Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ


Team Udayavani, May 17, 2024, 5:55 PM IST

1——-qweweqw

ಕೊರಟಗೆರೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅಮಾಯಕರಿಗೆ ವಂಚನೆ ಮಾಡಿರುವ ಮೊಹಮ್ಮದ್ ಜುಬೇರ್ ರನ್ನು ಸಚಿವರ ಆದೇಶದಂತೆ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಿ ಪಕ್ಷದ ಪದವಿಯನ್ನು ವಜಾಗೊಳಿಸಲಾಗಿದೆ ಎಂದು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್ ತಿಳಿಸಿದರು.

ಪಟ್ಟಣದ ರಾಜೀವ್ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿ, ಕೊರಟಗೆರೆ ಪಟ್ಟಣದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೊಹಮ್ಮದ್ ಜುಬೇರ್ ಬೆಂಗಳೂರು ಸೇರಿದಂತೆ ಹಲವು ಕಡೆ ಗೃಹ ಸಚಿವರ ಹೆಸರನ್ನು ದುರ್ಬಳಕೆ ಮಾಡಿಕೊಂಡು, ಅವರ ಜತೆಯಲ್ಲಿ ಹಿಂದೆ ಅವರು ಶಾಸಕರಾಗಿದ್ದ ಕಾಲದಲ್ಲಿ ತೆಗೆಸಿಕೊಂಡಿದ್ದ ಪೋಟೋವನ್ನು ತೋರಿಸಿ ವಂಚಿಸಿರುವುದಾಗಿ ತಿಳಿದುಬಂದಿದೆ. ಇಂತಹ ವಂಚಕರನ್ನು ಗೃಹ ಸಚಿವರು ಎಂದೂ ಕ್ಷೆಮಿಸುವುದಿಲ್ಲ. ಕಾಂಗ್ರೆಸ್ ಪಕ್ಷ ಇಂತಹ ನಯವಂಚಕರನ್ನು ಸಹಿಸುವುದಿಲ್ಲ. ಆರೋಪಿ ಜುಬೇರ್ ರಾಜ್ಯಪಾಲರ ಲೆಟರ್, ಅಧಿಕಾರಿಗಳ ಸಹಿ ಮತ್ತು ಹೆಸರುಗಳನ್ನು ಸಹ ದುರುಪಯೋಗ ಮಾಡಿಕೊಂಡಿದ್ದಾನೆ ಎಂದು ಗೊತ್ತಾಗಿದ್ದು ಆದ್ದೆರಿಂದ ಈ ಕೋಡಲೆ ಅವನನ್ನು ಪಕ್ಷದಿಂದ ವಜಾಗೊಳಿಸಿ, ಉಚ್ಚಾಟಿಸಲಾಗಿದೆ ಎಂದರು.

ಗ್ರಾಮಾಂತರ ಬ್ಲಾಕ್ ಕಾಂಗ್ರಸ್ ಆಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ,’ಡಾ.ಜಿ.ಪರಮೇಶ್ವರ್ ಜತೆ ಕೊರಟಗೆರೆ ಕ್ಷೇತ್ರ ಸೇರಿದಂತೆ ಹಲವು ಕಡೆ ಸಾವಿರಾರು ಜನರು ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ, ಜುಬೇರ್ ನಂತಹ ಪಕ್ಷದ ಘಟಕಗಳ ಅಧ್ಯಕ್ಷರುಗಳು ನೂರಾರು ಮಂದಿ ಪತ್ರದೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ, ಆದರೆ ಯಾರೋಬ್ಬರೂ ಜುಬೇರ್‌ನ ಹಾಗೆ ಈ ರೀತಿ ದುರುಪಯೋಗ ಮಾಡಿಕೊಂಡಿಲ್ಲ, ಆದರೆ ಕೆಲವು ಮಾಧ್ಯಮಗಳಲ್ಲಿ ಪತ್ರಿಕೆಗಳಲ್ಲಿ ಅನಗತ್ಯವಾಗಿ ಡಾ.ಜಿ.ಪರಮೇಶ್ವರ ರವರ ಹೆಸರನ್ನು ತರಲಾಗುತ್ತಿದ್ದು ಇದು ತಪ್ಪಾಗಿ ಅರ್ಥೈಸಲಾಗುತ್ತಿದೆ, ಈಗಾಗಲೆ ಆರೋಪಿ ಜುಬೇರ್ ನನ್ನು ಬೆಂಗಳೂರು ಕೆಂಗೇರಿ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದು ಆರೋಪಿಗೆ ತಕ್ಕ ಶಿಕ್ಷೆ ಆಗಲಿದೆ ಎಂದರು.

ಇನ್ನು ಮುಂದೆ ಗೃಹ ಸಚಿವರ ಹೆಸರನ್ನು ಹೇಳಿಕೊಂಡು ದುರುಪಹೋಗ ಮಾಡಿಕೊಳ್ಳುವ ಯಾವುದೇ ವ್ಯಕ್ತಿಯಾಗಲಿ ಅವರನ್ನು ಗೃಹ ಸಚಿವರು ಸುಮ್ಮನೆ ಬಿಡುವುದಿಲ್ಲ. ಪಕ್ಷ ಸಹ ಅಂತವರನ್ನು ಇಟ್ಟುಕೊಳ್ಳದೆ ವಜಾಗೊಳಿಸಿ ಕಾನೂನಿಗೆ ಒಪ್ಪಿಸಲಾಗುತ್ತದೆ ಎಂದು ಎಚ್ಚರಿಸಿದರು.

ತಾಲೂಕು ಅಲ್ಪಸಂಖ್ಯಾತ ಮುಖಂಡ ಮಹಮದ್ ಮಕ್ತಿಯಾರ್ ಮಾತನಾಡಿ, ‘ಜುಬೇರ್‌ ಮಾಡಿರುವ ವಂಚನೆ ಅಪರಾದಗಳನ್ನು ನಮ್ಮ ಧರ್ಮದವರು ಸೇರಿದಂತೆ ಪಕ್ಷದವರು ಸಹಿಸುವುದಿಲ್ಲ, ಅಪರಾಧ ಯಾರೇ ಮಾಡಿದರೂ ಅಪರಾಧವೇ, ಆದರೆ ಇದನ್ನು ಬೇರೆ ಎಲ್ಲೋ ತೆಗೆದುಕೊಂದು ಹೋಗುವುದು ಸಮಜಂಸವಲ್ಲ. ಈ ರೀತಿಯ ಅಪರಾಧಿಗಳು ಎಲ್ಲಾ ಪಕ್ಷಗಳಲ್ಲೂ ಜಾತಿ ಧರ್ಮಗಳಲ್ಲೂ ಇದ್ದಾರೆ ಇದಕ್ಕಾಗಿ ಗೃಹ ಸಚಿವರನ್ನು ಎಳೆ ತರುವುದು ಮೂರ್ಖತನ.ಜುಬೇರ್ ಚುನಾವಣ ಸಮಯದಲ್ಲಿ ಕಾಣಿಸಿಕೊಂಡವನು ಇಲ್ಲಿಯವರೆಗೂ ಪಕ್ಷದ ಕಾರ್ಯಕ್ರಮ ಮತ್ತು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿಲ್ಲ ಎಂದರು.

ಮಹಿಳಾ ಘಟಕದ ಅಧ್ಯಕ್ಷೆ ಜಯಮ್ಮ ಮಾತನಾಡಿ ‘ಡಾ.ಜಿ.ಪರಮೇಶ್ವರ್ ಪಕ್ಷದಲ್ಲಿ ಮತ್ತು ಸಾರ್ವಜನಿಕವಾಗಿ ನಡೆಯುವ ತಪ್ಪುಗಳನ್ನು ಸಹ ಸಹಿಸುವುದಿಲ್ಲ, ಅಂತಹ ಪರಿಸ್ಥಿತಿಯಲ್ಲಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಇಂತಹ ಅಪರಾಧಿಯನ್ನು ನಮ್ಮ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ. ಈ ವಂಚಕ ಜುಬೇರ್ ಮನಸ್ಸಿನಲ್ಲೇ ಲೆಕ್ಕಾಚಾರ ಮಾಡಿಕೊಂಡು ಹಿಂದೆ ಡಾ.ಜಿ.ಪರಮೇಶ್ವರ್ ರವರು ಶಾಸಕರಾದ ಕಾಲದಲ್ಲಿ ತೆಗೆಸಿಕೊಂಡ ಪೋಟೋವನ್ನು ಇಟ್ಟಿಕೊಂಡು ಇಷ್ಟು ದೊಡ್ಡ ವಂಚನೆ ಮಾಡಿದ್ದಾನೆ ಎಂದರೆ ಅವನಿಗೆ ತಕ್ಕ ಶಿಕ್ಷೆ ಆಗಬೇಕು ಈ ಘಟನೆಯನ್ನು ಗೃಹ ಸಚಿವರಿಗೆ ವಿನಾಕಾರಣ ತಾಳೆಹಾಕಿದರೆ ಮಹಿಳಾ ಕಾಂಗ್ರೆಸ್ ಸುಮ್ಮನಿರುವುದಿಲ್ಲ’ ಎಂದರು.

ಸುದ್ದಿಗೋಷ್ಠಿಯಲ್ಲಿ ಪ.ಪಂ.ಸದಸ್ಯರುಗಳಾದ ಎ.ಡಿ.ಬಲರಾಮಯ್ಯ, ಕೆ.ಆರ್.ಓಬಳರಾಜು, ನಾಗರಾಜು, ನಂದೀಶ್, ಪಕ್ಷದ ಮುಖಂಡರುಗಳಾದ ಮಹಾಲಿಂಗಪ್ಪ, ಗಣೇಶ್, ನಾಜೀರ್ ಅಹಮದ್, ಕವಿತಾ, ಲಕ್ಷ್ಮಿದೇವಮ್ಮ, ಸುಮಾ, ನಾಸೀರ್, ಇಸ್ಮಾಯಿಲ್, ಇರ್ಷಾದ್, ಜಮೀರ್, ಮುರಳಿ, ಯುವಕಾಂಗ್ರೆಸ್‌ನ ವಿನಯ್‌ಕುಮಾರ್, ಅರವಿಂದ್, ದೀಪಕ್, ರಘುವೀರ್, ಎರ್‌ಟೆಲ್ ಗೋಪಿ ಸೇರಿದಂತೆ ಇನ್ನಿತರರು ಹಾಜರಿದ್ದರು.

 

ಟಾಪ್ ನ್ಯೂಸ್

Uchila Shree Mahalaxmi temple: 400 ಗ್ರಾಂ ತೂಕದ ಲಕ್ಷ್ಮೀ ಸರ ಸಮರ್ಪಣೆ

Uchila Shree Mahalaxmi Temple: 400 ಗ್ರಾಂ ತೂಕದ ಲಕ್ಷ್ಮೀ ಸರ ಸಮರ್ಪಣೆ

BJP Protest: ಸಿದ್ದರಾಮಯ್ಯರದ್ದು ಲೂಟಿಕೋರ ಸರಕಾರ: ನಳಿನ್‌ ಕುಮಾರ್‌ ಕಟೀಲು

BJP Protest: ಸಿದ್ದರಾಮಯ್ಯರದ್ದು ಲೂಟಿಕೋರ ಸರಕಾರ: ನಳಿನ್‌ ಕುಮಾರ್‌ ಕಟೀಲು

​​Bantwal, ಪುತ್ತೂರಿನ ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭೇಟಿ

​​Bantwal, ಪುತ್ತೂರಿನ ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭೇಟಿ

1-saasdsdsa-d

Vikram Misri ಭಾರತದ ಹೊಸ ವಿದೇಶಾಂಗ ಕಾರ್ಯದರ್ಶಿ

Manjunath Bhandary ಪ್ರಾಕೃತಿಕ ವಿಕೋಪ ಮೃತರ ಕುಟುಂಬಕ್ಕೆ ಹೆಚ್ಚಿನ ಪರಿಹಾರಕ್ಕೆ ಮನವಿ

Manjunath Bhandary ಪ್ರಾಕೃತಿಕ ವಿಕೋಪ ಮೃತರ ಕುಟುಂಬಕ್ಕೆ ಹೆಚ್ಚಿನ ಪರಿಹಾರಕ್ಕೆ ಮನವಿ

Subrahmanya: ಕುಮಾರ ಧಾರೆಯಲ್ಲಿ ನೀರಿನ ಮಟ್ಟ ಇಳಿಕೆ

Subrahmanya: ಕುಮಾರ ಧಾರೆಯಲ್ಲಿ ನೀರಿನ ಮಟ್ಟ ಇಳಿಕೆ

Mangaluru ಬೀದಿದೀಪ ಕಂಬಗಳ ಫ್ಯೂಸ್‌ ಬಾಕ್ಸ್‌ಗಳಿಗೆ ಟ್ರಿಪ್ಪರ್‌ ಅಳವಡಿಕೆ

Mangaluru ಬೀದಿದೀಪ ಕಂಬಗಳ ಫ್ಯೂಸ್‌ ಬಾಕ್ಸ್‌ಗಳಿಗೆ ಟ್ರಿಪ್ಪರ್‌ ಅಳವಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tumakuru ಮಕ್ಕಳ ಮಾರಾಟ ಜಾಲ ಪತ್ತೆ: 5 ಮಕ್ಕಳ ರಕ್ಷಣೆ, 7 ಮಂದಿ ಸೆರೆ

Tumakuru ಮಕ್ಕಳ ಮಾರಾಟ ಜಾಲ ಪತ್ತೆ: 5 ಮಕ್ಕಳ ರಕ್ಷಣೆ, 7 ಮಂದಿ ಸೆರೆ

7-kunigal

Kunigal: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌; ಮನೆಯ ಗೃಹಪಯೋಗಿ ವಸ್ತುಗಳು ಬೆಂಕಿಗಾಹುತಿ

ನಾನು ಸೋತಿದ್ದೇನೆ, ಸತ್ತಿಲ್ಲ: ಡಿ.ಕೆ. ಸುರೇಶ್‌ ಗುಡುಗು

Kunigal ನಾನು ಸೋತಿದ್ದೇನೆ, ಸತ್ತಿಲ್ಲ: ಡಿ.ಕೆ. ಸುರೇಶ್‌ ಗುಡುಗು

11-koratagere

Koratagere: ರೋಗಿಗಳ ಜೊತೆ ವೈದ್ಯ ಗಲಾಟೆ; ವೈದ್ಯ ಡಾ.ನವೀನ್ ಅಮಾನತಿಗೆ ಸ್ಥಳೀಯರಿಂದ ಆಗ್ರಹ

10-koratagere

Koratagere: ಹೇಮಾವತಿ ನೀರು ರಾಮನಗರಕ್ಕೆ ಹರಿಸುವ ಕನಸನ್ನು ಶೀಘ್ರವೇ ಕೈಬಿಡಬೇಕು

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

ED

ED; ದಿಲ್ಲಿ ಅಬಕಾರಿ ನೀತಿ ಹಗರಣ: 9ನೇ ಆರೋಪಪಟ್ಟಿ ಸಲ್ಲಿಕೆ

Uchila Shree Mahalaxmi temple: 400 ಗ್ರಾಂ ತೂಕದ ಲಕ್ಷ್ಮೀ ಸರ ಸಮರ್ಪಣೆ

Uchila Shree Mahalaxmi Temple: 400 ಗ್ರಾಂ ತೂಕದ ಲಕ್ಷ್ಮೀ ಸರ ಸಮರ್ಪಣೆ

BJP Protest: ಸಿದ್ದರಾಮಯ್ಯರದ್ದು ಲೂಟಿಕೋರ ಸರಕಾರ: ನಳಿನ್‌ ಕುಮಾರ್‌ ಕಟೀಲು

BJP Protest: ಸಿದ್ದರಾಮಯ್ಯರದ್ದು ಲೂಟಿಕೋರ ಸರಕಾರ: ನಳಿನ್‌ ಕುಮಾರ್‌ ಕಟೀಲು

MONEY (2)

Small savings ಮೇಲಿನ ಬಡ್ಡಿದರದಲ್ಲಿ ಬದಲಾವಣೆ ಇಲ್ಲ

​​Bantwal, ಪುತ್ತೂರಿನ ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭೇಟಿ

​​Bantwal, ಪುತ್ತೂರಿನ ಮಳೆ ಹಾನಿ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.