ಮಾ 5 ರಂದು ಖರ್ಗೆಯವರಿಂದ ಕೊರಟಗೆರೆ ನೂತನ ಕಾಂಗ್ರೆಸ್ ಭವನ ಉದ್ಘಾಟನೆ
Team Udayavani, Feb 23, 2023, 11:16 PM IST
ಕೊರಟಗೆರೆ: ಮಾರ್ಚ್ 5 ರ ಭಾನುವಾರದಂದು ಕೊರಟಗೆರೆ ಪಟ್ಟಣದಲ್ಲಿ ನೂತನ ಕಾಂಗ್ರೆಸ್ ಭವನ ಉದ್ಘಾಟನೆ ಮತ್ತು ಜಿಲ್ಲಾ ಕಾಂಗ್ರೆಸ್ ಸಮಾವೇಶವನ್ನು ಹಮ್ಮಿಕೋಳ್ಳಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಪಟ್ಟಣದ ನೂತನ ಕಾಂಗ್ರೆಸ್ ಭವನವನ್ನು ರಾಷ್ಟೀಯ ಕಾಂಗ್ರೆಸ್ ಅದ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆರವರು ಉದ್ಘಾಟಿಸುವರು, ಕೆಪಿಸಿಸಿ ಅದ್ಯಕ್ಷರಾದ ಡಿ.ಕೆ.ಶಿವಕುಮಾರ್, ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಎ.ಐ.ಸಿ.ಸಿ ವೀಕ್ಷರಾದ ಸುರ್ಜೆವಾಲ, ರಾಜ್ಯ ಪ್ರಚಾರ ಸಮಿತಿ ಅದ್ಯಕ್ಷ ಎಂ.ಬಿ.ಪಾಟೀಲ್, ಸಲೀಂ ಅಹಮದ್, ಸೇರಿದಂತೆ ರಾಜ್ಯ ನಾಯಕರುಗಳು ಹಾಗೂ ಪಕ್ಷದ ಜಿಲ್ಲೆಯ ಎಲ್ಲಾ ನಾಯಕರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸುಮಾರು ಈ ಸಮಾವೇಶಕ್ಕೆ50 ಸಾವಿರ ಜನರು ಸೇರುವ ನಿರೀಕ್ಷೆ ಇದ್ದು ಕಾರ್ಯಕ್ರಮವನ್ನು ಕಾಂಗ್ರೆಸ್ ಭವನದ ಮುಂಭಾಗ ಜಾಗದಲ್ಲಿ ನೆಡೆಸಲಾಗುವುದು, ಸುಮಾರು 1.50 ಕೋಟಿ ರೂ ನಲ್ಲಿ ನಿರ್ಮಾಣವಾಗಿರುವ ಕಾಂಗ್ರೆಸ್ ಭವನ ಕಾಂಗ್ರೆಸ್ ಪಕ್ಷದ ಆಸ್ತಿಯಾಗಿದ್ದು ಈ ಕಟ್ಟಡ ನಿರ್ಮಾಣಕ್ಕೆ ಹಲವಾರು ಕಾರ್ಯಕರ್ತರು ದೇಣಿಗೆ ನೀಡಿದ್ದಾರೆ, ಭವನ ನಿರ್ಮಾಣಕ್ಕೆ ನಿವೇಶನವನ್ನು ಉಚಿತವಾಗಿ ದಾನ ಮಾಡಿರುವ ಪಟ್ಟಣದ ಉದ್ಯಮಿ ಹೆಚ್.ಮಹದೇವ್ ರವರಿಗೆ ವೈಯಕ್ತಿಕವಾಗಿ ಮತ್ತು ಪಕ್ಷದ ಪರವಾಗಿ ಧನ್ಯವಾದ ತಿಳಿಸುವುದಾಗಿ ಹೇಳಿದರು.
ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದ ಮೇಲೆ ಆಧಿಕಾರಕ್ಕೆ ಬರಲಿದೆ, ಇದು ನಮ್ಮ ಜನಧ್ವನಿ ಯಾತ್ರೆಗೆ ಜನರ ಸ್ಪಂದನೆಯಲ್ಲಿ ಜನರ ವಿಶ್ವಾಸ ಕಾಂಗ್ರೆಸ್ ಪಕ್ಚಕ್ಕೆ ವ್ಯಕ್ತವಾಗುತ್ತಿದೆ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸದೃಡವಾಗಿದೆ. ನಮ್ಮ ಜಿಲ್ಲೆಯಲ್ಲಿ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಾಗಿದ್ದೇವೆ, ಅತಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ, ದಲಿತ ಮುಖ್ಯಮಂತ್ತಿ ಕೂಗು ಕೇಳಲಾದ ಪ್ರಶ್ನೆಗೆ ಪಕ್ಷದಲ್ಲಿ ಆ ರೀತಿ ಇಲ್ಲ, ನಮ್ಮ ಹೈಕಮಾಂಡ್ ನಿರ್ಣಯದಂತೆ ಮುಖ್ಯಮಂತ್ರಿ ಯಾಗುತ್ತಾರೆ. ಈ ಬಾರಿಯ ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸಾಮಾನ್ಯ ಜನರ, ಬಡವರ, ರೈತರ, ಮಹಿಳೆಯರ ಕಾರ್ಮಿಕರ ಯುವಕರ ಪರವಾಗಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.