ಕೋವಿಡ್ ಗೆ ವಲಸೆ ಕಾರ್ಮಿಕರು ಕಂಗಾಲು


Team Udayavani, Apr 22, 2021, 8:01 PM IST

Migrant workers problem

ತುಮಕೂರು: ಕೋವಿಡ್  ಮಹಾಮಾರಿ ಜನರ ಬದುಕನ್ನೇ ಹಾಳು ಮಾಡುತ್ತಿದೆ. ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ಕೂಲಿಗಾಗಿ ಬಂದು ತಮ್ಮ ಬದುಕು ಕಟ್ಟಿ ಕೊಂಡವರ ಬದುಕನ್ನು ಹಾಳು ಮಾಡುತ್ತಿದೆ. ಹೇಗೋ ಕೊರೊನಾ ಕಡಿಮೆ ಆಗಿತ್ತು. ನಮ್ಮ ಬದುಕುಕಟ್ಟಿ ಕೊಳ್ಳೋಣ ಎಂದು ನಗರ ಪ್ರದೇಶಗಳಿಗೆ ಬಂದಿದ್ದ ಕೂಲಿ ಕಾರ್ಮಿಕರು ಕೊರೊನಾ ಎರಡನೇ ಅಲೆ ಆರ್ಭಟಕ್ಕೆ ನಲುಗಿ ಮತ್ತೆ ತಮ್ಮತಮ್ಮ ಊರುಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ಯಾವುದೇ ಯೋಜನೆಯ ಕಾಮಾರಿಗಳು ನಡೆಯಬೇಕಾದರೂ ಹೊರ ರಾಜ್ಯ, ಹೊರಜಿಲ್ಲೆಗಳಿಂದ ಕೂಲಿ ಅರಸಿ ಬರುವ ಕಾರ್ಮಿಕರು ಪ್ರಮುಖವಾಗಿರುತ್ತಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ಪಕ್ಕದ ಆಂದ್ರಪ್ರದೇಶ, ತೆಲಂಗಾಣ, ತಮಿಳು ನಾಡು, ಕೇರಳ, ಗುಜರಾತ್‌, ರಾಜಸ್ಥಾನ. ಉತ್ತರ ಪ್ರದೇಶಸೇರಿದಂತೆ ಬೇರೆ ರಾಜ್ಯಗಳಿಂದ ವಲಸೆ ಬಂದಿರುವ ಕಾರ್ಮಿಕರು ನಗರದ ಹೊರವಲಯಗಳಲ್ಲಿ ಶೆಡ್‌ ಹಾಕಿಕೊಂಡು ಗುತ್ತಿಗೆದಾರರ ಅಧೀನದಲ್ಲಿ ಕೆಲಸ ಮಾಡುತ್ತಿದ್ದಾರೆ.

ಅದೇ ರೀತಿ ರಾಜ್ಯದ ಉತ್ತರ ಕರ್ನಾಟಕ,ಗುಲ್ಬರ್ಗಾ, ಬಿಜಾಪುರ, ರಾಯಚೂರು,ದಾವಣ ಗೆರೆ, ಚಿತ್ರದುರ್ಗ, ಬೀದರ್‌ ತುಮಕೂರು ಜಿಲ್ಲೆಯ ಪಾವಗಡ ಸೇರಿದಂತೆವಿವಿಧ ಕಡೆ ಗಳಿಂದ ಬಂದಿರುವ ಕಾರ್ಮಿಕರು ಜಿಲ್ಲೆ ಯಲ್ಲಿ ರಸ್ತೆ ಕಾಮಗಾರಿ, ಪೈಪ್‌ಲೈನ್‌ ಕಾಮಗಾರಿ ಸೇರಿ ಹಲವು ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿದ್ದರು.ಕೊರೊನಾ ಕಹಿ ಮರೆತ್ತಿಲ್ಲ: ಜಿಲ್ಲೆಯಲ್ಲಿನಜನ ಸಾಮಾನ್ಯರ ಬದುಕನ್ನು ಕಿತ್ತುಕೊಂಡಿರುವ ಕೊರೊನಾ ಮಹಾಮಾರಿ ಕಳೆದ ವರ್ಷಕಾಣಿಸಿಕೊಂಡಿದ್ದ ಮೊದಲ ಅಲೆ ಸಾವಿರಾರುಜನರ ಬದುಕು ಹಾಳು ಮಾಡಿತ್ತು.

ಕೊರೊನಾ ದಿಂದ ಆದ ಲಾಕ್‌ಡೌನ್‌ನಿಂದಸಾವಿರಾರು ಕಾರ್ಮಿ ಕರು ಕೆಲಸ ವಿಲ್ಲದೇತಮ್ಮ ಊರು ಗಳತ್ತ ನಡೆದರು. ನಂತರ ಕೊರೊನಾ ಕಡಿಮೆ ಆಗಿದ್ದ ಹಿನ್ನೆಲೆ ಮತ್ತೆ ಎಂದಿನಂತೆ ತಮ್ಮ ಕೆಲಸ ಕಾರ್ಯಗಳು ಆರಂಭಗೊಂಡಾಗ ಕಾರ್ಮಿಕರು ತಮ್ಮಬದುಕು ಕಟ್ಟಿ ಕೊಳ್ಳಲು ಹಳ್ಳಿಗಳಿಂದ ನಗರಕ್ಕೆಬಂದು ತಮ್ಮ ಕೆಲಸ ಆರಂಭಿಸಿದ್ದರು.

ಆದರೆ,ಈಗ ಮತ್ತೆ ಕೊರೊನಾ ಎರಡನೇ ಅಲೆ ತನ್ನ ರುದ್ರನರ್ತನವನ್ನು ತೋರಲಾರಂಭಿಸಿದ್ದು,ಪ್ರತಿದಿನ ಸಾವಿರಾರು ಜನರಿಗೆ ಸೋಂಕು ಇರುವುದು ಕಂಡುಬರುತ್ತಿದೆ. ಇದರಿಂದಆತಂಕ ಗೊಂಡಿರುವ ಕೂಲಿ ಕಾರ್ಮಿಕರು ಈಗ ಸರ್ಕಾರ ಕೊರೊನಾ ನಿಯಂತ್ರಿಸಲು ರಾತ್ರಿ ಕರ್ಫ್ಯೂ ಮಾಡಿ ವಾರಾಂತ್ಯದ ಬಂದ್‌ಮಾಡು ತ್ತಿದೆ. ಮುಂದೆ ಕೊರೊನಾ ಹೆಚ್ಚಳವಾ ಗುವ ಸಾಧ್ಯತೆಗಳೇ ಹೆಚ್ಚುಇರುವ ಹಿನ್ನೆಲೆ ಮುಂದೆ ಲಾಕ್‌ಡೌನ್‌ಆಗಬಹುದು ಎಂದು ಕೂಲಿ ಕಾರ್ಮಿಕರುತಮ್ಮ ಊರುಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ರಸ್ತೆ, ಪೈಪ್‌ಲೈನ್‌ ಕಾರ್ಮಿಕರಿಗೆ ಸಂಕಷ್ಟ:ಜಿಲ್ಲೆಯಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ರಸ್ತೆಮತ್ತು ಪೈಲ್‌ಲೈನ್‌ ಕಾಮಗಾರಿ, ಕುಡಿಯುವನೀರಿನ ಯೋಜನೆ, ಎತ್ತಿನಹೊಳೆ ಕಾಮಗಾರಿಹಾಗೂ ರೈಲ್ವೆ ಯೋಜನೆಯ ಕಾಮಗಾರಿನಡೆಯುತ್ತಿವೆ. ಹಲವಾರು ಗುತ್ತಿಗೆದಾರರುಈ ಕಾರ್ಮಿಕರ ಯೋಗಕ್ಷೇಮ ನೋಡಿ ಕೊಂಡು ತಮ್ಮ ಕಾಮಗಾರಿ ಕೆಲಸ ಮಾಡಿಸು ತ್ತಿದ್ದಾರೆ. ಆದರೆ, ಈಗ ಕೊರೊನಾ ತೀವ್ರತೆ ಯಿಂದಕಾರ್ಮಿಕರಲ್ಲಿ ಆತಂಕ ಮನೆ ಮಾಡಿದೆ.

ಕೊರೊನಾರ್ಭಟಕ್ಕೆ ನಲುಗಿರುವಕಾರ್ಮಿ ಕ ‌ರ ರಕ್ಷಣೆ ಮಾಡುವ ಜವಾಬ್ದಾರಿಕಾಮ ಗಾರಿಗಳ ಗುತ್ತಿಗೆ ಪಡೆದಗುತ್ತಿಗೆದಾರರ ಮೇಲಿ ದ್ದು, ಕಳೆದ ವರ್ಷಆದ ಕೊರೊನಾ ಸಂದ ರ್ಭದಲ್ಲಿಕಾರ್ಮಿಕರ ಆರೋಗ್ಯ ತಪಾ ಸಣೆ ಮತ್ತು ಅವರಿಗೆ ಆಹಾರ ಒದಗಿಸಲು ಜಿಲ್ಲಾಡಳಿತದ ಜೊತೆಗೆ ಗುತ್ತಿಗೆದಾರರು ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಿದ್ದರು.

86,500 ಕಟ್ಟಡ ಕಾರ್ಮಿಕರು: ಜಿಲ್ಲೆಯಲ್ಲಿ86, 500 ಕಟ್ಟಡ ಕಾರ್ಮಿಕರು ಇದ್ದು, 11 ಸಾವಿರ ಗಾರ್ಮೆಂಟ್ಸ್‌ ಕಾರ್ಮಿಕರು, 9,000 ಅಸಂಘಟಿತ ಕಾರ್ಮಿಕರು ಇದ್ದಾರೆ. ಇನ್ನೂ ವಿವಿ ಧಬಗೆಯ ಕಾರ್ಮಿಕರು ಇದ್ದು, ಅವರ ನೋಂದಣಿ ಕಾರ್ಮಿಕ ಇಲಾಖೆ ಯಲ್ಲಿ ಆಗಿ ಲ್ಲ. ಕಳೆದವರ್ಷ ಕೊರೊನಾ ಆರ್ಭಟ ದಿಂ ದ ನಗರಪ್ರದೇಶದಿಂದ 4 ಸಾವಿರಕ್ಕೂ ಹೆಚ್ಚು ಕಾರ್ಮಿಕರು ತಮ್ಮ ಊರುಗಳತ್ತ ತೆರಳಿದ್ದರು.

ಸ್ವಗ್ರಾಮಗಳಿಗೆಹೋಗಲು ಸಿದ್ಧತೆಕಳೆದ ಲಾಕ್‌ಡೌನ್‌ ವೇಳೆಯಲ್ಲಿ ನಗರಪ್ರದೇಶಗಳನ್ನು ಬಿಟ್ಟು ಹಳ್ಳಿ ಕಡೆ ಮುಖಮಾಡಿದವರು ತಮ್ಮ ಪಾಳು ಬಿದ್ದಿದ್ದಜಮೀನುಗಳನ್ನು ಉಳುಮೆ ಮಾಡಿದಪರಿಣಾಮ ಬಿತ್ತನೆ ಪ್ರಮಾಣವೂ ಹೆಚ್ಚಾಗಿತ್ತು. ಕೊರೊನಾದಿಂದ ಕೆಲಸ ಕಳೆದುಕೊಂಡ ಹಲವರು ಕೃಷಿ ಚಟುವಟಿಕೆಯಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ.

ಕೊರೊನಾ ಮಹಾಮಾರಿ ಆರ್ಭಟಕ್ಕೆಹೆದರಿ ತಮ್ಮ ಹಳ್ಳಿ ಸೇರಿದ್ದ ಮಂದಿ ಕೃಷಿಚಟುವಟಿಕೆ ಜೊತೆಗೆ ಮಹಾತ್ಮಗಾಂಧಿಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 100 ದಿನದ ಕೆಲಸ ಪಡೆದು ತಮ್ಮಜಮೀನುಗಳಿಗೆ ಅಗತ್ಯವಾಗಿರುವ ಕೆಲಸಕಾರ್ಯಗಳನ್ನು ಮಾಡುತ್ತಿದ್ದಾರೆ. ಈಗಮತ್ತೆ ಲಾಕ್‌ಡೌನ್‌ ಆದರೆ ಈಗ ನಗರಪ್ರದೇಶಗಳಲ್ಲಿ ಕೆಲಸ ಮಾಡುವ ಮಂದಿಮತ್ತೆ ತಮ್ಮ ಗ್ರಾಮಗಳಿಗೆ ಹೋಗಲುಸಿದ್ಧತೆ ಮಾಡಿಕೊಂಡಿದ್ದಾರೆ.‌ರ್ಕಾರದ ಈಗಿನ ಮಾರ್ಗಸೂಚಿಯಂತೆಕಾರ್ಮಿಕರ ಕೆಲಸಕ್ಕೆ ಯಾವುದೇ ರೀತಿಯ ತೊಂದರೆಇಲ್ಲ. ತಮ್ಮ ಕೆಲಸವನ್ನು ಮಾಡಲು ಸರ್ಕಾರ ಅನುವುಮಾಡಿದೆ. ಈ ಸಂಬಂಧ ಹೊಸ ನಿಯಮ ಏನೂ ಬಂದಿಲ್ಲ.ಕಟ್ಟಡ ಕಾರ್ಮಿಕರು ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದಾರೆ.

ಸುಭಾಷ್‌ ಆಲದಕಟ್ಟೆ. ಕಾರ್ಮಿಕ ಅಧಿಕಾರಿ

ಚಿ.ನಿ.ಪುರುಷೋತ್ತಮ್‌

ಟಾಪ್ ನ್ಯೂಸ್

1-leo

Football;ಕೇರಳದಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಡಲಿರುವ ದಿಗ್ಗಜ ಲಿಯೋನೆಲ್ ಮೆಸ್ಸಿ

delhi air

Delhi ಮಿತಿ ಮೀರಿದ ವಾಯು ಮಾಲಿನ್ಯ: ಸರಕಾರಿ ಕಚೇರಿಗಳ 50% ಸಿಬಂದಿಗಳಿಗೆ ಮನೆಯಿಂದಲೇ ಕೆಲಸ

1-wqewqe

BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್

1-wewqewq

Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು

1-shaa

Success ನಿಮ್ಮನ್ನು ಪ್ರತ್ಯೇಕಿಸಲು ಮತ್ತು ವೈಫಲ್ಯಕ್ಕೆ ಕಾರಣವಾಗಬಹುದು: ಶಾರುಖ್ ಖಾನ್

Arecanut

Hike Price: ಮಾರುಕಟ್ಟೆಯಲ್ಲಿ ಡಬ್ಬಲ್‌ ಚೋಲ್‌ ಚಾಲಿ ಅಡಿಕೆ ಧಾರಣೆ ಏರಿಕೆ

ANF-Coombing

History: ನಕ್ಸಲ್‌ ಚಳವಳಿಯ ರಕ್ತಸಿಕ್ತ ಇತಿಹಾಸ; ಸಾವಿನೊಂದಿಗೆ ಪೊಲೀಸ್‌-ನಕ್ಸಲ್‌ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

4-kunigal

Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ

14-kunigal

Kunigal: ಟೈರ್ ಸ್ಪೋಟಗೊಂಡು ಕಾರು ಪಲ್ಟಿ: ಐಟಿ ಉದ್ಯೋಗಿ ದುರ್ಮರಣ

K. N. Rajanna: “ಸರ್ಕಾರ ತೆಗಿತೀನಿ ಅನ್ನೋದು ಪ್ರಜಾಪ್ರಭುತ್ವಕ್ಕೆ ಅವಮಾನ’

K. N. Rajanna: “ಸರ್ಕಾರ ತೆಗಿತೀನಿ ಅನ್ನೋದು ಪ್ರಜಾಪ್ರಭುತ್ವಕ್ಕೆ ಅವಮಾನ’

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

1-leo

Football;ಕೇರಳದಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಡಲಿರುವ ದಿಗ್ಗಜ ಲಿಯೋನೆಲ್ ಮೆಸ್ಸಿ

delhi air

Delhi ಮಿತಿ ಮೀರಿದ ವಾಯು ಮಾಲಿನ್ಯ: ಸರಕಾರಿ ಕಚೇರಿಗಳ 50% ಸಿಬಂದಿಗಳಿಗೆ ಮನೆಯಿಂದಲೇ ಕೆಲಸ

8

Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ

1-mag-1

Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್

de

Kulgeri: ಟ್ರ್ಯಾಕ್ಟರ್ ಹಿಂಬದಿಗೆ ಬೈಕ್ ಡಿಕ್ಕಿ; ಸವಾರ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.