ಬಿ. ಆರ್ ಅಂಬೇಡ್ಕರ್ ಗೆ ಅಗೌರವ: ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ಪ್ರತಿಭಟನೆ
Team Udayavani, Jan 31, 2022, 6:55 PM IST
ಕೊರಟಗೆರೆ: ವಕೀಲರ ಸಂಘದಿಂದ ಸಾಮೂಹಿಕವಾಗಿ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರಿಂದ ಬಾಬಾ ಸಾಹೇಬ್ ಡಾ. ಬಿ. ಆರ್ ಅಂಬೇಡ್ಕರ್ ರವರಿಗೆ ಅಗೌರವರ ತೋರಿಸಿದ್ದಾರೆ ಎಂದು ಸೋಮವಾರ ಒಂದು ದಿನದ ಮಟ್ಟಿಗೆ ಯಾವ ವಕೀಲರು ಕಾರ್ಯ ಕಲಾಪಗಳಿಗೆ ಹಾಜರಾಗದೆ ಕಾರ್ಯ ಕಲಾಪವನ್ನು ಬಹಿಷ್ಕರಿಸಿದರು.
ವಕೀಲರ ಸಂಘದ ಉಪಾದ್ಯಕ್ಷ ಟಿ. ಕೃಷ್ಣಮೂರ್ತಿ ಮಾತನಾಡಿ ಜನವರಿ 26 ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರು ಬಾಬಾ ಸಾಹೇಬರ ಭಾವಚಿತ್ರ ತೆಗೆಸಿ ಒಂದು ಗಂಟೆ ತಡವಾಗಿ ಧ್ವಜಾರೋಹಣ ಮಾಡಿದ್ದಾರೆ ಇಂದು ಸಂವಿಧಾನಕ್ಕೆ ಅಗೌರವ ತೋರುವಂತಾಗುತ್ತದೆ ಉಚ್ಚ ನ್ಯಾಯಾಲಯದ ಆದೇಶ ಏನೇ ಇರಲಿ ವಿಶ್ವ ನಾಯಕನಿಗೆ ಅಗೌರವ ತೋರಿಸಿರುವುದು ನಮ್ಮ ರಾಷ್ಟ್ರವೇ ತಲೆತಗ್ಗಿಸುವಂತಾಗಿದೆ.
ಪುಟ್ಟರಾಜಯ್ಯ ಮಾತನಾಡಿ ಸಂವಿಧಾನದ ಅಡಿಯಲ್ಲಿ ಮಲ್ಲಿಕಾರ್ಜುನ ಗೌಡರವರು ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ಡಾ. ಬಿ. ಆರ್ ಅಂಬೇಡ್ಕರ್ ರಚಿಸಿ ದೇಶಕ್ಕೆ ನೀಡಿದಂತಹ ಸಂವಿಧಾನದಡಿ ಬರುವಂತಹ ನ್ಯಾಯಾಂಗದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಭಾವುಕರಾದರು.
ಪ್ರತಿಭಟನಾ ಕಾರ್ಯಕ್ರಮದಲ್ಲಿ ವಕೀಲ ಸಂಘದ ಜಂಟಿ ಕಾರ್ಯದರ್ಶಿ ಎಮ್.ಎಲ್. ಸಂತೋಷ್, ವಕೀಲರುಗಳಾದ ನಾಗೇಂದ್ರಪ್ಪ, ರಾಮಚಂದ್ರಯ್ಯ, ಹುಸೇನ್ ಪಾಷ, ತಿಮ್ಮರಾಜು, ಜಿ.ಎಮ್ ಕೃಷ್ಣಮೂರ್ತಿ, ನರಸಿಂಹರಾಜು, ಕೃಷ್ಣಪ್ಪ, ಮಂಜುನಾಥ್, ಶ್ರೀಮತಿ ಸಂತೋಷ್ ಲಕ್ಷೀ, ಹೆ.ಆರ್ ರಾಮಚಂದ್ರಯ್ಯ,ಶಿವಕುಮಾರ್,ಕ್ಯಾಶವಾರ ನಾಗರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.