ದೇಸಿಯ ಹಳ್ಳಿಕಾರ್‌ ತಳಿಗೆ ಹೆಚ್ಚಿದ ಬೇಡಿಕೆ


Team Udayavani, Feb 23, 2022, 2:51 PM IST

ದೇಸಿಯ ಹಳ್ಳಿಕಾರ್‌ ತಳಿಗೆ ಹೆಚ್ಚಿದ ಬೇಡಿಕೆ

ಕೊರೊನಾ ಮಹಾಮಾರಿಯಿಂದ ಜನ ಸಂಕಷ್ಟ ಅನುಭವಿಸಿ ಈಗ ಚೇತರಿಸಿಕೊಳ್ಳುತ್ತಾ ಇದ್ದಾರೆ. ಜಾತ್ರೆ, ಉತ್ಸವ ಎಂದಿನಂತೆ ಪ್ರಾರಂಭವಾಗುತ್ತಿದ್ದು, ರಾಜ್ಯದಲ್ಲಿ ಪ್ರಸಿದ್ಧ ಜಾನುವಾರು ಜಾತ್ರೆಯಾಗಿರುವ ಶ್ರೀ ಸಿದ್ಧಗಂಗಾ ಜಾತ್ರೆಯಲ್ಲಿ ಕೊರೊನಾ ನಡುವೆಯೂ ರಾಸುಗಳು ಸೇರಲಾರಂಭಿಸಿವೆ. ಜಾತ್ರೆಯಲ್ಲಿ ಮಠದಿಂದ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಮನರಂಜನೆಗಾಗಿ ಕೃಷಿ ಮತ್ತು ವಿಜ್ಞಾನ ವಸ್ತುಪ್ರದರ್ಶನವೂ ಆರಂಭಗೊಂಡಿದ್ದು, ಮಠದಲ್ಲಿ ಬರುವ ಎಲ್ಲ ಭಕ್ತರಿಗೆ, ರೈತರಿಗೆ ದಾಸೋಹ ನಿರಂತರವಾಗಿ ನಡೆಯುತ್ತಲಿದೆ.

ತುಮಕೂರು: ಸೀಮೆ ಹಸುಗಳ ಭರಾಟೆಯ ನಡುವೆ ನಮ್ಮ ದೇಸಿಯ ತಳಿಯ ಹಸು, ಎತ್ತುಗಳುಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಒಂದೇ ಬಾರಿ ಸಾವಿರಾರು ದೇಸಿಯ ತಳಿಯ ಹಸು, ಎತ್ತುಗಳ ಜಾತ್ರೆಶ್ರೀ ಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿದ್ದು, ಮಠದ ಸುತ್ತ ಎಲ್ಲಿ ನೋಡಿದರೂ ಹಸು, ಎತ್ತುಗಳ ನಡುವೆ ರೈತರ ಸಂಭ್ರಮ ಮನೆ ಮಾಡಿದೆ.

ತ್ರಿವಿಧ ದಾಸೋಹ ಕ್ಷೇತ್ರ ಸಿದ್ಧಗಂಗೆಯಲ್ಲಿ ಈಗಜಾತ್ರಾ ಸಂಭ್ರಮ ಆರಂಭವಾಗಿದೆ. ಮಹಾಶಿವರಾತ್ರಿಪ್ರಯುಕ್ತ 10 ದಿನಗಳ ಕಾಲ ನಡೆಯುವ ಶ್ರೀಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆಯಲ್ಲಿ ಎತ್ತುಗಳ ಪರಿಷೆವಿಶೇಷವಾಗಿದೆ. ರಾಜ್ಯವೂ ಸೇರಿದಂತೆ ನೆರೆಯ ರಾಜ್ಯಗಳ ರೈತರು ತಮ್ಮ ರಾಸುಗಳನ್ನು ಮಾರುವ ಹಾಗೂ ಕೊಳ್ಳುವ ಪ್ರಕ್ರಿಯೆಯಲ್ಲಿ ತಲ್ಲೀನರಾಗಿದ್ದಾರೆ.

ನಾಡಿನ ಪ್ರಸಿದ್ಧ ಜಾತ್ರೆ ಎಂದೇ ಹೆಸರಾಗಿರುವ ಶ್ರೀಕ್ಷೇತ್ರ ಸಿದ್ಧಗಂಗೆಯಲ್ಲಿ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಯವರ ಮಹಾಶಿವರಾತ್ರಿಯ ಜಾತ್ರಾ ಮಹೋತ್ಸವಆರಂಭವಾಗಿದ್ದು, 1905ರಲ್ಲಿ ಕ್ಷೇತ್ರದ ಶ್ರೀ ಉದ್ಧಾನ ಶಿವಯೋಗಿಗಳು ಪ್ರಾರಂಭ ಮಾಡಿದರು. ಅಂದಿನಿಂದಲೇ ಶ್ರೀ ಕ್ಷೇತ್ರದಲ್ಲಿ ದನಗಳ ಜಾತ್ರೆ ನಡೆಯುತ್ತಲಿದೆ. ಪ್ರತಿವರ್ಷವೂ ಜಾತ್ರೆ ತನ್ನದೇ ಆದ ವೈಶಿಷ್ಟ್ಯ ಗಳೊಂದಿಗೆ ನಾಡಿನಲ್ಲಿ ಪ್ರಸಿದ್ಧಿ ಪಡೆಯುತ್ತಲಿದೆ. ಶ್ರೀಕ್ಷೇತ್ರದ ಹಿರಿಯ ಶ್ರೀಗಳಾಗಿದ್ದ ಲಿಂ.ಡಾ.ಶ್ರೀಶಿವಕುಮಾರ ಸ್ವಾಮೀಜಿ ತೋರಿದ ಹಾದಿಯಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿಹಾಗೂ ಆಡಳಿತ ವರ್ಗ ಜಾತ್ರೆಗೆ ಬರುವ ರಾಸುಗಳಿಗೆರೈತರಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿದ್ದಾರೆ.

ವಿವಿಧ ಜಿಲ್ಲೆಗಳಿಂದ ರೈತರ ಆಗಮನ: ಜಾತ್ರೆಗೆ ಮೊದಲೇ ರಾಜ್ಯ ಹಾಗೂ ಹೊರ ರಾಜ್ಯಗಳಿಂದಅಪಾರ ಸಂಖ್ಯೆಯಲ್ಲಿ ರೈತರು ತಮ್ಮ ಜಾನುವಾರುಗಳಸಮೇತವಾಗಿ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠಕ್ಕೆ ಬಂದುಇಲ್ಲಿ ತಮ್ಮ ರಾಸುಗಳ ಮಾರಾಟ ಹಾಗೂ ತಾವುಇಷ್ಟಪಡುವ ರಾಸುಗಳ ಕೊಡು, ಕೊಳ್ಳುವಿಕೆ ಪ್ರಕ್ರಿಯೆಗಳು ನಡೆಯುತ್ತವೆ. ಈ ರಾಸುಗಳ ಜಾತ್ರೆಗೆ ರಾಮನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಿತ್ರ ದುರ್ಗ ಜಿಲ್ಲೆಗಳಲ್ಲದೆ ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ, ತಮಿಳುನಾಡು ಮೊದಲಾದ ಕಡೆಗಳಿಂದಲೂ ಈ ಎತ್ತಿನ ಜಾತ್ರೆಯಲ್ಲಿ ಜನರು ಬರುವುದು ಈ ಹಿಂದಿನಿಂದಲೂ ರೂಢಿಯಲ್ಲಿದೆ. ಜಾತ್ರೆಯಲ್ಲಿ ರಾಸುಗಳನ್ನುಕೊಳ್ಳಲು ಮತ್ತು ಮಾರಲು ಉತ್ತಮ ಅವಕಾಶವಿದ್ದು, ಇದಕ್ಕಾಗಿಯೇ ರೈತರು ತಾವು ಸಾಕಿದ ಜಾನುವಾರುಮಾರಲು ಹಾಗೂ ತಮಗೆ ಇಷ್ಟಬಂದ ಜಾನುವಾರು ಕೊಳ್ಳಲು ಆಗಮಿಸುತ್ತಾರೆ.

ಎಲ್ಲರಿಗೂ ಪ್ರಸಾದ ವ್ಯವಸ್ಥೆ: ಆಂಧ್ರ ಗಡಿಭಾಗದ ಅಗಳಿ, ಗುಡಿಬಂಡೆ, ರಾಜ್ಯದ ದಾವಣಗೆರೆ,ಚಿತ್ರದುರ್ಗ, ಗದಗ, ಹರಿಹರ, ಬಿಜಾಪುರ, ಬಳ್ಳಾರಿ,ರಾಮನಗರ, ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಧಿಕಸಂಖ್ಯೆಯಲ್ಲಿ ರೈತರು ತಮ್ಮ ಜಾನುವಾರುಗಳೊಡನೆಆಗಮಿಸುವುದರಿಂದ ಇಡೀ ಮಠದ ಸುತ್ತಮುತ್ತಜಾನುವಾರು ಕಂಡು ಬರುತ್ತಿವೆ. ಸುಡು ಬಿಸಿಲ ಬೇಗೆಏರುತ್ತಿರುವಂತೆಯೇ ಜಾನುವಾರುಗಳಿಗೆ ನೆರಳು,ವಿದ್ಯುತ್‌, ಕುಡಿಯುವ ನೀರು, ಆರೋಗ್ಯ ತಪಾಸಣೆ ಹಾಗೂ ಸಂಜೆಯ ವೇಳೆ ಮನರಂಜನೆ, ಕೃಷಿ ಮತ್ತುಕೈಗಾರಿಕಾ ವಸ್ತುಪ್ರದರ್ಶನ ಹಾಗೂ ಜಾತ್ರೆಗೆ ಬರುವ ಎಲ್ಲರಿಗೂ ಪ್ರಸಾದ ವ್ಯವಸ್ಥೆಯನ್ನು ಶ್ರೀಮಠ ಕಲ್ಪಿಸಿದೆ. 50 ಸಾವಿರದಿಂದ 10 ಲಕ್ಷ ರೂ. ಬೆಲೆ ಬಾಳುವ ರಾಸುಗಳು ಇಲ್ಲಿ ಸೇರುವುದೇ ವಿಶೇಷ.

ಜಾತ್ರೆಗೆ ಮೆರಗು: ಒಂದೊಂದು ಜೋಡಿ ರಾಸು ಗಳನ್ನು ಕೊಳ್ಳಲು ರೈತರು ಬಹುದೂರದಿಂದ ಬರುತ್ತಾರೆ. ಉತ್ತಮ ರಾಸುಗಳಿಗೆ ಬಹುಮಾನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಇದೆಲ್ಲದರ ಜೊತೆಗೆ ಸುರಕ್ಷತೆಯದೃಷ್ಟಿಯಿಂದ ಶ್ರೀ ಸಿದ್ಧಗಂಗಾ ಜಾತ್ರೆ ರೈತರಿಗೆ ಹೆಚ್ಚುಅನುಕೂಲಕರವಾದ ಜಾತ್ರೆಯಾಗಿದೆ. ದೇಸಿಯ ತಳಿಕಣ್ಮರೆಯಾಗುತ್ತಿರುವ ಈ ದಿನಗಳಲ್ಲಿ ಕೊರೊನಾಕಾಲದಲ್ಲಿಯೂ ಅಧಿಕ ಸಂಖ್ಯೆಯಲ್ಲಿ ಜಾನುವಾರು ಸೇರಿ ಈ ದನಗಳ ಜಾತ್ರೆಗೆ ಮೆರಗು ನೀಡಿವೆ.

20 ಸಾವಿರದಿಂದ 20 ಲಕ್ಷ ರೂ. ಮೌಲ್ಯದ ರಾಸುಗಳು :  ರಾಸುಗಳ ಜಾತ್ರೆಗೆ ಈ ಬಾರಿ ಹಳ್ಳಿಕಾರ್‌,ಅಮೃತ್‌ ಮಹಲ್‌, ಕಿಲಾರಿ, ಗಿಡ್ಡ ಹೋರಿ,ನಾಟಿ ಹಸು, ಮಲೆನಾಡ ಗಿಡ್ಡ, ಕೃಷ್ಣ ವ್ಯಾಲಿಸೇರಿದಂತೆ ವಿವಿಧ ತಳಿಗಳ ರಾಸುಗಳುರಾಜ್ಯದ ವಿವಿಧ ಮೂಲೆಗಳಿಂದ ಬಂದುಸೇರಿದ್ದು, ಇಷ್ಟೂ ತಳಿಗಳನ್ನು ಒಂದೇ ಕಡೆ ನೋಡುವ ಭಾಗ್ಯ ಶ್ರೀಕ್ಷೇತ್ರದಲ್ಲಿ ದೊರೆತಿದೆ.ಈ ಬಾರಿ ಜಾತ್ರೆಯಲ್ಲಿ ಈಗ 8 ಸಾವಿರ ದನಪಾಲ್ಗೊಂಡಿದ್ದು, 20 ಸಾವಿರದಿಂದ 20 ಲಕ್ಷರೂ.ವರೆಗಿನ ರಾಸು, ಹೋರಿ, ಹಸುಗಳುಬಂದು ಸೇರಿವೆ. ಈಗಾಗಲೇ ದನಗಳ ಜಾತ್ರೆಯಲ್ಲಿ ರಾಸುಗಳ ಮಾರಾಟ ಮತ್ತು ಖರೀದಿ ಬಲು ಜೋರಾಗಿ ನಡೆದಿದ್ದು,ರೈತರು ರಾಸುಗಳ ಗುಣಗಾನ ಹಾಗೂ ರಾಸುಗಳಲ್ಲಿ ಇರುವ ತಪ್ಪು ಹುಡುಕಿ ಅಲ್ಲಗಳೆಯುವಿಕೆಮಾಡುತ್ತಿರುವುದು ಸಹ ಸಾಮಾನ್ಯವಾಗಿದೆ. ತಮಗೆ ಗಿಟ್ಟಿದ ದರದಲ್ಲಿ ರೈತರು ರಾಸು ಖರೀದಿಸಿ ತಮ್ಮ ಊರಿಗೆ ಟೆಂಪೋ ಸೇರಿದಂತೆ ಸರಕು ಸಾಗಣೆ ವಾಹನಗಳಲ್ಲಿ ಕೊಂಡೊಯ್ಯುತ್ತಿರುವ ದೃಶ್ಯ ಕಂಡು ಬರುತ್ತಿವೆ.

ಸೀಮೆ ಹಸು ಸಾಕಲು ಜನ ಮುಂದಾಗಿರುವ ಹಿನ್ನೆಲೆ, ನಮ್ಮ ನಾಟಿ ಹಸುಗಳು, ಎತ್ತುಗಳ ಸಂಖ್ಯೆ ಕಡಿಮೆ ಆಗುತ್ತಿದೆ.ಈ ಭಾಗದಲ್ಲಿ ಹಳ್ಳಿಕಾರ್‌ ತಳಿ ಬಹು ಅಪರೂಪದ ತಳಿ. ಈ ಸಂತತಿ ಉಳಿಯ ಬೇಕು. ನಾವು ಪ್ರತಿವರ್ಷ ನಮ್ಮ ತಂದೆಕಾಲದಿಂದಲೂ ಶ್ರೀಮಠದ ಜಾತ್ರೆಯಲ್ಲಿಎತ್ತುಗಳನ್ನು ಕಟ್ಟುತ್ತೇವೆ. ಇಲ್ಲಿ ಎತ್ತುಗಳನ್ನುಮಾರಾಟ ಮಾಡಿ ಬೇರೆ ಎತ್ತು ಕೊಂಡುಕೊಳ್ಳುತ್ತೇವೆ. ನಾವು ಸಾಕಿದ ಎತ್ತುಗಳಿಗೆ ಪ್ರತಿವರ್ಷ ಬಹುಮಾನ ಬಂದಿದೆ.ರಾಮಣ್ಣ, ರೈತರು, ಅಗಳಿ ಗ್ರಾಮ

ಶ್ರೀಮಠದಲ್ಲಿ ನಡೆಯುವ ಶ್ರೀಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆಯಅಂಗವಾಗಿ ದನಗಳ ಪರಿಷೆಯನ್ನು ಡಾ. ಶ್ರೀಶಿವಕುಮಾರ ಸ್ವಾಮೀಜಿ ಮಾರ್ಗದರ್ಶನ ದಲ್ಲಿನಡೆಸಿಕೊಂಡು ಬರುತಿತ್ತು. ಈಗ ಸಿದ್ಧಲಿಂಗಶ್ರೀಮುಂದುವರಿಸಿದ್ದಾರೆ. ಈ ವರ್ಷವೂ ಜಾತ್ರೆಗೆರಾಜ್ಯದ ವಿವಿಧ ಭಾಗ ಗಳಿಂದ ಸಾವಿರಾರುರಾಸುಗಳು ಬಂದಿವೆ. 8 ಲಕ್ಷ ರೂ. ಮೇಲ್ಪಟ್ಟಬೆಲೆ ಬಾಳುವ ರಾಸು ಈಗಾಗಲೇ ಬಂದಿವೆ.ಕಳೆದ ಮೂರು ದಿನಗಳಿಂದ ಹಲವುರಾಸುಗಳು ಬರುತ್ತಿವೆ. ಉತ್ತರ ಕರ್ನಾಟಕಭಾಗದ ಭೂಮಿ ಉಳುಮೆ ಮಾಡಲುಹಳ್ಳಿಕಾರ್‌ ತಳಿ ಎತ್ತು ಉತ್ತಮ ವೆಂದುಖರೀದಿಸಲು ಗುಲ್ಬರ್ಗಾ, ರಾಯ ಚೂರು ಭಾಗದಿಂದಲೂ ರೈತರು ಬರುತ್ತಿದ್ದಾರೆ.ಸಿದ್ದರಾಮಣ್ಣ, ರೈತರು

-ಚಿ.ನಿ. ಪುರುಷೋತ್ತಮ್‌

ಟಾಪ್ ನ್ಯೂಸ್

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

4-kunigal

Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

13-

Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.