ಯೋಜನೆಗಳ ಸದುಪಯೋಗಿಸಿಕೊಳ್ಳಿ
Team Udayavani, Sep 24, 2020, 6:10 PM IST
ಸಾಂದರ್ಭಿಕ ಚಿತ್ರ
ಪಾವಗಡ: ಸರ್ಕಾರದಿಂದ ಕೃಷಿ ಇಲಾಖೆ ಮೂಲಕ ರೈತರಿಗಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಇದರಿಂದ ರೈತರ ಜೀವನಮಟ್ಟ ಸುಧಾರಿಸುತ್ತಿದೆ ಎಂದು ತಾಪಂ ಅಧ್ಯಕ್ಷೆ ಮಾಳಮ್ಮ ಸುಬ್ಬರಾಯಪ್ಪ ಹೇಳಿದರು.
ಪಟ್ಟಣದ ಕಸಬಾ ರೈತ ಸಂಪರ್ಕ ಕೇಂದ್ರ ಆವರಣದಲ್ಲಿ ಹಮ್ಮಿಕೊಂಡಿದ್ದ 2020-21ನೇ ಸಾಲಿನಲ್ಲಿರೈತರಿಗೆವಿವಿಧಪರಿಕರಗಳವಿತರಣೆಮತ್ತು ಸಸ್ಯ ಸಂರಕ್ಷಣೆ, ಬಿಜೋಪಚಾರ ಆಂದೋಲನ ತರಬೇತಿ ಕಾರ್ಯಕ್ರಮಲ್ಲಿ ಮಾತನಾಡಿ, ತಾಲೂಕಿನ ರೈತರಿಗೆ ಸರ್ಕಾರ ದಿಂದ ಇನ್ನೂ ಹೆಚ್ಚಿನ ಯೋಜನೆಗಳನ್ನು ತರಲು ಅಧಿಕಾರಿಗಳು, ಉನ್ನತ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ಕೆಪಿಸಿಸಿ ಸದಸ್ಯ ಕೋಟೆ ಪ್ರಭಾಕರ್‌ಮಾತನಾಡಿ, ರೈತ ದೇಶದ ಬೆನ್ನೆಲುಬು, ಅನ್ನಕೊಡುವ ರೈತರ ಬದುಕು ಇಲ್ಲಿನವರೆಗೆ ಚೆನ್ನಾಗಿಲ್ಲ, ಇದನ್ನು ಅರಿತು ಸರ್ಕಾರದ ವಿವಿಧ ಯೋಜನೆಗಳು ಕೃಷಿ ವಲಯದಲ್ಲಿ ಹಲವು ಕಾರ್ಯಕ್ರಮಗಳು ಸರ್ಕಾರಗಳು ಮಾಡುತ್ತಾ ಬಂದಿವೆ ಎಂದು ತಿಳಿಸಿದರು.
ಮಳೆ ಆಧಾರಿತ ಕೃಷಿ ಮಾಡುವವರಿಗೆ ನೀರಿನ ಸಮಸ್ಯೆ ನಿವಾರಿಸಲು ಕೃಷಿ ಇಲಾಖೆಯ ಕೃಷಿ ಭಾಗ್ಯ ಯೋಜನೆಯಡಿ ಸಹಾಯಧನ ದೊಂದಿಗೆ ಜಾರಿಯಾಗುವ ಕೃಷಿ ಹೊಂಡ ತಾಲೂಕಿನಲ್ಲಿ600 ನಿರ್ಮಾಣವಾಗಿವೆ ಹಾಗೂ ರೈತರು ಮಳೆ ನೀರನ್ನು ವ್ಯರ್ಥವಾಗಲು ಬಿಡದೇ ಸೂಕ್ತ ಸ್ಥಳದಲ್ಲಿ ಹೊಂಡ ತೆಗೆದು ನೀರನ್ನು ಸಂಗ್ರಹಿಸಿ ತಮ್ಮ ಬೆಳೆಗಳಿಗೆ ಒದಗಿಸಲು ಹಾಗೂ ಅಕ್ಕ ಪಕ್ಕದವರ ಬೋರ್ ವೆಲ್‌ಗಳು ಅಂತರ್ಜಲ ಹೆಚ್ಚುತ್ತದೆ ಎಂದರು.
ಕೃಷಿ ಸಹಾಯಕ ನಿರ್ದೇಶಕಿ ಎನ್.ವಿಜಯ ಮೂರ್ತಿ ಮಾತನಾಡಿ, ತುಂತುರು ನೀರಾವರಿ ಘಟಕ ಯೋಜನೆಯಡಿ ಫಲಾನುಭವಿಗಳು ಆಯಾ ರೈತ ಸಂಪರ್ಕ ಕೇಂದ್ರಕ್ಕೆ ಎಸ್‌ಸಿ, ಎಸ್.ಟಿ ವರ್ಗದವರು ಆಧಾರ್ ಕಾರ್ಡ್, ಪಹಣಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಭಾವ ಚಿತ್ರದೊಂದಿಗೆ ಸಂಪರ್ಕಿಸಬೇಕು ಎಂದು ತಿಳಿಸಿದರು.
ತಾಪಂ ಉಪಾಧ್ಯಕ್ಷ ನಾಗರಾಜು, ಎಪಿಎಂಸಿ ಸದಸ್ಯ ಶಿವಕುಮಾರ್, ಪುರಸಭೆ ಸದಸ್ಯರಾದ ರವಿಕುಮಾರ್, ಹಸಿರು ಸೇನೆ ತಾಲೂಕು ಅಧ್ಯಕ್ಷ ಪೂಜಾರಪ್ಪ, ನರಸಿಂಹರೆಡ್ಡಿ, ಚಂದ್ರಶೇಖರ್, ಕೃಷಿ ಅಧಿಕಾರಿ ವೇಣುಗೋಪಾಲ, ಮಧು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.