ತುಮಕೂರು ಇನ್‌ವೆಸ್ಟರ್‌ಮೀಟ್ ನಡೆಸಲು ಸಚಿವ ಶೆಟ್ಟರ್ ಚಿಂತನೆ
Team Udayavani, May 23, 2020, 5:44 AM IST
ತುಮಕೂರು: ತುಮಕೂರು ಕೈಗಾರಿಕಾ ಕ್ಷೇತ್ರದಲ್ಲಿ ಭಾರೀ ಪ್ರಗತಿ ಕಾಣುತ್ತಿದೆ, ಕೈಗಾರಿಕೆಗಳಿಗೆ ಇನ್ನೂ ಉತ್ತೇಜನ ನೀಡಲು ನಗರದಲ್ಲಿ ಸ್ಥಳೀಯ ಹೂಡಿಕೆದಾರರು ಮತ್ತು ಚೀನಾ ದೇಶದಿಂದ ಹೊರಬರುವ ವಿಶ್ವದ ಇತರೆ ದೇಶಗಳ ಹೂಡಿಕೆದಾರರನ್ನು ಆಕರ್ಷಿಸಲು ತುಮಕೂರು ಇನ್ವೆಸ್ಟರ್ ಮೀಟ್ ಮಾಡಲು ಸಂಸದ ಜಿ.ಎಸ್.ಬಸವರಾಜ್ ಅವರು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ಗಮನ ಸೆಳೆದಾಗ, ಸಚಿವರಿಂ ದ ಸಕಾರಾತ್ಮಕ ಸ್ಪಂದನೆ ದೊರೆತಿದೆ.
ಈ ಬಗ್ಗೆ ಸಚಿವರು ಮಾತನಾಡಿ, ರಾಜಧಾನಿ ಬೆಂಗಳೂರಿಗೆ ಉಪ ನಗರದಂತಿ ರುವತುಮಕೂರಿನವಸಂತನರಸಾಪುರದ ನಿಮ್j, ಇಂಡಸ್ಟ್ರಿಯಲ್ ನೋಡ್, ಚನ್ನೆ- ಬೆಂಗಳೂರು- ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್ ಹೀಗೆ ಯಾವುದೇ ಹೆಸರಿನಲ್ಲಿ ಕರೆದರೂ ಗ್ರೇಟರ್ ನೊಯ್ಡಾ ಬಿಟ್ಟರೆ ದೇಶದಲ್ಲಿಯೇ ಎರಡನೇ ಅತಿ ದೊಡ್ಡ ಕೈಗಾರಿಕಾ ಪ್ರದೇಶ ವಸಾಹತು ಹೊಂದಿದೆ ಎಂದರು.
ವಸಂತನರಸಾಪುರ ಕೈಗಾರಿಕಾ ಪ್ರದೇಶ, ತುಮಕೂರು ಸ್ಮಾರ್ಟ್ ಸಿಟಿ ಮತ್ತು ಈ ಎರಡರ ಮಧ್ಯೆ ಬರುವ ಪ್ರದೇಶದಲ್ಲಿ ಇನ್ನೊಂದು ನಗರವೂ ಸೇರಿ ದಂತೆ ತುಮಕೂರು ತ್ರಿವಳಿ ನಗರವಾಗಲಿ ದೆ, ಇಲ್ಲಿಗೆ ನಿಗದಿಯಾಗಿರುವ ಎತ್ತಿನಹೊಳೆ ಅಲೋಕೇಷನ್ ಹಿಂಪಡೆದಿರು ವುದು ಅಕ್ಷಮ್ಯ ಅಪರಾಧ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಆತಂಕ ವ್ಯಕ್ತಪಡಿಸಿದರು. ಈ ವೇಳೆ ಸಂಸದ ಜಿ.ಎಸ್.ಬಸವರಾಜ್ ನೀರಿನ ಅಲೋಕೇಷನ್ ನಿಗದಿ ಮಾಡಲು ಮನವಿ ಸಲ್ಲಿಸಿದರು.
ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ರವರ ಸಲಹೆಯಂತೆ ತುಮಕೂರಿನ ಶಕ್ತಿಪೀಠ ಫೌಂಡೇಷನ್,ಹಲ ವು ದೇಶ, ರಾಜ್ಯದ ಇತರ ಸಂಸ್ಥೆಗಳ ಸಹಯೋಗ ದಲ್ಲಿ ತುಮಕೂರು ಇನ್ವೆಸ್ಟರ್ ಮೀಟ್ ಮಾಡುವ ಬಗ್ಗೆ ಸಚಿವ ರಿಗೆ ಕುಂದ ರನಹಳ್ಳಿ ರಮೇಶ್ ಮನವಿ ಮಾಡಿದರು. ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗುವು ದು ಎಂದು ಬಸವರಾಜ್ ತಿಳಿಸಿದರು.
ಸಚಿವರು ನೀವು ಯಾವಾಗ ಬೇಕಾದರೂ ಮಾಡಬಹುದು ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಪಾವಗಡದ ಎಸ್.ಶಿವ ಪ್ರಸಾದ್ ಸ್ಥಳೀಯರಿಗೆ ಉದ್ಯೋಗ ನೀಡಲು ಅಗತ್ಯ ಕ್ರಮಕೈಗೊಳ್ಳಲು ಸಚಿವ ರಲ್ಲಿ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.