ಪುರಸಭೆ ಅಧ್ಯಕ್ಷ ಗಾದಿ ತೆನೆ ಗೋ,ಕೈಗೋ?
ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಪ್ರಕಟ, ಪ.ಪಂಗಡಕ್ಕೆ ಅಧ್ಯಕ್ಷ, ಸಾಮಾನ್ಯ ಮಹಿಳೆಗೆ ಉಪಾಧ್ಯಕ್ಷ ಸ್ಥಾನ
Team Udayavani, Oct 11, 2020, 5:03 PM IST
ಮಧುಗಿರಿ: ರಾಜ್ಯ ಸರ್ಕಾರ ಬರೊಬ್ಬರಿ 2 ವರ್ಷಗಳ ನಂತರ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಪ್ರಕಟಿಸಿದ್ದು, ಮಧುಗಿರಿ ಪುರಸಭೆಗೆ 22 ವರ್ಷದ ನಂತರ ಪ.ಪಂಗಡಕ್ಕೆ ಅಧ್ಯಕ್ಷ ಹಾಗೂ ಸಾಮಾನ್ಯ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ದೊರತಿದೆ.
ಪ್ರಸ್ತುತ ಮಧುಗಿರಿ ಪುರಸಭೆಯಲ್ಲಿ ಜೆಡಿಎಸ್-ಕಾಂಗ್ರೆ ಸ್‌ನ ಸದಸ್ಯರು ಮಾತ್ರ ಆಯ್ಕೆಯಾಗಿದ್ದು, ಬಿಜೆಪಿ ನಗಣ್ಯವಾಗಿದೆ.ಈಬಾರಿ ಎಸ್ಟಿ ಸಮುದಾಯಕ್ಕೆ ಅಧ್ಯಕ್ಷಗಾದಿ ಮೀಸಲಾದ ಕಾರಣ ಜೆಡಿಎಸ್ ನಿಂದ ಗೆದ್ದಿರುವ ತಿಮ್ಮ ರಾಯಪ್ಪ ಅಧ್ಯಕ್ಷರಾಗುವುದು ಬಹು ತೇಕ ಖಚಿತವಾಗಿದೆ.ಪ.ಪಂಗಡಮಹಿಳೆಯೂಜೆಡಿಎಸ್ ಸದಸ್ಯರಾಗಿದ್ದು, ಯಾವ ಮೂಲದಲ್ಲಾದರೂ ಜೆಡಿಎಸ್ ಪುರ ಸಭೆಯ ಆಡಳಿತದ ಚುಕ್ಕಾಣಿ ಹಿಡಿಯುವುದು ಖಚಿತ.
ಕಾಂಗ್ರೆಸ್‌ನಲ್ಲಿ ತಿಮ್ಮರಾಯಪ್ಪ: ಜೆಡಿಎಸ್‌ನಿಂದ ಗೆದ್ದು ಬಂದಿರುವ ತಿಮ್ಮರಾಯಪ್ಪ ಸದ್ಯ ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿದ್ದು, ಇವರೊಂದಿಗೆ 3 ಸದಸ್ಯರು ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ. ಈ ಸನ್ನಿವೇಶದಿಂದ ಮೂಲ ಕಾಂಗ್ರೆಸ್ಸಿಗರಿಗೂ ಒಳಗೊಳಗೆ ಅಸಮಾಧಾನವಿದೆ. ಆದರೆ ಮಾಜಿ ಶಾಸಕ ಕೆ.ಎನ್.ರಾಜಣ್ಣನವರ ಮಾತಿಗೆ ಎಲ್ಲರೂ ಒಪ್ಪಬೇಕಾಗುತ್ತದೆ. ಇದರಿಂದಾಗಿ ಒಲ್ಲದ ಮನಸ್ಸಿನಲ್ಲೇ ತಿಮ್ಮರಾಯಪ್ಪರನ್ನು ಅಧ್ಯಕ್ಷರಾಗಿ ಮಾಡುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.
ಮೂರು ಬಾರಿ ಆಯ್ಕೆ: ತಿಮ್ಮರಾಯಪ್ಪ ಕೂಡ ಜನಾನುರಾಗಿಯಾಗಿದ್ದು, ಎಪಿಎಂಸಿ ಕೂಲಿಯಾಗಿದ್ದ ಇವರು ಇಂದು ಪುರಸಭೆಗೆ ಮೂರು ಬಾರಿ ಆಯ್ಕೆಯಾಗಿದ್ದು, ಟೌನ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ, ಎಪಿಎಂಸಿ ನಿರ್ದೇಶಕರಾಗಿ ಹಾಗೂ ತಾಲೂಕು ನಾಯಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿದ್ದು, ಈ ಬಾರಿ ಕೆಎನ್‌ಆರ್ ಕೃಪಾ ಕಾಟಾಕ್ಷದಿಂದ ಪಟ್ಟಣದ ಪ್ರಥಮ ಪ್ರಜೆಯಾಗುವ ಭರವಸೆಯಿದೆ.
ಸಂಸದರ ಬೆಂಬಲ: ಕಾಂಗ್ರೆಸ್ ಮೂಲಗಳ ಪ್ರಕಾರ ತಿಮ್ಮರಾಯಪ್ಪರ ಆಯ್ಕೆಯನ್ನುಖಚಿತ ಪಡಿಸಿಕೊಂಡೆ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಕರೆತಂದಿದ್ದು ಎನ್ನಲಾಗಿದೆ. ತಾಲೂಕಿನಲ್ಲಿ ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಪಾರುಪತ್ಯ ಸಾಧಿಸಿದ್ದು, ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಸೋತಿದೆ.ಆದರೆ ಈಗಲೂ ಕೆಎನ್‌ಆರ್ ಹಿಡಿತವೇ ಹೆಚ್ಚಾಗಿದ್ದು, ಆಡಳಿತರೂಢ ಸಂಸದರ ಬೆಂಬಲವೂ ಇದೆ.
ಜೆಡಿಎಸ್ ನಡೆ ನಿಗೂಢ: ಕಳೆದ ಪುರಸಭೆ ಚುನಾವಣೆಯಲ್ಲಿ 9 ಸ್ಥಾನ ಗಳಿಸಿದ್ದ ಜೆಡಿಎಸ್‌ನಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ಬಿರುಸು ಕಾಣಿಸುತ್ತಿಲ್ಲ. 9 ಸದಸ್ಯರಲ್ಲಿ ಕೆಎನ್‌ಆರ್ ಜೊತೆಗೆ ಈಗಾಗಲೇ ಮಂಜುನಾಥಾಚಾರ್, ಲಾಲಪೇಟೆ ಮಂಜುನಾಥ್, ತಿಮ್ಮರಾಯಪ್ಪ, ಪಾರ್ವತಮ್ಮ, ಹಾಗೂ ಜೆಡಿಎಸ್‌ನ ಮೂಲದವರೇ ಆದ ಆಸಿಯಾಬಾನು ಕಾಂಗ್ರೆಸ್ ನಾಯಕರೊಂದಿಗೆ ಕಾಣಿಸಿಕೊಂಡಿದ್ದಾರೆ. ಇದರಿಂದಕಾಂಗ್ರೆಸ್ ಬಲ 18 ಕ್ಕೇರಲಿದೆ. ಆದರೆ ತಾಂತ್ರಿಕವಾಗಿ ತಿಮ್ಮರಾಯಪ್ಪ ಕೂಡ ಜೆಡಿಎಸ್ ಸದಸ್ಯರಾಗಿದ್ದು, ಅಧ್ಯಕ್ಷರಾದರೇ ಜೆಡಿಎಸ್ ಪಕ್ಷವೇ ಅಧಿಕಾರ ಪಡೆಯಲಿದೆ ಎಂಬ ವಿಶಾಲ ಮನೋಭಾವದಿಂದ ಎದುರು ನೋಡುತ್ತಿದ್ದಾರೆ.
ಉಪಾಧ್ಯಕ್ಷ ಸ್ಥಾನಆಕಾಂಕ್ಷಿಗಳು: ಅಧ್ಯಕ್ಷಗಾದಿ ಅವಧಿ ಪೂರ್ಣ ತಿಮ್ಮರಾಯಪ್ಪರ ಕೈಸೇರಲಿದ್ದು, ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಿಟ್ಟ ಕಾರಣ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್‌ನ ರಾಧಿಕಾ, ನಾಗಲತಾ, ನಾಫೀಯಾ ಬಾನು, ಪುಟ್ಟಮ್ಮ, ಗಿರಿಜಾ,ಶಾಹೀನಾ ಕೌಸರ್, ಶೋಭಾರಾಣಿ, ಗಾಯತ್ರಿ, ಸುಜಾತ, ಜೆಡಿಎಸ್‌ನ ಪಾರ್ವತಮ್ಮ, ಪಕ್ಷೇತರ ಸದಸ್ಯೆ ಆಸಿಯಾ ಬಾನು ರೇಸ್‌ನಲ್ಲಿದ್ದು, ಜಾತಿ ಲೆಕ್ಕಾಚಾರವು ಇಲ್ಲಿ ಕೆಲಸ ಮಾಡುತ್ತದೆ.
ತಿಮ್ಮರಾಯಪ್ಪ ನಮ್ಮಲ್ಲಿಯೂ ಅಧ್ಯಕ್ಷರಾಗುತ್ತಿದ್ದರು. 22 ವರ್ಷದ ನಂತರ ನಾಯಕ ಸಮುದಾಯಕ್ಕೆ ಈ ಅವಕಾಶ ಸಿಕ್ಕಿದಕಾರಣ ನಾನುಯಾವುದೇ ವಿರೋಧ ವ್ಯಕ್ತಪಡಿಸಲ್ಲ. ಪಟ್ಟಣದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವುದು ನನ್ನಕರ್ತವ್ಯ. ಪ್ರಸ್ತುತತಿಮ್ಮರಾಯಪ್ಪ ಈಗಲೂ ಜೆಡಿಎಸ್ ಸದಸ್ಯ ಎನ್ನುವುದು ಮಾತ್ರಕಟುಸತ್ಯ ಆಯ್ಕೆಯಾದಪಕ್ಷವನ್ನು ತೊರೆಯುವುದು ನಾಯಕರ ಗುಣ. ಆದರೆ ಎಲ್ಲವನ್ನು ಮತದಾರ ಗಮನಿಸುತ್ತಿದ್ದು,ಮುಂದೆ ಸರಿಯಾದ ನಿರ್ಧಾರಕೈಗೊಳ್ಳುತ್ತಾರೆ. –ಎಂ.ವಿ.ವೀರಭದ್ರಯ್ಯ, ಶಾಸಕರು
– ಮಧುಗಿರಿ ಸತೀಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.