ಸೇವಾ ಸಿಂಧು ಆ್ಯಪ್ ಸದುಪಯೋಗಿಸಿಕೊಳ್ಳಿ
Team Udayavani, Jun 24, 2020, 6:49 AM IST
ತಿಪಟೂರು: ಕೋವಿಡ್-19ನಿಂದ ಸಾಕಷ್ಟು ಜನರಿಗೆ ತೊಂದರೆಯಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ನೊಂದ ಜನರಿಗೆ ಸಹಾಯ ಮಾಡಲು ಹಲವು ಕಾರ್ಯ ಕ್ರಮಗಳನ್ನು ರೂಪಿಸಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಕಷ್ಟದಲ್ಲಿರುವ ಎಲ್ಲ ನೇಕಾರ ರಿಗೂ 2 ಸಾವಿರ ಸಹಾಯಧನ ಘೋಷಣೆ ಮಾಡಿ ದ್ದಾರೆ ಎಂದು ಶಾಸಕ ಬಿ.ಸಿ. ನಾಗೇಶ್ ಹೇಳಿದರು.
ನಗರದ ಹಳೇಪಾಳ್ಯ ಶ್ರೀ ರಂಗನಾಥ ಕಲ್ಯಾಣ ಮಂಟಪದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಯಿಂದ ಆಯೋಜಿಸಿದ್ದ ಸೇವಾಸಿಂಧು ಆ್ಯಪ್ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಹಣ ಪಡೆದುಕೊಳ್ಳಲು ನೇಕಾರರು ಸೇವಾಸಿಂಧು ಆ್ಯಪ್ ಮೂಲಕ ತಮ್ಮ ವಿವರಗಳನ್ನು ನೀಡಿ ಯೋಜನೆಯ ಉಪಯೋಗಪಡೆಯಬೇಕು ಎಂದರು. ಮನೆಯ ಆರ್‌ಆರ್ ನಂಬರ್ ನಮೂದಿಸುವ ಜತೆಗೆ ನೇಯ್ಗೆ ಕಾರ್ಮಿಕರಾಗಿ ಕೆಲಸ ಮಾಡುವವರು ಮಾಲೀಕರಿಂದ ಅಫಿಡವಿಟ್ ಸಲ್ಲಿಸಬೇಕಾಗಿದೆ.
ಜಗತ್ತಿಗೆ ಕೊರೊನಾ ಮಹಾಮಾರಿ ಹಬ್ಬಲು ಕಾರಣ ವಾದ ದೇಶವೇ ಭಾರತದ ಯೋಧರನ್ನು ಬಲಿ ಪಡೆದಿದ್ದು, ಪ್ರತಿಯೊಬ್ಬ ಭಾರತೀಯರು ಸ್ವದೇಶಿ ಉತ್ವನ್ನಗಳನ್ನ ಹೆಚ್ಚು ಹೆಚ್ಚು ಬಳಸಬೇಕು. ಸ್ವದೇಶಿ ಉತ್ವನ್ನಗಳ ಬಳಕೆಯಿಂದ ಸ್ವಾವಲಂಬಿ ಭಾರತ ನಿರ್ಮಾಣ ಸಾಧ್ಯವಾಗುತ್ತದೆ. ಚೀನಾ ವಸ್ತುಗಳನ್ನ ಸ್ವಯಂ ಪ್ರೇರಣೆಯಿಂದ ಬಹಿಷ್ಕರಿಸುವ ಮೂಲಕ ನಮ್ಮ ಯೋಧರ ಬಲಿದಾನಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ತಿಳಿಸಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕಿ ಭಾರತಿ, ಸಹಾಯಕ ಅಧಿಕಾರಿ ಸುರೇಶ್, ನಗರಸಭೆ ಸದಸ್ಯರಾದ ಮೋಹನ್‌ರಾಜ್, ಮಾವಿನ ಕೆರೆ ಜಯರಾಮ್, ಮಲ್ಲೇಶ್‌ನಾಯ್ಕ, ಮಾಜಿ ಸದಸ್ಯ ಜಿ.ಆರ್. ಮಂಜುನಾಥ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
S.Korea: ರನ್ ವೇಯಲ್ಲಿ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ವಿಮಾನ: ಇಲ್ಲಿದೆ ನೋಡಿ ವಿಡಿಯೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.