ಮಧುಗಿರಿ : ಅರುಂಧತಿ ಸಿನಿಮಾ ನೋಡಿ ಮೈಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ಯುವಕ
ರಸ್ತೆಯಲ್ಲಿ ಬಿದ್ದು ಒದ್ದಾಡುತಿದ್ದವನನ್ನು ಆಸ್ಪತ್ರೆಗೆ ದಾಖಲಿಸಿದ ಕರವೇ ಅಧ್ಯಕ್ಷ
Team Udayavani, Aug 11, 2022, 12:45 PM IST
ಮಧುಗಿರಿ : ಅರುಂಧತಿ ಸಿನಿಮಾವನ್ನು ಹತ್ತಾರು ಬಾರಿ ನೋಡಿದ್ದ ಯುವಕನೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ನರಳಾಡುತ್ತಿದ್ದು ಕರವೇ ತಾಲೂಕು ಅಧ್ಯಕ್ಷ ಶಿವಕುಮಾರ್ ನೆರವಿನಿಂದ ಆಸ್ಪತ್ರೆ ಸೇರಿ ಬದುಕುಳಿದಿದ್ದಾನೆ.
ತಾಲೂಕಿನ ಗಿಡೈಯ್ಯನಪಾಳ್ಯದ ಸಿದ್ದಪ್ಪ ನವರ ಪುತ್ರ ರೇಣುಕಾ ಪ್ರಸಾದ್ (22) ಎಂಬ ಯುವಕನೇ ಈ ಕೆಲಸ ಮಾಡಿಕೊಂಡಿರುವುದು.
20 ಲೀ. ಪೆಟ್ರೋಲ್ ತಂದಿದ್ದ ಈತ ಅದನ್ನು ರೇಷ್ಮೆ ಶೆಡ್ ನಲ್ಲಿರಿಸಿ 1 ಲೀ. ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಬಳಿಕ ಬೆಂಕಿಯ ಉರಿ ತಾಳಲಾರದೆ ರಸ್ತೆಗೆ ಓಡಿ ಬಂದು ಕಿರುಚಾರಡುತ್ತಿದ್ದ. ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ತಾಲೂಕು ಕರವೇ ಅಧ್ಯಕ್ಷ ಶಿವಕುಮಾರ್ ಹಾಗೂ ಸ್ನೇಹಿತರು ತಕ್ಷಣ ತುರ್ತುವಾಹನಕ್ಕೆ ಕರೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ.
ನಡೆದ ಘಟನೆ ಕುರಿತು ಪೋಷಕರಿಗೆ ವಿಷಯ ತಿಳಿಸಲು ಸ್ಥಳಕ್ಕೆ ಬಂದ ವೇಳೆ ಮಾತನಾಡಿದ ಯುವಕನ ತಂದೆ ಸಿದ್ದಪ್ಪನವರು ಎಸ್ ಎಸ್ ಎಲ್ ಸಿ ಯಲ್ಲಿ ಟಾಪರ್ ಇದ್ದವನನ್ನು ತುಮಕೂರಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕಳಿಸಿದ್ದೆ. ಅಲ್ಲಿ ಹಾಸ್ಟೆಲ್ ನಲ್ಲಿದ್ದುಕೊಂಡು ಜೀವನ ಹಾಳು ಮಾಡಿಕೊಂಡಿದ್ದಾನೆ ಎಂದಿದ್ದಾರೆ. ಆ ಅರುಂದತಿ ಸಿನಿಮಾ ನೋಡಬೇಡ ಅಂತ ಹೇಳಿದರೂ ನೋಡಿ ಹೀಗೆ ಮಾಡಿಕೊಂಡಿಯಲ್ಲಾ ಎಂದು ತಂದೆ ಅಲವತ್ತುಕೊಂಡಿದ್ದಾರೆ…
ಯುವಕನನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಮದುವೆಗೆ ಬರುವಂತೆ ಅಲಂಕರಿಸಿದ ಕಾರುಗಳಲ್ಲಿ ಬಂದು ಐಟಿ ದಾಳಿ; 390 ಕೋಟಿ ರೂ. ಪತ್ತೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.