ವಿಜಯನಗರದಂತೆ ಮಧುಗಿರಿಯೂ ಜಿಲ್ಲೆಯಾಗಲೇಬೇಕು

ಸರ್ಕಾರಕ್ಕೆ ಶಾಸಕ ವೀರಭದ್ರಯ್ಯ ಒತ್ತಾಯ ಜಿಲ್ಲಾಕೇಂದ್ರದಿಂದ ನಿರುದ್ಯೋಗ ಸಮಸ್ಯೆ ನಿವಾರಣೆ

Team Udayavani, Dec 16, 2020, 5:37 PM IST

ವಿಜಯನಗರದಂತೆ ಮಧುಗಿರಿಯೂ ಜಿಲ್ಲೆಯಾಗಲೇಬೇಕು

ಮಧುಗಿರಿ: ರಾಜ್ಯದಲ್ಲಿ ವಿಜಯನಗರ ಜಿಲ್ಲೆಯಾದಂತೆ ಮಧುಗಿರಿಯೂ ಜಿಲ್ಲೆಯಾಗಬೇಕೆಂಬ ಕೂಗು ಹೆಚ್ಚಾಗಿದ್ದು,ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ ಸಹ ಸರ್ಕಾರಕ್ಕೆ ಅಂಕಿ ಅಂಶಗಳ ಸಮೇತ ಮಧುಗಿರಿ ಜಿಲ್ಲೆಗಾಗಿ ಒತ್ತಾಯಿಸಿದ್ದಾರೆ. ಈ ಬಗ್ಗೆ ಶಾಸಕರು ಉದಯವಾಣಿಗೆ ನೀಡಿರುವ ವಿಶೇಷ ಸಂದರ್ಶನ.

ಮಧುಗಿರಿಜಿಲ್ಲೆಯಾಗಲು ಅರ್ಹತೆಯಿದೆಯಾ?

ಖಂಡಿತಾ, ಮಹಾರಾಜರ-ಬ್ರಿಟಿಷರ ಕಾಲದಿಂದಲೂ ಉಪವಿಭಾಗವಿದ್ದು, ಮಾಸ್ತಿ ವೆಂಕಟೇಶ ಅಯ್ಯಾಂಗಾರ್‌ ಎಸಿ ಆಗಿದ್ದರು. ಇಂತಹಇತಿಹಾಸವುಳ್ಳ ಮಧುಗಿರಿ 4 ತಾಲೂಕುಗಳ ನ್ನೊಳಗೊಂಡ ಶೈಕ್ಷಣಿಕ ಉಪವಿಭಾಗದಲ್ಲಿ ಎಲ್ಲ ಇಲಾಖೆಗಳಿವೆ. ಶೈಕ್ಷಣಿಕ ಜಿಲ್ಲೆಯಾದರೂ ಆರ್ಥಿಕವಾಗಿಹಿಂದುಳಿದಿದ್ದು ಅಭಿವೃದ್ಧಿಗಾಗಿ ಕಂದಾಯ ಜಿಲ್ಲೆ ಆಗಲೇ ಬೇಕು.

ಮಧುಗಿರಿ ತಾಲೂಕುಯಾಕೆ ಜಿಲ್ಲೆಯಾಗಬೇಕು ?

4 ತಾಲೂಕುಗಳು ತೀವ್ರ ಬರಗಾಲದಿಂದ ಸಂಕಷ್ಟದಲ್ಲಿದ್ದು, ಪ್ರಮುಖ ಉದ್ಯೋಗ ಕೃಷಿಯಾಗಿದೆ. ಅಂತರ್ಜಲ ಕುಸಿದಿದ್ದು, ಉದ್ಯೋಗ ಅರಸಿ ಜನರುಗುಳೆ ಹೋಗಿದ್ದಾರೆ. ಜಿಲ್ಲೆಯಾದರೆ ಹೆಚ್ಚುವರಿಯಾಗಿ ಬರುವ ನೀರಾವರಿ ಯೋಜನೆಗಳು ಹಾಗೂ ಕೈಗಾರಿಕೆ ಗಳಿಂದಾಗಿ ಜನತೆ ಸ್ವಾವಲಂಭಿ ಬದುಕುಕಾಣಲಿದೆ.

 ಮಧುಗಿರಿ ಜಿಲ್ಲೆಯಾದರೆ ಮೂಲಭೂತ ಸೌಕರ್ಯ ಕೊರತೆಯಿದೆಯಾ?

ಪೊಲೀಸ್‌ ಎಸ್ಪಿ ಕಚೇರಿ ಹಾಗೂ ಡೀಸಿ ಕಚೇರಿ ಹೊರತುಪಡಿಸಿಎಲ್ಲ ಇಲಾಖೆಗಳ ಉಪವಿಭಾಗವಿದೆ.ಜಿಲ್ಲೆಯಾಗಿಘೋಷಣೆಯಾದರೆ ಸರ್ಕಾರಿ ಕಚೇರಿಗಳಿಗೆ ಕೊರತೆಯಿಲ್ಲ. ಆದರೆ ನೀರಾವರಿ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೆ ಮಾತ್ರ ಪೂರಕ ಅನುದಾನ ಒದಗಿಸಬೇಕಾಗುತ್ತದೆ.

ಜಿಲ್ಲಾಕೇಂದ್ರದಿಂದಕೃಷಿ-ಕೈಗಾರಿಕೆಗಳಿಗೇನುಲಾಭ?

ಜಿಲ್ಲಾ ಕೇಂದ್ರವಾದೊಡನೆ ಅನೇಕ ಅನುದಾನ ಹರಿದು ಬರಲಿದೆ. ನೀರಾವರಿ ಯೋಜನೆ ಹಾಗೂಕೈಗಾರಿಕೆಗಳ ಸ್ಥಾಪನೆಗೆ ಮುಂದಾಲಿದ್ದು, ಕೃಷಿಯಲ್ಲೂಉದ್ಯೋಗ, ಮಾರುಕಟ್ಟೆ ವಿಸ್ತರಣೆಯಾಗಲಿದ್ದು,ಕೈಗಾರಿಕಾ ವಲಯದ ಅನುಷ್ಠಾನ ಹಾಗೂ ಎತ್ತಿನಹೊಳೆಯಿಂದ ಅಂತರ್ಜಲ ವೃದ್ಧಿಸಿ ಕೃಷಿಹಾಗೂ ಕೃಷಿಯೇತರ ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಲಿದೆ.

 ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರದ ಸ್ಪಂದನೆ ಹೇಗಿದೆ ?

ಎಚ್ ಡಿಕೆ ಅವಧಿಯಲ್ಲಿ ತಂದ ಕಾಮಗಾರಿಗಳು ಮಾತ್ರ ನಡೆಯುತ್ತಿದ್ದು, ಸರ್ಕಾರಬದಲಾದ ಮೇಲೆಮಧುಗಿರಿಯ ಮೇಲೆ ಮಲತಾಯಿ ಧೋರಣೆ ತಾಳಲಾಗಿದೆ. ಒಳ್ಳೆಯ ಬೆಳವಣಿಗೆಯಲ್ಲ. ಸಮ್ಮಿಶ್ರ ಸರ್ಕಾರದ ಅನು ದಾನವನ್ನೂ ತಡೆಹಿಡಿದಿದ್ದು, ಕನಿಷ್ಠ ಅನುದಾನವನ್ನೂ ಸಹ ನೀಡದೆ ಅಭಿವೃದ್ಧಿಗೆ ಅಡ್ಡಗಾಲು ಹಾಕಲಾಗುತ್ತಿದೆ. ಈ ಬಗ್ಗೆ ಸದನದಲ್ಲಿ ಹೋರಾಟ ಮಾಡುವೆ.

ಯುಜಿಡಿ ಕಾಮಗಾರಿ ನಡೆಯುತ್ತಿದ್ದು, ಹೇಮಾವತಿಯಿಂದಹೆಚ್ಚುವರಿ ನೀರಿಗೆಯಾವ ಕ್ರಮಕೈಗೊಂಡಿದ್ದೀರಾ ?

ವರ್ಷಕ್ಕೆ 3 ಬಾರಿ ಸಿದ್ದಾಪುರ ಕೆರೆಗೆ ನೀರು ತಂದ ಶಾಸಕ ನಾನು. ಇದು ಇತಿಹಾಸವಾಗಿದ್ದು ಯಾರ ಮೇಲೂ ಗೂಬೆ ಕೂರಿಸಲ್ಲ. ಯುಜಿಡಿ ಅನುಷ್ಠಾನಕ್ಕೆ ಬೇಕಾಗುವ ಅಗತ್ಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು.

ಜಿಲ್ಲಾ ಕ್ಷೇತ್ರದ ಪ್ರಮುಖ ಸಂಪತ್ತು ಏನು?

ಮಧುಗಿರಿಯಲ್ಲಿವಿಶ್ವದ 2ನೇ ದೊಡ್ಡ ಏಕಶಿಲಾಬೆಟ್ಟವಿದ್ದು, ರಾಜರು,ಬ್ರಿಟಿಷರು ಆಳಿದ ಕೋಟೆ ಕೊತ್ತಲಗಳು ಅನಾವರಣ ಗೊಂಡಿವೆ. ಅಪರೂಪದ ಕೃಷ್ಣಮೃಗ ಅರಣ್ಯ ಧಾಮ, ಕರಡಿವನ್ಯಧಾಮ,ಮಹಾಪುರುಷರು ಕಟ್ಟಿದ ಪ್ರಸಿದ್ಧ ಹರಿಹರರಸಂಗಮದ ದೇಗುಲ. ಗೊರವನಹಳ್ಳಿಯಲಕ್ಷ್ಮೀ ದೇಗುಲ,ಸಿದ್ದರಬೆಟ್ಟ,ಮಿಡಿಗೇಶಿಹಾಗೂ ಪಾವಗಡದಬೆಟ್ಟಗಳು ಇತಿಹಾಸವನ್ನು ಸಾರುತ್ತವೆಹಾಗೂ ನೀರಾವರಿ ಯೋಜನೆ ಜಾರಿಯಾದರೆ ಬಂಗಾರ ಬೆಳೆಯುವಂತ ಮಣ್ಣು ಈ ಕ್ಷೇತ್ರದ ಬಹುಮುಖ್ಯ ಸಂಪತ್ತು. ಇದರಂತೆ ಪ್ರವಾಸಿ ತಾಣವಾದರೆ ಉದ್ಯೋಗ ಸೃಷ್ಟಿಯಾಗಲಿದೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KN-Rajaanna

Congress: ಹೈಕಮಾಂಡ್‌ ಒಪ್ಪಿಗೆ ಮೇರೆಗೆ ಶೋಷಿತರ ಸಮಾವೇಶ: ಕೆ.ಎನ್‌.ರಾಜಣ್ಣ

14-madhugiri

Madhugiri: 90 ಲಕ್ಷದ ಬೆಳೆ ವಿಮೆ ಹಣ ಅಕ್ರಮ ತನಿಖೆಗೆ ಆಗ್ರಹ

Tumkur: ಪರಂ, ರಾಜಣ್ಣ  ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್‌

Tumkur: ಪರಂ, ರಾಜಣ್ಣ  ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್‌

9

Koratagere: ಗುಡಿಸಲಿಗೆ ಆಕಸ್ಮಿಕ ಬೆಂ*ಕಿ; 4 ಮೇಕೆಗಳು ಸಜೀವ ದಹನ; ಇಬ್ಬರಿಗೆ ಗಾಯ

10

Koratagere: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಫಿ‌ಲ್ಲಿಂಗ್; ಓರ್ವ ಆರೋಪಿ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.