ಮರಕ್ಕೆ ಮಾರುತಿ ವ್ಯಾನ್ ಡಿಕ್ಕಿ: ಓರ್ವ ಸಾವು
Team Udayavani, Dec 21, 2018, 3:05 PM IST
ಬೇಲೂರು: ಮಾರುತಿ ವ್ಯಾನ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಪೆಟ್ಟು ಬಿದ್ದಿರುವ ಘಟನೆ ತಾಲೂಕಿನ ತಗರೆ ಸಮೀಪ ಗುರುವಾರ ಸಂಭವಿಸಿದೆ. ಬಾಣಾವರದ ಗಣೇಶ್ ಪ್ರಸಾದ್ ಹೋಟೆಲ್ ಮಾಲೀಕ ರಾಜು(42) ಮೃತ ವ್ಯಕ್ತಿ. ಬಾಣಾವರದ ಗಣೇಶ್ ಪ್ರಸಾದ್ ಹೋಟೆಲ್ ಮಾಲೀಕ ರಾಜು ತಮ್ಮ ಸ್ನೇಹಿತರಾದ ಪೈಂಟರ್ ಸಿದ್ದೇಶ್, ದರ್ಶನ್, ಶೇಖರ್ ಅವರೊಂದಿಗೆ ಬುಧವಾರ ತನ್ನ ಸ್ನೇಹಿತನ ಆರೋಗ್ಯ ವಿಚಾರಿಸಲು ಮಾರುತಿ ವ್ಯಾನ್ ನಲ್ಲಿ ಮಂಗಳೂರಿಗೆ ತೆರಳಿ ವಾಪಸಾಗುತ್ತಿದ್ದಾಗ ಬೇಲೂರು ತಾಲೂಕು ಸಕಲೇಶಪುರ ರಸ್ತೆಯ ತಗರೆ ತಿರುವಿನ ಬಳಿ ಇದ್ದ ಮರಕ್ಕೆ ವ್ಯಾನ್ ಡಿಕ್ಕಿ ಹೊಡೆದಿದೆ.
ವ್ಯಾನಿನಲ್ಲಿದ್ದ ಸಿದ್ದೇಶ್ ಹಾಗೂ ದರ್ಶನ್ ಅವರ ಕಾಲು ಮುರಿದಿದೆ. ಶೇಖರ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳಕ್ಕೆ ಬೇಲೂರು ಸಿಪಿಐ ಲೋಕೇಶ್ ಪಿಎಸ್‌ಐ ಜಗದೀಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳೀಯರ ಆರೋಪ: ಬೇಲೂರು-ಬಿಕ್ಕೋಡು ರಸ್ತೆಯಲ್ಲಿ ಸುಮಾರು 30 ಕ್ಕೂ ಹೆಚ್ಚು ಒಣಗಿದ ಮರಗಳಿವೆ. ಈ ಮರಗಳಿಗೆ ಡಿಕ್ಕಿ ಹೊಡೆದು 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಂಚಾರಕ್ಕೆ ತೊಂದರೆಯಾಗುತ್ತಿರುವ ರಸ್ತೆ ಬದಿಯ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಸಂಬಂಧಪಟ್ಟವರು ನಿರ್ಲಕ್ಷ್ಯ ವಹಿಸಿದ್ದಾರೆಂದು ಸ್ಥಳೀಯರು ಆಪಾದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Koratagere: ಕಂದಾಯ ಇಲಾಖೆ ಸಿಬ್ಬಂದಿ ಸೇರಿ ನಾಲ್ವರ ಮೇಲೆ ಹೆಜ್ಜೇನು ದಾಳಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Kalaburagi: ಸಹಕಾರಿ ಸಾಲದ ಮೇಲಿನ ಬಡ್ಡಿ ಹಣ ಡಿಸಿಸಿ ಬ್ಯಾಂಕ್ ಗೆ ಬಿಡುಗಡೆ
Wedding Story: ಕಂಕಣ ಕಾಲ-4: ಲಗ್ನಪತ್ರಿಕೆ ಹೋಯ್ತು, ವಾಟ್ಸಾಪ್‌ನಲ್ಲೇ ಕರೆ ಬಂತು!
Manipal: ಉದಯವಾಣಿಯ ಸಹಾಯಕ ಸುದ್ದಿ ಸಂಪಾದಕರಾಗಿದ್ದ ದಾಮೋದರ ಕಕ್ರಣ್ಣಾಯ ನಿಧನ
Rajasthan: ಕುಸಿದು ಬಿದ್ದ ನಿರ್ಮಾಣ ಹಂತದ ಸುರಂಗದ ಭಾಗ.. ಓರ್ವ ಕಾರ್ಮಿಕ ಮೃತ್ಯು
Bangla; ಭಾರತೀಯ ಬಸ್ ಮೇಲೆ ಬಾಂಗ್ಲಾದಲ್ಲಿ ದಾಳಿ; ಭಾರತ ವಿರೋಧಿ ಘೋಷಣೆ ಕೂಗಿದ ಸ್ಥಳೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.