ಮಾಂಟೆಸ್ಸರಿ ಶಿಕ್ಷಣದಿಂದ ಮಕ್ಕಳಲ್ಲಿ ಮನೋಬಲ
Team Udayavani, Apr 20, 2019, 12:53 PM IST
ತಿಪಟೂರು: ಸುಧೀರ್ಘ ಇತಿಹಾಸ ಹೊಂದಿರುವ ಮಾಂಟೆಸ್ಸರಿ ಶಿಕ್ಷಣ ಪದ್ಧತಿ ಮಕ್ಕಳಲ್ಲಿ ಸಂಘಟನೆ, ಮನೋಬಲದ ಜೊತೆಗೆ ಸಮಾಜದಲ್ಲಿ ಹೇಗೆ ಬದುಕಬೇಕೆಂಬ ಕಲೆಯನ್ನು ಕಲಿಸಲಿದ್ದು, ಮಾಂಟೆಸ್ಸರಿ ಶಿಕ್ಷಣ ಸರಳತೆ ಮತ್ತು ಸಹಜತೆಯ ಪ್ರತೀಕವಾಗಿದೆ ಎಂದು ಬೆಂಗಳೂರು ಇಂಡಿಯನ್ ಮಾಂಟೆಸ್ಸರಿ ಕೇಂದ್ರದ ಅಧ್ಯಕ್ಷ ಡಾ. ಬಿ.ವಿ. ರಾವ್ ತಿಳಿಸಿದರು.
ನಗರದ ಕಲ್ಪತರು ಆಡಿಟೋರಿಯಂನಲ್ಲಿ ಕಲ್ಪತರು ವಿದ್ಯಾಸಂಸ್ಥೆಯ ಇಂಡಿಯನ್ ಮಾಂಟೆಸ್ಸರಿ ಕೇಂದ್ರ ಹಾಗೂ ಇಂಡಿಯನ್ ಮಾಂಟೆಸ್ಸರಿ ತರಬೇತಿ ಕೇಂದ್ರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಮಾಂಟೆಸ್ಸರಿ ಶಿಕ್ಷಣವು ಅಷ್ಟೇನೂ ಪ್ರಾಮುಖ್ಯತೆ ಇರಲಿಲ್ಲ. ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರ ಈ ಶಿಕ್ಷಣ ಪದ್ಧತಿಯನ್ನು ನೋಡಬಹುದಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ನಗರಗಳಲ್ಲಿಯೂ ಮಾಂಟೆಸ್ಸರಿ ಶಿಕ್ಷಣ ಕೇಂದ್ರಗಳನ್ನು ತೆರೆಯಲಾಗಿದೆ. ಇದರಿಂದ ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲಿಯೆ ಕ್ರೀಯಾಶೀಲತೆ, ಸೃಜನಶೀಲತೆ, ಕಲಿಕೆಯಲ್ಲಿ ಆಸಕ್ತಿ ಸೇರಿದಂತೆ ಇತರೆ ಕೌಶಲ್ಯಗಳನ್ನು ಬೆಳೆಸಿಕೊಳ್ಳುವಲ್ಲಿ ಸಹಕಾರಿಯಾಗಲಿದೆ. ಶಿಕ್ಷಕರು ತಾಯಂದಿರ ಸ್ಥಾನದಲ್ಲಿರುವುದರಿಂದ ಮಕ್ಕಳೊಂದಿಗೆ ಮಕ್ಕಳಾಗಿ ಆಟ-ಪಾಠವನ್ನು ಹೇಳಿಕೊಡಬೇಕು ಎಂದು ಕಿವಿಮಾತು ಹೇಳಿದರು.
ಶಿಸ್ತು, ಪ್ರೀತಿ: ನಿರ್ದೇಶಕ ಹಾಗೂ ಕಲಾವಿದ ಸೇತುರಾಮ್ ಮಾತನಾಡಿ, ಶಿಕ್ಷಕರಲ್ಲಿ ಪ್ರೀತಿ ಮತ್ತು ಶಿಸ್ತು ಎರಡೂ ಇರಬೇಕು. ಬೆಳೆಯುವ ಸಿರಿ ಮೊಳಕೆ ಯಲ್ಲಿ ಎಂಬಂತೆ ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿಸಿಕೊಡಬೇಕು. ಮಾಂಟೆಸ್ಸರಿ ಶಿಕ್ಷಣ ಮಕ್ಕಳ ಭವಿಷ್ಯದ ಭದ್ರ ಬುನಾದಿಯಾಗಿದ್ದು, ಶಿಕ್ಷಕರಲ್ಲಿ ಸಾಮಾಜಿಕ ಬದ್ಧತೆ, ತಾಳ್ಮೆ, ಸಂಯಮ, ಶಿಸ್ತು ಬಹಳ ಮುಖ್ಯವಾಗಿರಬೇಕು. ತಂದೆ ತಾಯಿಗಳ ಸ್ಥಾನದಲ್ಲಿದ್ದುಕೊಂಡು ಮಕ್ಕಳನ್ನು ನೋಡಿಕೊಳ್ಳಬೇಕು. ತಮ್ಮ ವೈಯಕ್ತಿಕ ಬದುಕಿನ ಅಂಶಗಳನ್ನು ವೃತ್ತಿಯಲ್ಲಿ ತರಬಾರದು ಇದರಿಂದ ಮಾನಸಿಕ ನೆಮ್ಮದಿ ಹಾಳಾಗ ಲಿದ್ದು ಮಕ್ಕಳ ಭವಿಷ್ಯಕ್ಕೆ ಕೆಡುಕಾಗಲಿದೆ. ಮಾಂಟೆಸ್ಸರಿ ಶಿಕ್ಷಣ ಕೇಂದ್ರಗಳು ಮನೆಯ ವಾತಾವರಣವನ್ನು ಸೃಷ್ಟಿಸಿ ಗುಣಮಟ್ಟದ ಶಿಕ್ಷಣವನ್ನು ನೀಡುವತ್ತಾ ಮಕ್ಕಳ ಮನಸ್ಸಿನಲ್ಲಿ ಸದಾ ನೆಲೆಸಿರಬೇಕು ಎಂದರು.
ಪ್ರತಿಭೆ: ಕೆವಿಎಸ್ ಅಧ್ಯಕ್ಷ ಪಿ.ಕೆ. ತಿಪ್ಪೇರುದ್ರಪ್ಪ ಮಾತನಾಡಿ, ಶಿಕ್ಷಣ ಎಂದರೆ ಶಿಕ್ಷೆ ನೀಡುವುದಲ್ಲ. ಪ್ರೀತಿ, ವಿಶ್ವಾಸ, ಮಮತೆಯಿಂದ ಬೋಧನೆ ಮಾಡುವುದಾಗಿದೆ. ಸಮಾಜವನ್ನು ಸರಿದಾರಿಗೆ ತರುವ ಶಕ್ತಿ ಶಿಕ್ಷಣಕ್ಕಿದ್ದು, ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ತಿಳಿಸುತ್ತಾ, ಅವರಲ್ಲಿ ಅಡಗಿರುವ ಸೂಕ್ತ ಪ್ರತಿಭೆ ಗುರುತಿಸುವಂತಾಗಬೇಕು. ಶಿಕ್ಷಣ ಜಗತ್ತಿನಲ್ಲಿ ಶ್ರೇಷ್ಠ ವೃತ್ತಿಯಾಗಿದ್ದು, ಸಮಾಜದಲ್ಲಿ ಅನೇಕ ಪ್ರತಿಭೆಗಳನ್ನು ಸೃಷ್ಟಿಸುವ ಶಕ್ತಿ ಅಡಗಿದೆ. ಕಾಯ, ವಾಚಾ ಮನಸ್ಸಿನಿಂದ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ವೃತ್ತಿಗೆ ಗೌರವಕೊಟ್ಟಂತಾಗುತ್ತದೆ ಎಂದರು.
ಕೆವಿಎಸ್ ಖಜಾಂಚಿ ಟಿ.ಎಸ್. ಶಿವಪ್ರಸಾದ್ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲೆಂದು ಮಾಂಟೆಸ್ಸರಿ ತರಬೇತಿ ಕೇಂದ್ರ ತೆರೆಯಲಾಗಿದ್ದು, ಇದರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೇರೆ ಬೇರೆ ಭಾಗಗಳಿಂದಲೂ ಇಲ್ಲಿಗೆ ಬಂದು ಅನುಭವಿ ವ್ಯಕ್ತಿಗಳಿಂದ ತರಬೇತಿ ಪಡೆದುಕೊಳ್ಳುತ್ತಿದ್ದು ಉತ್ತಮ ಶಿಕ್ಷಣ ಪಡೆದು ಮಕ್ಕಳ ಸದೃಡ ಭವಿಷ್ಯ ರೂಪಿಸ ಬೇಕೆಂ ದರು. ಇಂಡಿಯನ್ ಮಾಂಟೆಸ್ಸೊರಿ ಶಿಕ್ಷಕರ ತರಬೇತಿ ಕೇಂದ್ರದ ನಿರ್ದೇಶಕರಾದ ಸುಧಾ ಪ್ರಸಾದ್, ಶಾಮಲರಾವ್, ಸುಧಾ ಗೋಪಿನಾಥ್, ವಾಣಿ ವಿಜಯಲಕ್ಷ್ಮೀ, ಆಶಾ ಉಮಾಮಹೇಶ್, ಚಿತ್ರಾ, ಅನ್ನಪೂರ್ಣ, ಸಹ ನಿರ್ದೇಶಕಿ ಕಿರಣ್‌ಶಿವಪ್ರಸಾದ್, ಕಲ್ಪತರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಎಲ್. ಗೀತಾಲಕ್ಷ್ಮೀ, ಕಲ್ಪತರು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಶಿವಣ್ಣ, ಕೆವಿಎಸ್ ಕಾರ್ಯದರ್ಶಿ ಟಿ.ಯು. ಜಗದೀಶಮೂರ್ತಿ, ಸದಸ್ಯರಾದ ಸ್ವರ್ಣಗೌರಿ, ಸುಮನ್ ಸೇರಿದಂತೆ ಮಾಂಟೆಸ್ಸರಿ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು, ಮಕ್ಕಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.