ಬಿಜೆಪಿಯಿಂದ ಇಡಿ-ಸಿಬಿಐ ಇಲಾಖೆ ದುರ್ಬಳಕೆ: ಕೊರಟಗೆರೆಯಲ್ಲಿ ಖರ್ಗೆ ಆರೋಪ
ಎಐಸಿಸಿ ಅಧ್ಯಕ್ಷರಿಂದ ಕೊರಟಗೆರೆಯಲ್ಲಿ ರೋಡ್ ಶೋ..
Team Udayavani, Mar 5, 2023, 8:55 PM IST
ಕೊರಟಗೆರೆ: ಭಾರತದ ಅಭಿವೃದ್ದಿಗೆ ಜನರು ಪ್ರಧಾನಿ ಮೋದಿಗೆ ಅಧಿಕಾರ ನೀಡಿದ್ರೇ ಎಲ್ಲಿಗೆ ಹೋದ್ರು ಕಾಂಗ್ರೆಸ್ ಪಕ್ಷದ ಟೀಕೆ ಮಾಡ್ತಾರೇ.. ಸರಕಾರಿ ವಿಮಾನ ಮತ್ತು ಜನರ ದುಡ್ಡಿನಿಂದ ಬಿಜೆಪಿ ತಮ್ಮ ಪಕ್ಷದ ಪ್ರಚಾರ ಮಾಡುತ್ತಿದೆ, ನಾನು ಸಂಸತ್ ಭವನದ ಕಲಾಪದಲ್ಲಿ ಕೇಳುವ ಪ್ರಶ್ನೆಗೇ ಪ್ರಧಾನಿ ಮೋದಿ ಉತ್ತರವೇ ನೀಡೋದಿಲ್ಲ. ನನ್ನ ೫೨ ವರ್ಷದ ರಾಜಕೀಯ ಜೀವನದಲ್ಲೇ ಇಂತಹ ಪ್ರಧಾನಿಯನ್ನು ನಾನೆಂದು ನೋಡಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟಿಕಿಸಿದರು.
ಕೊರಟಗೆರೆ ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ರಾಜೀವ ಭವನ ಲೋಕಾರ್ಪಣೆ ಮತ್ತು ಜಿಲ್ಲಾ ಬೃಹತ್ ಕಾಂಗ್ರೆಸ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರದ ಇಡಿ-ಸಿಬಿಐ ಅಧಿಕಾರಿಗಳಿಂದ ಕಾಂಗ್ರೆಸ್ ನಾಯಕರನ್ನು ಹೆದರಿಸಿ ಬಿಜೆಪಿ ಪಕ್ಷ ಚುನಾವಣೆ ಗೆಲ್ತಾರೇ. ಸಕ್ಕರೇ ಕಾರ್ಖಾನೆ ಮತ್ತು ಸಹಕಾರ ಸಂಘದ ಮಾಲೀಕರಿಗೆ ಅಮಿತ್ ಷಾ ಧಮ್ಕಿ ಹಾಕ್ತಾರೇ. ಭಾರತದಲ್ಲಿ 30 ಲಕ್ಷ ಮತ್ತು ಕರ್ನಾಟಕ ರಾಜ್ಯದಲ್ಲಿ 3 ಲಕ್ಷ ನೌಕರಿ ಖಾಲಿ ಇದೆ. ಕಪ್ಪುಹಣ ಇನ್ನೂ ಎಲ್ಲಿ ಬರ್ತಿದೆ ಎಂಬುದೇ ಮೋದಿಗೆ ಗೊತ್ತೀಲ್ಲ. ಮೋದಿ ಜನರಿಗೆ ನೀಡಿದ ಭರವಸೆ ಹುಸಿಯಾಗಿದೆ. ಬ್ರಿಟಿಷರಿಗೆ ಹೆದರದ ಕಾಂಗ್ರೆಸ್ ಪಕ್ಷ ಬಿಜೆಪಿ ನಾಯಕರಿಗೆ ಭಯಪಡುತ್ತಾ ಎಂದು ಗುಡುಗಿದರು.
ಕರ್ನಾಟಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ ರಾಜ್ಯ ಸರಕಾರ 40% ಭ್ರಷ್ಟಚಾರದಲ್ಲಿ ಮುಳುಗಿದೆ. ಭ್ರಷ್ಟಚಾರದ ಸಾಕ್ಷಿ ಕೇಳಿದ ಮುಖ್ಯಮಂತ್ರಿಗೆ ಲೋಕಾಯುಕ್ತ ಇಲಾಖೆ ಆಧಾರ ಸಮೇತ ಸಾಕ್ಷಿ ನೀಡಿದೆ. ಈಗಲಾದ್ರು ಸಿಎಂ ರಾಜಿನಾಮೇ ನೀಡಬೇಕಿದೆ. ಕೊಬ್ಬರಿ ಬೆಲೆ 20 ಸಾವಿರದಿಂದ 9 ಸಾವಿರಕ್ಕೆ ಇಳಿದಿದೆ. ಬಿಜೆಪಿ ಸರಕಾರದ ಭ್ರಷ್ಟಚಾರದ ಪಾಪದ ಪತ್ರ ಬಿಡುಗಡೆ ಮಾಡ್ತೀನಿ. 16 ಸೀಟು ಇದ್ರು ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಮತ್ತು 38 ಸೀಟು ಇದ್ದ ಮಾಜಿ ಸಿಎಂ ಕುಮಾರಸ್ವಾಮಿಗೆ ನಾವು ಬೆಂಬಲ ನೀಡಿದ್ವಿ ಆದರೇ ಅದನ್ನು ಅವರು ಉಳಿಸಿಕೊಂಡಿಲ್ಲ ಎಂದು ತಿಳಿಸಿದರು.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣಬೀರ್‌ಸಿಂಗ್ ಸುರ್ಜೆವಾಲ ಮಾತನಾಡಿ ಪ್ರಧಾನಿ ಮೋದಿ ಛತ್ರಿಯ ಕೆಳಗಡೆಯೇ ಭ್ರಷ್ಟಚಾರದ ಸೈನ್ಯವೇ ಇದೆ. 40% ಕಮಿಷನ್ ಬಗ್ಗೆ ಕರ್ನಾಟಕದ 50ಸಾವಿರ ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ಕರ್ನಾಟಕದಲ್ಲಿ ಭ್ರಷ್ಟಚಾರದ ಬಿಜೆಪಿ ಪಕ್ಷ ಆಡಳಿತ ನಡೆಸ್ತಿದೆ. ಭ್ರಷ್ಟ ಚೂರ್ ಬೊಮ್ಮಾಯಿ ಸಿಎಂ ಆಗಿದ್ದಾರೆ. 6 ಕೋಟಿ ಕನ್ನಡಿಗರ ಭವಿಷ್ಯ ವಿಧಾನಸಭಾ ಚುನಾವಣೆಯಲ್ಲಿ ಅಡಗಿದೆ. ಬಿಜೆಪಿ ಪಕ್ಷದ ವಿನಾಶ ಕೊರಟಗೆರೆ ಕ್ಷೇತ್ರದಿಂದಲೇ ಪ್ರಾರಂಭವಾಗಲಿ ಎಂದು ಕರೆ ನೀಡಿದರು.
ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮಾತನಾಡಿ ಬಿಜೆಪಿ ಸರಕಾರದ ಸಿಎಂನಿಂದ ಹಿಡಿದು ಸಚಿವರು ಮತ್ತು ಶಾಸಕರೆಲ್ಲರೂ ಭ್ರಷ್ಟರು. ಸಿಎಂ ಬೊಮ್ಮಾಯಿ ನಿಮಗೆ ನಾಚಿಕೆ ಆಗೋದಿಲ್ವಾ. ಮಾನ ಮರ್ಯಾದೇ ಇದ್ರೇ ಮೊದ್ಲು ರಾಜಿನಾಮೇ ನೀಡಿ ಚುನಾವಣೆಗೆ ಬನ್ನಿ. ಚುನಾವಣೆ ಬಂದ್ರು ಸಹ ಪೇಟ್ರೊಲ್, ಡಿಸೇಲ್, ಗ್ಯಾಸ್ ಜಾಸ್ತಿ ಆಗ್ತೀದೆ. ವಾಮಮಾರ್ಗದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ಕರೆದೊಯ್ದು ಬಿಜೆಪಿ ಪಕ್ಷವು ಸರಕಾರ ರಚನೆ ಮಾಡಿ ಭ್ರಷ್ಟಚಾರದ ಆಡಳಿತ ನಡೆಸ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ, ಮಾಜಿ ಸಚಿವ ಸತೀಶ ಜಾರಕಿಹೊಳಿ, ಹೆಚ್.ಆಂಜನೇಯ, ಟಿ.ಬಿ.ಜಯಚಂದ್ರ, ಪರಮೇಶನಾಯ್ಕ, ರಾಣಿಸತೀಶ್, ಮಾಜಿ ಸಂಸದ ಉಗ್ರಪ್ಪ, ಚಂದ್ರಪ್ಪ, ಎಂಎಲ್‌ಸಿ ರಾಜೇಂದ್ರ, ಮಾಜಿ ಎಂಎಲ್‌ಸಿ ಬೇಮೆಲ್‌ಕಾಂತರಾಜು, ಶಾಸಕ ವೆಂಕಟರವಣಪ್ಪ, ಮಾಜಿ ಶಾಸಕ ಕೆ.ಎನ್.ರಾಜಣ್ಣ, ಷಡಾಕ್ಷರಿ, ರಫಿಕ್ ಅಹಮ್ಮದ್, ಮಾಜಿ ನಗರಾಸಭಾ ಅಧ್ಯಕ್ಷ ವಾಲೇಚಂದ್ರಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಕೊರಟಗೆರೆ ಅಧ್ಯಕ್ಷ ಅರಕೆರೆಶಂಕರ್, ಅಶ್ವತ್ಥನಾರಾಯಣ, ಮಹಿಳಾಧ್ಯಕ್ಷೆ ಜಯಮ್ಮ, ಯುವಧ್ಯಕ್ಷ ವಿನಯ್, ಎಂಎನ್‌ಜೆ ಮಂಜುನಾಥ ಸೇರಿದಂತೆ ಇತರರು ಇದ್ದರು.
9 ರಂದು 2 ಗಂಟೆ ಕರ್ನಾಟಕ ಬಂದ್..
ಸಿಎಂ ಕೇಳಿದ ಭ್ರಷ್ಟಚಾರದ ಸಾಕ್ಷಿಯನ್ನ ಲೋಕಾಯುಕ್ತ ಇಲಾಖೆ ನೀಡಿದೆ. ಅದಕ್ಕಾಗಿ ರಾಜ್ಯದ ಸಿಎಂ ಬಸವರಾಜು ಬೊಮ್ಮಾಯಿ ರಾಜೀನಾಮೆ ನೀಡಬೇಕಿದೆ. ರಾಜ್ಯ ಸರಕಾರದ ಭ್ರಷ್ಟಚಾರದ ವಿರುದ್ದ ಮಾ.9ರಂದು ಬೆಳ್ಳಿಗೆ 9 ರಿಂದ 11 ಗಂಟೆ ವರೇಗೆ ಕರ್ನಾಟಕ ಬಂದ್ ಮಾಡುತ್ತೇವೆ. ಬಂದ್‌ಗೆ ವರ್ತಕರ ಸಹಕಾರ ಅಗತ್ಯವಾಗಿ ನಮಗೆ ಬೇಕಿದೆ. ಬಂದ್‌ನಿಂದ ಯಾವುದೇ ಶಾಲೆ, ಆಸ್ಪತ್ರೆ ಮತ್ತು ವಾಹನಗಳಿಗೆ ಸಮಸ್ಯೆ ಆಗದಂತೆ ಕಾರ್ಯಕರ್ತರು ಪ್ರತಿಭಟನೆ ನಡೆಸಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೊರಟಗೆರೆಯ ಕಾಂಗ್ರೆಸ್ ಸಮಾವೇಶದಲ್ಲಿ ಕರೆ ನೀಡಿದರು.
40 ಸಾವಿರಕ್ಕೂ ಅಧಿಕ ಜನಸಾಗರ..
ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶಕ್ಕೆ ತುಮಕೂರು ಜಿಲ್ಲೆಯ 10ಕ್ಷೇತ್ರ ಮತ್ತು ಕೊರಟಗೆರೆಯಿಂದ ಸರಿಸುಮಾರು 40 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಆಗಮಿಸಿದ್ದರು. ಬೈಪಾಸ್ ರಸ್ತೆಯಿಂದ ಕೊರಟಗೆರೆ ಪಟ್ಟಣದ ಮುಖ್ಯರಸ್ತೆಯಲ್ಲಿ ತೆರೆದ ವಾಹನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸಾವಿರಾರು ಕಾರ್ಯಕರ್ತರ ಜೊತೆಗೂಡಿ ರೋಡ್‌ಶೋ ನಡೆಸಿದರು. ದಾರಿಯುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕರಿಗೆ ಹೂವಿನ ಸುರಿಮಳೆಗೈದರು.
ಕೊರಟಗೆರೆ ಕ್ಷೇತ್ರಕ್ಕೆ ಇಂದು ಐತಿಹಾಸಿದ ದಿನ. ಎಐಸಿಸಿ ಅಧ್ಯಕ್ಷರಿಂದ ರಾಜೀವ ಭವನ ಉದ್ಘಾಟನೆ ಆಗಿದೆ. ಕೊರಟಗೆರೆ ಪಟ್ಟಣದ ರಾಜೀವ ಭವನ ಕೆಪಿಸಿಸಿಯ ಸ್ವತ್ತು. 5 ವರ್ಷ ಜನರ ಜೊತೆಗಿದ್ದು ಸಾಕ್ಷಿ ಸಮೇತ ಅಭಿವೃದ್ದಿಯ ಹೆಜ್ಜೆಗುರುತು ಪುಸ್ತಕವನ್ನ ನಿಮ್ಮ ಕೈಗೆ ನೀಡಿದ್ದೇನೆ. ರಾಜಕೀಯ ಕ್ಷೇತ್ರದಲ್ಲಿ ಖರ್ಗೆ ಅಂತವ್ರು ಸಿಗೋದು ಬಹಳ ಅಪರೂಪ. ಸಾಮಾನ್ಯ ಕಾರ್ಯಕರ್ತನಾಗಿ ಇಂದು ಎಐಸಿಸಿ ಅಧ್ಯಕ್ಷರಾಗಿ ನನ್ನ ಕ್ಷೇತ್ರಕ್ಕೆ ಬಂದಿರೋದು ನನಗೆ ಹೆಮ್ಮೆ. ಕಾಂಗ್ರೆಸ್ ಪಕ್ಷ ಮತ್ತೇ ಅಧಿಕಾರಕ್ಕೆ ಬರುವುದು ಖಚಿತ.
– ಡಾ.ಜಿ.ಪರಮೇಶ್ವರ. ಮಾಜಿ ಡಿಸಿಎಂ. ಕೊರಟಗೆರೆ
ಕಾಂಗ್ರೆಸ್ ಸರಕಾರದ ಮೇ. 25ಕ್ಕೆ ಅಧಿಕಾರಕ್ಕೆ ಬರುತ್ತೇ. ಜೂನ್ ತಿಂಗಳಿಂದ ಪ್ರತಿಮನೆಗೆ 200 ಯೂನಿಟ್ ವಿದ್ಯುತ್, ಪ್ರತಿ ಕುಟುಂಬದ ಗೃಹಿಣಿಗೆ 2 ಸಾವಿರ, ಬಿಪಿಎಲ್ ಕಾರ್ಡಿಗೆ 10 ಕೆಜಿ ಅಕ್ಕಿಯ ಗ್ಯಾರಂಟಿ ಕಾರ್ಡು ನೀಡ್ತೇವೆ. ನಮ್ಮಂತ ಹತ್ತು ಜನ ನಾಯಕರನ್ನು ಬೆಳೆಸುವ ಶಕ್ತಿ ಡಾ.ಜಿ.ಪರಮೇಶ್ವರ್‌ಗೆ ಇದೆ. ನೂರಾರು ಶಾಸಕರು ಸೀಗ್ತಾರೇ ಆದರೇ ಪರಮೇಶ್ವರ್ ಅಂತಹ ನಾಯಕ ಮತ್ತೇ ಸೀಗೊದಿಲ್ಲ. ಒಮ್ಮೆ ಆಗಿರುವ ತಪ್ಪು ಮತ್ತೇ ಆಗುವುದು ಬೇಡ. ಅಭಿವೃದ್ದಿಯಲ್ಲಿ ಹೃದಯ ಶ್ರೀಮಂತ ನಾಯಕ ಮತ್ತೇ ಕೊರಟಗೆರೆಯಿಂದ ಗೆಲ್ಲಬೇಕಿದೆ.
– ಡಿ.ಕೆ.ಶಿವಕುಮಾರ್. ಕೆಪಿಸಿಸಿ ಅಧ್ಯಕ್ಷ. ಕರ್ನಾಟಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ
Koteshwar: ಬೀಜಾಡಿಯ ಯೋಧ ಅನೂಪ್ ಪೂಜಾರಿ ಮೃತ್ಯು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.