ಅಲೆಮಾರಿ, ಬುಡಕಟ್ಟು ಸಮುದಾಯ ಸಬಲವಾಗಲಿ
Team Udayavani, Oct 20, 2020, 4:34 PM IST
ಪಾವಗಡ: ಅಲೆಮಾರಿ ಬುಡಕಟ್ಟು ಜನರನ್ನು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಅಲೆಮಾರಿ ಬುಡಕಟ್ಟು ಮಹಾಸಭಾ ಸ್ಥಾಪನೆಯಾಗಿದೆ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್‌ಕುಮಾರ್‌ಕೊತ್ತಗೆರೆ ತಿಳಿಸಿದರು.
ಅಖೀಲ ಕರ್ನಾಟಕ ಕುಳುವ ಮಹಾಸಭಾದಿಂದ ಪಟ್ಟಣದ ನೂತನ ಡಾ.ಬಿ.ಆರ್.ಅಂಬೇಡ್ಕರ್ ಭವನ ದಲ್ಲಿ ಹಮ್ಮಿಕೊಂಡಿದ್ದ ಅಲೆಮಾರಿ, ಕೊರಚ, ಕುಂಚಿ ಕೊರವ,ಎರಕುಲಸಮುದಾಯಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯಾದ್ಯಂತ ಮುಂಬರುವ ಜಿಲ್ಲಾ, ತಾಲೂಕು, ಗ್ರಾಪಂಗಳ ಚುನಾವಣೆಗಳ ಮೀಸಲು ಕ್ಷೇತ್ರಗಳಲ್ಲಿ ಎಸ್‌ಸಿ, ಎಸ್‌ಟಿ ಅಲೆಮಾರಿಗಳಿಗೆ ಎಲ್ಲಾ ರಾಜಕೀಯ ಪಕ್ಷಗಳು ಆದ್ಯತೆ ಮೇರೆಗೆ ಟಿಕೆಟ್‌ನೀಡಬೇಕು. ರಾಜ್ಯಾದ್ಯಂತ ಸುಮಾರು 25 ಲಕ್ಷ ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ, ಪಂಗಡದ ಅಲೆಮಾರಿ ಸಮುದಾಯಗಳಾದ ಹಂದಿಜೋಗಿ, ಶಿಳ್ಳೆಕ್ಯಾತ ,ಸುಡುಗಾಡು -ಸಿದ್ದ, ಕೊರಮ-ಕೊರಚ (ಕುಳುವ),ಬುಡ್ಡ ಜಂಗಮ ,ಹಕ್ಕಿಪಿಕ್ಕಿ, ಮೇದ,ದೊಂಬರ, ಚನ್ನ ದಾಸರು, ಮಾಂಗ್ ಗಾರುಡಿ , ದಕ್ಕಲಿಗ, ಸಿಂಧೋಳ್ಳು, ಹರಣಿಶಿಕಾರಿ ಹೀಗೆ ಒಟ್ಟು74 ಸಮುದಾಯಗಳು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಿಂದ ವಂಚಿತರಾಗಿದ್ದಾರೆಂದರು.
ಅಲೆಮಾರಿ ಬುಡಕಟ್ಟು ಮಹಾಸಭಾ ರಾಜ್ಯ ಖಜಾಂಚಿ ಆದರ್ಶ ಯಲ್ಲಪ್ಪ, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಬಳಕೆಯಾಗದೇ ಉಳಿದಿರುವ 19 ಸಾವಿರ ಕೋಟಿ ಹಣವನ್ನು ಇತರೆ ಇಲಾಖೆಗೆವರ್ಗಾಯಿಸಿದ್ದು ಈ ಹಣದಲ್ಲಿ ಅಲೆಮಾರಿ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ನಿಗಮ ಮಂಡಳಿ ಸ್ಥಾಪಿಸಬಹುದಾಗಿತ್ತು ಎಂದು ಹೇಳಿದರು.
ಕರ್ನಾಟಕ ಸಿಳ್ಳೇಕ್ಯಾತನ್ ಜನಾಂಗ ಅಭಿವೃದ್ಧಿ ವೇದಿಕೆ ರಾಜ್ಯಾಧ್ಯಕ್ಷರಾದ ಮಂಜುನಾಥ್ ದಾಯತ್ಕರ್, ರಾಜ್ಯ ಸರ್ಕಾರ ಅಲೆಮಾರಿ, ಅರೆ ಅಲೆಮಾರಿಹಾಗೂ ಬುಡಕಟ್ಟು ಜನರ ಏಳ್ಗೆಗೆ ಅಭಿವೃದ್ಧಿ ಕೋಶವೊಂದನ್ನು ಸ್ಥಾಪಿಸಿದೆ.ಈಮೂಲಕ ಮನೆ,ನಿವೇಶನ, ಸಾಲ ಸೌಲಭ್ಯ, ಸ್ವಯಂ ಉದೋÂಗ ಇತರೆ ಮೂಲ ಸವಲತ್ತುಗಳು ದೊರೆಯಲಿವೆ ಎಂದರು.
ಅಖೀಲ ಕರ್ನಾಟಕ ಕುಳುವ ಮಹಾಸಂಘ ರಾಜ್ಯಾಧ್ಯಕ್ಷರಾದ ಎಂ.ಆನಂದಪ್ಪ, ಅಲೆಮಾರಿ ಬುಡಕಟ್ಟು ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ಭೀಮಪುತ್ರಿ ನಾಗಮ್ಮ, ಸುಗುಣ ಅಶ್ವತ್ಥ, ಆನಂದ್ ಕುಮಾರ್ ಏಕಲವ್ಯ, ಹಂದಿಜೋಗಿ ಸಮಾಜದ ರಾಜ್ಯ ಕಾರ್ಯಾಧ್ಯಕ್ಷರಾದ ವೆಂಕಟರಮಣಯ್ಯ, ಅಖೀಲ ಕರ್ನಾಟಕ ಚನ್ನದಾಸ (ಪ.ಜಾ)ಸಂಘದ ರಾಜ್ಯ ಉಪಾಧ್ಯಕ್ಷರಾದ ಬಸವರಾಜುನಾರಯಕರ್, ಕುಳುವ ಸಮಾಜ ರಾಜ್ಯ ಮುಖಂಡರಾದ ಶ್ರೀನಿವಾಸು ಆಡುಗೋಡು, ರವಿಕುಮಾರ್ ಮಾತನಾಡಿದರು.
ನೂತನ ಪದಾಧಿಕಾಗಳು: ಅಖೀಲ ಕರ್ನಾಟಕ ಕುಳುವ ಮಹಾಸಂಘದ ಪಾವಗಡ ತಾಲೂಕುಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮುತ್ಯಾಲಪ್ಪ, ಅಧ್ಯಕ್ಷರಾಗಿ ವಿದ್ಯುತ್ ಇಲಾಖೆ ಕೆ.ಗಂಗಪ್ಪ, ಕಾರ್ಯದರ್ಶಿಯಾಗಿ ಡಾನ್ ವೀರಭದ್ರಪ್ಪ, ಕಾರ್ಯಾಧ್ಯಕ್ಷರಾಗಿ ಹನುಮಂತರಾಯಪ್ಪ, ಖಜಾಂಚಿಯಾಗಿ ನಾಗರಾಜು, ಜಂಟಿ ಖಜಾಂಚಿಯಾಗಿ ಲಕ್ಷ್ಮೀ ದೇವಮ್ಮ, ಉಪಾಧ್ಯಕ್ಷರಾಗಿ ನಾಗರಾಜು, ಬಿ.ಪಾಂಡಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಸುರೇಶ್, ಮಂಜುನಾಥ್ ಆಯ್ಕೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!
Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ
Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು
Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!
MUST WATCH
ಹೊಸ ಸೇರ್ಪಡೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.