ನಿವೇಶನ ರಹಿತರ ವಸತಿಗೆ ಪಾಲಿಕೆ ಸಜ್ಜು
ಮೊದಲ ಹಂತದ ಅರ್ಹ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಲು ನಿರ್ಣಯ
Team Udayavani, Jul 23, 2020, 12:09 PM IST
ಸಾಂದರ್ಭಿಕ ಚಿತ್ರ
ತುಮಕೂರು: ನಗರದಲ್ಲಿ ಇಂದಿಗೂ ಅನೇಕ ಜನರು ವಾಸಿಸಲು ಒಂದು ಸೂರಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ನಿವೇಶನ ಮತ್ತು ವಸತಿ ಇಲ್ಲದೇ ಇರುವವರಿಗೆ ಪ್ರಧಾನಿ ಮೋದಿಯವರು 2022 ರೊಳಗೆ ದೇಶದ ಎಲ್ಲರಿಗೂ ವಸತಿ ಎಂಬ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ವಸತಿ ಇಲ್ಲದವರಿಗೆ ವಸತಿ ಕಲ್ಪಿಸಲು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು. ನಗರದಲ್ಲಿ ಇಂದಿಗೂ ಅನೇಕ ಕೊಳಗೇರಿಗಳಲ್ಲಿ ಮನೆ ಇಲ್ಲದೇ ನಿವೇಶನವೂ ಇಲ್ಲದೇ ಸಣ್ಣ ಸಣ್ಣ ಗುಡಿಸಲು ಹಾಕಿ ಕೊಂಡು ತಮ್ಮ ಜೀವನ ನಡೆಸುತ್ತಿದ್ದಾರೆ ಅವರಿಗೆ ಸೂರು
ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದ್ದು ಇದಕ್ಕಾಗಿ ಪಾಲಿಕೆಯಲ್ಲಿ ಚಟುವಟಿಕೆ ಚುರುಕಾಗಿದೆ.
ಜಮೀನುಗಳ ತಪಾಸಣೆ: ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನಿವೇಶನ ಮತ್ತು ಮನೆ ಇಲ್ಲದವರ ಸರ್ವೆ ಮಾಡಿದ್ದು ಆ ವೇಳೆಗೆ ಸುಮಾರು 18792 ಜನರು ನಿವೇಶನ ಮತ್ತು ವಸತಿ ಇಲ್ಲ ಎಂದು ನೋಂದಾಯಿಸಿಕೊಂಡಿದ್ದಾರೆ. ಮನೆ ಇಲ್ಲದವರಿಗೆ ಮನೆ ನೀಡಲೇ ಬೇಕು ಎಂದು ಸಂಸದ ಜಿ.ಎಸ್.ಬಸವರಾಜ್ ಮತ್ತು ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್ ಕುಮಾರ್ ಮತ್ತು ಪಾಲಿಕೆ ಆಯುಕ್ತ ರೇಣುಕಾ, ಮತ್ತಿತರೆ ಅಧಿಕಾರಿಗಳು ದೃಢ ಸಂಕಲ್ಪತೊಟ್ಟಿದ್ದು ಅದಕ್ಕಾಗಿ ಹಲವು ಸಭೆ ನಡೆಸಿದ್ದಾರೆ, ಇದರ ಪರಿಣಾಮ ಈಗ ನಗರಕ್ಕೆ ಹೊಂದಿಕೊಂಡಂತೆ ಇರುವ ಸರ್ಕಾರಿ ಜಮೀನುಗಳ ತಪಾಸಣಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ಯೋಜನೆಯಡಿಯಲ್ಲಿ ನಿವೇಶನ ಮತ್ತು ವಸತಿ ಪಡೆಯಬೇಕಾದರೆ ಫಲಾನುಭವಿಗಳ ಮತ್ತು ಆತನ ಪತ್ನಿ ಹೆಸರಿನಲ್ಲಿ ಎಲ್ಲಿಯೂ ನಿವೇಶನ ಅಥವಾ ಜಮೀನು ಇರಲೇಬಾರದು ಎಂಬುದು ನಿಯಮವಿದೆ ಎಂದು ತಿಳಿದು ಬಂದಿದೆ.
ಪಟ್ಟಿ ತಪಾಸಣೆ: ಈ ಸಂಬಂಧ ಆಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಡೆಸಿರುವ ಸಭೆಯಲ್ಲಿ ಮೊದಲ ಹಂತವಾಗಿ ನೋದಾಯಿಸಿಕೊಂಡಿರುವವರಲ್ಲಿ ಅರ್ಹ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಲು ನಿರ್ಣಯ ಮಾಡಲಾಗಿದೆ. ಪ್ರಸ್ತುತ ರಾಜ್ಯ ಸರ್ಕಾರ ಕೋವಿಡ್ -19 ಗೆ ಬೂತ್‌ವಾರು ಮತ್ತು ವಾರ್ಡ್ ವಾರು ರಚಿಸಿರುವ ಟಾಸ್ಕ್ ಪೋರ್ಸ್ ನಿಂದ ಫಲಾನುಭವಿಗಳ ತಪಾಸಣೆ ಮಾಡಿಸಲು ಚಿಂತನೆ ನಡೆಸಿದ್ದು, ಮನೆ-ಮನೆ ಸಮೀಕ್ಷೆ ಮಾಡುವಾಗ ವಸತಿ, ನಿವೇಶನ ರಹಿತರ ಪಟ್ಟಿ ತಪಾಸಣೆ ಮಾಡಲಿದ್ದಾರೆ.
ಸಮತಟ್ಟಾದ ಜಮೀನು: ಎರಡನೇ ಹಂತದಲ್ಲಿ ಪಾಲಿಕೆಯ ವ್ಯಾಪ್ತಿ ಸುತ್ತಲೂ ಇರುವ ಸರ್ಕಾರಿ ಭೂಮಿಗಳನ್ನು ಗುರುತಿಸಿ ಜಿಐಎಸ್ ಲೇಯರ್ ಮಾಡಲು ಕಂದಾಯ ಇಲಾಖೆ ಮುಂದಾಗಿದೆ. ಈಗಾಗಲೇ ಫೈಲಟ್ ಆಗಿ ಏಳು ಗ್ರಾಮಗಳಲ್ಲಿ ಸರ್ಕಾರಿ ಜಮೀನುಗಳ ಲೇಯರ್ ಮಾಡಲಾಗಿದೆ. ನಗರದ ಸುತ್ತವಿರುವ ಬಹುತೇಕ ಜಮೀನು ಕಲ್ಲು-ಗುಡ್ಡ-
ಬಂಡೆಗಳಿಂದ ಕೂಡಿದೆ. ಸಮತಟ್ಟಾದ ಜಮೀನು ದೊರೆಯುವುದು ಕಷ್ಟವಾಗಿದೆ.
ಆರು ತಿಂಗಳಲ್ಲಿ ನಿವೇಶನ: ನಿವೇಶನ ರಹಿತರಿಗೆ ನಿವೇಶನ ವಸತಿ ಕಲ್ಪಿಸಲು ಹೊಸದಾಗಿ ಬಂದಿರುವ ಪಾಲಿಕೆ ಆಯುಕ್ತರು, ಉಪವಿಭಾಗಾಧಿಕಾರಿಯವರು ಮತ್ತು ತಹಶೀಲ್ದಾರ್ ಸೇರಿದಂತೆ ಇತರೆ ಅಧಿಕಾರಿಗಳು ಸುಮಾರು ಆರು ತಿಂಗಳಲ್ಲಿ ನಿವೇಶನ ಮತ್ತು ವಸತಿ ರಹಿತರಿಲ್ಲ ಎಂಬ ಘೋಷಣೆಗೆ ಜಮೀನು ಗುರುತಿಸುವ ಕಾರ್ಯ ಮಾಡುತ್ತೇವೆ ಎಂದು ಹೇಳಿದ್ದಾರೆ, ಪಾಲಿಕೆ ಆಯುಕ್ತರು ಈಗಾಗಲೇ ಕಂದಾಯ ಇಲಾಖೆಗೆ ಪತ್ರ ಬರೆಯುವ ಮೂಲಕ ಚಾಲನೆ ನೀಡಿದ್ದಾರೆ.
ತುಮಕೂರು ನಗರದಲ್ಲಿ 18 ಸಾವಿರಕ್ಕೂ ಹೆಚ್ಚು ಜನರು ನಿವೇಶನ ಮತ್ತು ವಸತಿ ಇಲ್ಲ ಎಂದು ಪಾಲಿಕೆಗೆ ಅರ್ಜಿ ಸಲ್ಲಿಸಿದ್ದಾರೆ. ನಿವೇಶನ ಮತ್ತು ವಸತಿ ನೀಡಲು ಸೂಕ್ತವಾಗಿರುವ ಸರ್ಕಾರಿ ಜಮೀನು ಗುರುತಿಸುವ ಕಾರ್ಯ ನಡೆದಿದೆ. ಮುಖ್ಯಮಂತ್ರಿಯವರು ಮತ್ತು ವಸತಿ ಸಚಿವರು ಇದಕ್ಕೆ ಸ್ಪಂದಿಸಿದ್ದಾರೆ. ಶೀಘ್ರವಾಗಿ ಈ ಕಾರ್ಯ ಮಾಡುತ್ತೇವೆ.
ಜಿ.ಬಿ.ಜ್ಯೋತಿಗಣೇಶ್, ಶಾಸಕ
ನಗರದಲ್ಲಿ ಇರುವ ವಸತಿ ರಹಿತರಿಗೆ ವಸತಿ ಕಲ್ಪಿಸಲು ಪಾಲಿಕೆಯಿಂದ ಅಗತ್ಯ ಕ್ರಮ ಗಳನ್ನು ಕೈಗೊಳ್ಳಲಾಗುತ್ತಿದೆ. ಮೊದಲು ಜಮೀನಿನ ಅಗತ್ಯತೆ ಇದ್ದು ಈ ಸಂಬಂಧವಾಗಿ ತಹಶೀಲ್ದಾರ್ ಅವರಿಗೆ ಪತ್ರ ಬರೆಯಲಾಗಿದೆ. ಆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
● ರೇಣುಕಾ, ಪಾಲಿಕೆ ಆಯುಕ್ತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Uttar Pradesh: ಸಂಭಲ್‌ನ ಪ್ರಾಚೀನ ಬಾವಿಯ ಉತ್ಖನನ, ನವೀಕರಣಕ್ಕೆ ಚಾಲನೆ
Uttarakhand ಹೈಕೋರ್ಟ್ ಸಿ.ಜೆ. ಆಗಿ ನರೇಂದ್ರ ಪ್ರಮಾಣ ವಚನ ಸ್ವೀಕಾರ
PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ
Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ
Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.