ನಕಲಿ ಸಹಿ, ಲೆಟರ್‌ಹೆಡ್‌: ಬಂಧನ

10-koratagere

Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು

3-kunigal

Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ‌ ಸಾವು

2-kunigal

Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.