ಅಕ್ಕಿ ಬದಲು ರಾಗಿ ಕೊಡೀವಿ!

Team Udayavani, Apr 29, 2021, 3:54 PM IST

Millet instead of rice!

ಮಧುಗಿರಿ: ರಾಜ್ಯಾದ್ಯಂತ ಲಾಕ್‌ಡೌನ್‌, ಲಾಕ್‌ಡೌನ್‌ ಆದರೆ, ಬಡತನ ರೇಖೆಗಿಂತ ಕೆಳಗಿರುವ, ಕೂಲಿ ಕಾರ್ಮಿಕರು, ಶ್ರಮಿಕ ವರ್ಗಕ್ಕೆ ಯಾವುದೇ ಆಧಾರವಿಲ್ಲದೆ 15 ದಿನ ಲಾಕ್‌ಡೌನ್‌ ಘೋಷಿಸಿದಸರ್ಕಾರ ಈಗ ಅವರಿಗೆ ತಿನ್ನಲು ರೈತರಿಂದ ಬೆಂಬಲ ಬೆಲೆಗೆ ಖರೀದಿಸಿದ ರಾಗಿಯನ್ನು ಕೊಟ್ಟುಅಕ್ಕಿಯನ್ನು ತಡೆಹಿಡಿದಿದೆ.

ಇದೊಂದು ರೀತಿಯಲ್ಲಿ ಒಂದು ತಲೆಯಿಂದ 3ಕೆ.ಜಿ ಅಕ್ಕಿಯನ್ನು ಕಿತ್ತುಕೊಂಡು ರಾಗಿಕೊಟ್ಟಂತಾಗಿದೆ. ಆದರೂ ಬಡವರ 3 ಕೆ.ಜಿ.ಅಕ್ಕಿ ಮಾತ್ರ ಖೋತಾ ಆಗಿರುವುದು ಸ್ಪಷ್ಟ. ತಾಲೂಕಿನಲ್ಲಿ ರಾಗಿ ಖರೀದಿ ಕೇಂದ್ರ ಆರಂಭವಾಗಿ 2 ವರ್ಷ ಕಳೆದಿದ್ದು, ಈಬಾರಿಯೂ ರಾಗಿ ಖರೀದಿ ನಡೆದಿತ್ತು.ಇದರಲ್ಲಿ ಖರೀದಿ ಅವಧಿಯಲ್ಲಿ 8,600ಕ್ವಿಂಟಲ್‌ ರಾಗಿಯನ್ನು 526 ರೈತರಿಂದ ಪಡೆದಆಹಾರ ಇಲಾಖೆಯು ಮತ್ತೆ ಪಡಿತರ ಗ್ರಾಹಕರಿಗಾಗಿಹಂಚಲು ಇದೇ ರಾಗಿಯನ್ನು ಬಳಸಲು ಮುಂದಾಗಿದೆ.

ಸಿಎಂ ಮನೆ ಮುಂದೆ ಧರಣಿ ಎಚ್ಚರಿಕೆ: ಖರೀದಿಯಲ್ಲಿ139 ರೈತರಿಗೆ ಹಣ ಮಂಜೂರಾಗಿದ್ದು, ಉಳಿದ 344ರೈತರ ಹಣವನ್ನು ಇನ್ನೂ ಬಾಕಿಉಳಿಸಿಕೊಂಡಿದೆ. ಇದು ರೈತರಿಗೆ ಮಾಡಿದನ್ಯಾಯವಂತೂ ಅಲ್ಲ. ಇದನ್ನು ಬೇಗ ಬಿಡುಗಡೆಮಾಡಬೇಕೆಂದು ಶಾಸಕ ಎಂ.ವಿ.ವೀರಭದ್ರಯ್ಯಸರ್ಕಾರವನ್ನು ಒತ್ತಾಯಿಸಿದ್ದು, ಅರಸೀಕೆರೆ ಶಾಸಕಶಿವಲಿಂಗೇಗೌಡರು ರೈತರ ರಾಗಿ ಹಣ ಕೊಡದಿದ್ದರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂರುವುದಾಗಿಎಚ್ಚರಿಸಿದ್ದಾರೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಲಾಕ್‌ಡೌನ್‌ದಿಂದ ಕೆಲಸ ತೊರೆದು ಸ್ವಗ್ರಾಮಗಳಿಗೆ ಬಂದಿರುವಬಡವರಿಗೆ 2 ಕೆ.ಜಿ. ಅಕ್ಕಿ ಮಾತ್ರ ಎಂದಿದ್ದು, ಬರಸಿಡಿಲುಬಡಿದಂತಾಗಿದೆ. ಇದು ಯಾವ ನ್ಯಾಯ? ನಮ್ಮಹಣದಿಂದ ನಮಗೆ ಅಕ್ಕಿ ಕೊಡಲು ಆಗಲ್ಲವೆಂದರೆ ಸರ್ಕಾರವೇಕೆ ಎಂಬ ನೋವಿನ ಆಕ್ರೋಶದ ನುಡಿಗಳು ಸರ್ಕಾರವನ್ನು ಕೇಳುತ್ತಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್‌ ವೈ.ವಿ.ರವಿ, ಸರ್ಕಾರದ ಕೆಲಸ ಮಾಡಲು ನಾವಿಲ್ಲಿದ್ದು, ಆದೇಶಗಳನ್ನು ಪಾಲಿಸುವುದಷ್ಟೆ ನಮ್ಮಕೆಲಸ. ಮುಂದಿನ ತಿಂಗಳಲ್ಲಿ ಈ ಸಮಸ್ಯೆ ಬಗೆಹರಿಯುವವಿಶ್ವಾವಿದೆ ಎಂದಿದ್ದಾರೆ.

ರಾಜ್ಯ ಸರ್ಕಾರದ ಕೆಲವು ನೀತಿಗಳುನಿಜಕ್ಕೂ ಆಶ್ಚರ್ಯ ತಂದಿದೆ.ಯಾರು ಇವರಿಗೆಲ್ಲಕಾನೂನು ಹೇಳುತ್ತಾರೋ ತಿಳಿಯದು.ಒಬ್ಬ ಮನುಷ್ಯ 2ಕೆ.ಜಿ. ಅಕ್ಕಿಯಲ್ಲಿತಿಂಗಳು ಬದುಕಬೇಕೆಂದರೆ ಹೇಗೆ ಸಾದ್ಯ. ಇಂತಹ ತಲೆಕೆಟ್ಟನಿರ್ಧಾರಗಳಿಂದ ಸರ್ಕಾರ ಹಿಂದೆ ಸರಿಯಬೇಕು. ಹಸಿದ ಬಡವನಿಗೆ ಹೊಟ್ಟೆ ತುಂಬಾಅನ್ನ ನೀಡದ ಸರ್ಕಾರ ಸರ್ಕಾರವೇ ಅಲ್ಲ.

– ಎಂ.ವಿ.ವೀರಭದ್ರಯ್ಯ, ಶಾಸಕ

ಮಧುಗಿರಿ ಸತೀಶ್‌.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

suicide (2)

Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

4-pavagada

Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು

1-pavagada

Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.