ಬೇಗೂರು ಕೆರೆ ಕೋಡಿ ಒಡೆದು ನೀರು ಹೊರ ಬಿಟ್ಟ ದುಷ್ಕರ್ಮಿಗಳು
ರೈತರಲ್ಲಿ ಆತಂಕ; ಠಾಣೆಗೆ ದೂರು : ಹೇಮಾವತಿ ಎಇಇ ರವಿ
Team Udayavani, Aug 25, 2022, 9:18 PM IST
ಕುಣಿಗಲ್ : ಕಿಡಿಗೇಡಿಗಳು ತಮ್ಮ ಸ್ವಾರ್ಥಕ್ಕಾಗಿ ಕೆರೆಯ ಕೋಡಿಯನ್ನು ಹೊಡೆದು, ನೀರನ್ನು ಹೊರಬಿಟ್ಟಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಬೇಗೂರು ಕೆರೆಯಲ್ಲಿ ಗುರುವಾರ ನಡೆದಿದೆ.
ಈ ಭಾರಿ ಸತತವಾಗಿ ಸುರಿದ ನಿರಂತರ ಮಳೆಯಿಂದ್ದಾಗಿ ಕಳೆದ ೨೨ ವರ್ಷಗಳ ಬಳಿಕ ಬೇಗೂರು ಕೆರೆ ತುಂಬಿ ಕೆರೆ ಕೋಡಿ ಬಿದ್ದಿದೆ, ಇದರಿಂದ ಕೆರೆಯ ಅಚ್ಚುಕಟ್ಟು ಪ್ರದೇಶದ ರೈತರ ಸಂತಸಕ್ಕೆ ಕಾರಣವಾಗಿದೆ, ಸಂತಸದಲ್ಲಿ ಇದ್ದ ರೈತರಿಗೆ ದುಷ್ಟಕರ್ಮಿಗಳು ಕೆರೆಯ ಕೋಡಿ ಹೊಡೆದು ನೀರು ಹೊರ ಬಿಟ್ಟಿರುವುದರಿಂದ ಅಘಾತಕ್ಕೆ ಕಾರಣವಾಗಿದೆ.
ಚುರುಕುಗೊಂಡ ದುರಸ್ಥಿ ಕಾರ್ಯ
ದುಷ್ಟಕರ್ಮಿಗಳು ಕೆರೆಯ ಕೋಡಿಯ ಸುಮಾರು ನಾಲ್ಕು ಅಡಿಗೂ ಅಧಿಕ ಕಲ್ಲು ತೆಗೆದು ಸುಮಾರು ಎರಡು ಅಡಿ ಅಳ ತೆಗೆದು ನೀರನ್ನು ಹೊರಗೆ ಬಿಟ್ಟಿದ್ದಾರೆ, ಇದನ್ನು ನೋಡಿದ ಗ್ರಾಮಸ್ಥರು ಹೇಮಾವತಿ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ, ತಕ್ಷಣ ಕಾರ್ಯಪ್ರವೃತರಾದ ಹೇಮಾವತಿ ಎಇಇ ರವಿ ಸಿಬ್ಬಂದಿಗಳೊAದಿಗೆ ಸ್ಥಳಕ್ಕೆ ದೌಡಾಯಿಸಿದರು, ದುಷ್ಟಕರ್ಮಿಗಳು ಹೊಡೆದು ಹಾಕಿರುವ ಕೆರೆಯ ಕೋಡಿಯನ್ನು ಪರಿಶೀಲಿಸಿದರು, ಬಳಿಕ ಸ್ಥಳೀಯ ಜನರ ಸಹಕಾರದೊಂದಿಗೆ ಹಾಳಾಗಿರುವ ಕೆರೆಯ ಕೋಡಿ ಜಾಗಕ್ಕೆ ಕಲ್ಲುಗಳನ್ನು ಹಾಕಿ ಮಣ್ಣಿನ ಚೀಲಗಳನ್ನು ಬಿಟ್ಟಿ ದುರಸ್ಥಿ ಮಾಡಿದರು.
ಕೆರೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಕಿಡಿಗೇಡಿಗಳು ತಮ್ಮ ಜಮೀನು ಮುಳುಗಡೆ ಆಗುತ್ತದೆ ಎಂದು ಕೆರೆ ಒತ್ತುವರಿದಾರರು ಕೆರೆಯ ಕೋಡಿಯ ಕಲ್ಲನ್ನು ತೆಗೆದು ನೀರನ್ನು ಹೊರಗಡೆ ಬಿಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪೊಲೀಸರಿಗೆ ದೂರು
ಕೆರೆ ಕೋಡಿ ಹಾಳು ಮಾಡಿರುವ ಸಂಬಂಧ ಪತ್ರಕರ್ತರೊಂದಿಗೆ ಮಾತನಾಡಿದ ಕುಣಿಗಲ್ ಹೇಮಾವತಿ ಎಇಇ ರವಿ, ಯಾರೋ ದುಷ್ಕರ್ಮಿಗಳು ಕೆರೆಯ ಕೋಡಿಯ ಕಲ್ಲನ್ನು ತೆಗೆದು ನೀರನ್ನು ಹೊರಬಿಟ್ಟಿರುವ ವಿಚಾರ ತಿಳಿದು ಸ್ಥಳಕ್ಕೆ ತೆರಳಿ ಹಾನಿಯಾಗಿರುವ ಕೋಡಿ ಜಾಗಕ್ಕೆ ಕಲ್ಲುಗಳು ಹಾಕಿಸಿ ಮಣ್ಣಿನ ಮೂಟೆಯನ್ನು ಬಿಟ್ಟು ತಾತ್ಕಾಲಿಕವಾಗಿ ದುರಸ್ಥಿ ಮಾಡಲಾಗಿದೆ ಆದರೆ ಅಲ್ಪ ಪ್ರಮಾಣದಲ್ಲಿ ನೀರು ಹೊರ ಹೋಗುತ್ತಿದೆ, ಕತ್ತಲೆಯಾದ ಕಾರಣ ಸದ್ಯಕ್ಕೆ ಕಾಮಗಾರಿ ನಿಲ್ಲಿಸಲಾಗಿದೆ ನಾಳೆ ಬೆಳಗ್ಗೆ ಇದರ ದುರಸ್ಥಿ ಮಾಡಲಾಗುವುದು ಎಂದು ಹೇಳಿದ ಅವರು ಕೆರೆ ಕೋಡಿ ಹೊಡೆದಿರುವುದು ಅಪರಾಧವಾಗಿದೆ ಕೆರೆ ಕೋಡಿ ಹೊಡೆದಿರುವವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಕ್ರಮಕೈಗೊಳ್ಳಲು ಪೊಲೀಸರಿಗೆ ದೂರು ನೀಡಲಾಗುವುದೆಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.