ಅಣಬೆ ಕೃಷಿ ಲಾಭದಾಯಕ
Team Udayavani, Jan 11, 2018, 5:44 PM IST
ಶಿರಾ: ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯ ತರುವ ಅಣಬೆ ಕೃಷಿ ರೈತರ ಆರ್ಥಿಕಾಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಅಣಬೆ ಬೇಸಾಯ ಸಹಕಾರಿಯಾಗಿದೆ ಎಂದು ಸ್ಫಟಿಕ ಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು.
ತಾಲೂಕಿನ ಪಟ್ಟನಾಯಕನಹಳ್ಳಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ಅಣಬೆ ಬೇಸಾಯ ತಾಂತ್ರಿಕತೆ ಮತ್ತು ಮಾರಾಟ, ಅಣಬೆ ಬೀಜ ಮತ್ತು ಕಿಟ್ ವಿತರಣಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರೈತರು ಕೃಷಿಯೊಂದಿಗೆ ಲಾಭದಾಯಕ ಉಪ ಕಸುಬಾಗಿರುವ ಅಣಬೆ ಕೃಷಿಗೆ ಸರ್ಕಾರ ಪ್ರೋತ್ಸಾಹ ನೀಡುವುದರೊಂದಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.
ಪ್ರತಿ ತಿಂಗಳು 1ಲಕ್ಷ ರೂ. ಆದಾಯ ತರುವ ಅಣಬೆ ಬೇಸಾಯ ಮಾಡುವ ಮೂಲಕ ರೈತರು ಆರ್ಥಿಕವಾಗಿ ಸದೃಢರಾಗ ಬೇಕೆಂದರು.
ಕೃಷಿಯಲ್ಲಿ ತಂತ್ರಜ್ಞಾನ ಬಳಸಿ: ಕೃಷಿ ಕ್ಷೇತ್ರದಲ್ಲಿ ಪ್ರತಿ ನಿತ್ಯ ಹೊಸ ತಂತ್ರಜ್ಞಾನಗಳ ಆವಿಷ್ಕಾರವಾಗುತ್ತಿದೆ. ರೈತರು ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಆರ್ಥಿಕಾಭಿವೃದ್ಧಿ ಸಾಧಿಸಬೇಕು ಎಂದು ಹೇಳಿದರು.
ಅಣಬೆ ಆರೋಗ್ಯಕ್ಕೆ ಪೂರಕ: ಕಾರ್ಯಾಗಾರದಲ್ಲಿ ಅಣಬೆ ಬೇಸಾಯ ಕುರಿತು ಉಪನ್ಯಾಸ ನೀಡಿದ ವಿಷಯ ತಜ್ಞ ವಿನಯ್, ಅಣಬೆ ಸಸ್ಯಾಹಾರವಾಗಿದ್ದು, ಹೃದ್ರೋಗ, ಮಧುಮೇಹ, ಬಿಪಿಯಂತ ಕಾಯಿಲೆಗಳಿಗೆ ರಾಮಬಾಣವಾಗಿದೆ ಎಂದರು.
ಶೇ.70 ರಷ್ಟು ನೀರಿನ ಅಂಶವಿರುವ ಆಹಾರ ಇದಾಗಿರುವ ಧೂಮಪಾನ ಮತ್ತು ಮದ್ಯಪಾನ ತ್ಯಜಿಸುವಂತರಿಗೆ ಅತ್ಯವಶ್ಯಕ ಆಹಾರವಾಗಿದೆ ಎಂದರು.
ಸಾವಯವ ಅಣಬೆಗೆ ಬೆಲೆ: ಪ್ರತಿ ಕೆಜಿ ಅಣಬೆ ಬೀಜಕ್ಕೆ 55 ರೂ. ಬೆಲೆಯಿದೆ. ಮನೆಯಲ್ಲಿಯೇ ಅಣಬೆ ಬೇಸಾಯ ಮಾಡಿದರೆ ಕೇವಲ 38 ದಿನಗಳಲ್ಲಿ ಬೆಳೆ ಕೈ ಸೇರಲಿದೆ. ರಸಾಯನಿಕ ಗೊಬ್ಬರ ಬಳಸದೆ ಕೇವಲ ಸಾವಯವ
ಪದ್ಧತಿಯಲ್ಲಿ ಅಣಬೆ ಬೆಳೆಯುವ ಕಾರಣ ಉತ್ತಮ ಮಾರುಕಟ್ಟೆ ಸಿಗಲಿದೆ ಎಂದರು.
ಕ್ಯಾನ್ಸರ್‌ಗೆ ಔಷಧ: ತೋಟಗಾರಿಕೆಸಹಾಯಕ ನಿರ್ದೇಶಕ ವಿ.ಶಶಿಧರ ಮಾತನಾಡಿ, ಹೆಚ್ಚು ಪೋಷಕಾಂಶ ಮತ್ತು ರೋಗ ನಿರೋಧಕ ಶಕ್ತಿಯಿರುವ ಅಣಬೆಗೆ ಕ್ಯಾನ್ಸರ್‌ಗೆ ಕಡಿವಾಣ ಹಾಕುವ ಶಕ್ತಿ ಇದೆ. ತಾಲೂಕಿನ ಉಷ್ಣಾಂಶ ಅಣಬೆ ಬೆಳೆ ಬೆಳೆಯಲು ಸೊಕ್ತವಾಗಿದ್ದು, ರೈತರು ಹೆಚ್ಚು ಆಸಕ್ತಿ ತೋರಬೇಕಿದೆ ಎಂದರು.
ಜಿಲ್ಲಾ ಪಂಚಾಯತಿ ಸದಸ್ಯೆ ಅಂಬುಜಾಕ್ಷಿ ಎಸ್.ಆರ್.ಗೌಡ, ತಾಲೂಕು ಪಂಚಾಯ್ತಿ ಸದಸ್ಯ ಕೆ.ಎಂ.ಶ್ರೀನಿವಾಸ್, ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಭಾಗ್ಯಲಕ್ಷ್ಮೀ ಕೆ.ಚಂದ್ರಶೇಖರ್, ಹೇಮಲತಾ, ಮುಖಂಡ ಶ್ರೀರಂಗಯಾದವ್, ಸಹಾಯಕ ನಿರ್ದೇಶಕ ವಿ.ಶಶಿಧರ, ಶೇಂಗಾ ನಾಡು ಹಿತರಕ್ಷಣಾ ವೇದಿಕೆ ಅಧ್ಯಕ್ಷ ತಿಮ್ಮರಾಜು ಗೌಡ, ಅರಣ್ಯಾಧಿಕಾರಿ ಎಚ್.ಎಸ್.ಪ್ರೇಮಕುಮಾರ್, ವಿಕ್ಟರ್, ಚಿತ್ತಯ್ಯ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಕಾರು-ಬೈಕ್ ಭೀಕರ ಅಪಘಾತ: ಓರ್ವ ಸವಾರ ಸ್ಥಳದಲ್ಲೇ ಸಾವು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್!
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Koratagere; ಲಾರಿ- ಕಾರಿನ ನಡುವೆ ಭೀಕರ ಅಪಘಾ*ತ: ಯುವಕರಿಬ್ಬರ ಸಾ*ವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.