ವಿನಾಶದ ಅಂಚಿನಲ್ಲಿ ಮುತ್ತುಗದ ಮರ : ಭಾರತೀಯ ಸಂಸ್ಕೃತಿಯಲ್ಲಿ ಈ ಮರಕ್ಕಿದೆ ಪವಿತ್ರ ಸ್ಥಾನ
Team Udayavani, Mar 24, 2022, 1:38 PM IST
ಕೊರಟಗೆರೆ : ನಿಸರ್ಗಧಾಮದ ಮಡಿಲಲ್ಲಿ ನಾವು ಕ್ರಮಿಸುವಾಗ ಹಾಗೂ ನಡೆದಾಡುವಾಗ ನಮ್ಮ ಕಣ್ಣಿಗೆ ಬಿದ್ದಂತಹ ಗಿಡ – ಮರಗಳ ಪ್ರಭೇದಗಳಲ್ಲಿ ಒಂದಾದಂತಹ ಒಂದು ವಿಶಿಷ್ಟ ಪ್ರಭೇದವೇ ಮುತ್ತುಗದ ಮರ.
ಮುತ್ತುಗ, ವೃಕ್ಷರಾಜ, ದೇವರ ಮರ ಎಂದು ಕರೆಸಿಕೊಳ್ಳುವ ಗ್ರಾಮಾಂತರ ಭಾಗದ ಕಾಡು ಮೇಡು ರೈತರ ಹೊಲದ ಬದುಗಳಲ್ಲಿ ಕಾಣಿಸಿಕೊಳ್ಳುವ ಈ ಮುತ್ತುಗ ಇತ್ತೀಚೆಗೆ ವಿನಾಶದ ಅಂಚಿಗೆ ತಲುಪಿದೆ.
ಹಳ್ಳಿಗಳಲ್ಲಿಯೂ ಸಹ ಈ ಮರವು ಅಲ್ಲೊಂದು ಇಲ್ಲೊಂದು ಮರ ಕಂಡುಬಂದರೂ ವಿನಾಶದ ಅಂಚಿಗೆ ತಲುಪಿರುವುದು ಮಾತ್ರ ವಿಷಾದನೀಯ.
ಯುಗಾದಿ ಹಬ್ಬದ ಸಮಯದಲ್ಲಿ ಕೆಂಪು ಬಣ್ಣದಲ್ಲಿ ಕಾಣಿಸುವ ಈ ಹೂವು ಶಿವನ ಪೂಜೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಿದೆ.ಮುತ್ತುಗದ ಮರಕ್ಕೆ ದೇವರ ಮರವೆಂದು ಸಹ ಕರೆದಿದ್ದು ಕನ್ನಡದಲ್ಲಿ ಮುತ್ತುಗವಾದರೆ ಸಂಸ್ಕೃತದಲ್ಲಿ ಪಾಲಾಶ ಎಂಬ ಹೆಸರು ನಾಮಾಂಕಿತವಿದೆ. ಭಾರತೀಯ ಸಂಸ್ಕೃತಿಯಲ್ಲಿ ದೇವರ ಮರ ಎಂದು ಪರಿಗಣಿಸಲಾಗುವ ಮುತ್ತುಗದ ಮರ ಎಲ್ಲ ಮರಗಳಿಗೂ ಗುರುವಿನ ಸ್ಥಾನವನ್ನು ಕೊಟ್ಟಿದೆ .ಹಿಂದೂ ಸಂಪ್ರದಾಯದ ಸಾಕಷ್ಟು ವಿಧಿ ವಿಧಾನಗಳಲ್ಲಿ ಈ ವೃಕ್ಷಕ್ಕೆ ಪ್ರಾಧಾನ್ಯತೆಯಿದ್ದು ನವಗ್ರಹಗಳಲ್ಲಿ ಈ ಮರ ಚಂದ್ರನ ಸ್ಥಾನವನ್ನು ಪ್ರತಿನಿಧಿಸುತ್ತದೆ. ಹಲವು ರೀತಿಯ ಪರಿಣಾಮಕಾರಿಯಾದಂತಹ ಹಲವು ಕಾಯಿಲೆಗಳಿಗೆ ರಾಮಬಾಣವೂ ಸಹ ಈ ಮುತ್ತುಗದ ಗಿಡ.ಒಗರು, ಖಾರ, ಕಹಿ ಮೂರು ರಸಗಳಿಂದ ಕೂಡಿದ್ದು ಕ್ರಿಮಿನಾಶಕವಾಗಿ ಕಾಣಬಹುದು .
ಇದನ್ನೂ ಓದಿ : S1EP- 227: ದೇವರ ಅನುಗ್ರಹ ಯಾವ ರೂಪದಲ್ಲಿ ಸಿಗುತ್ತೆ ಅನ್ನೋದು ಗೊತ್ತೇ?
ರೈತರಿಗೂ ಹಾಗೂ ಮುತ್ತುಗದ ಮರಕ್ಕೋ ಅವಿನಾಭಾವ ಸಂಬಂಧವಿದ್ದು ಮುತ್ತುಗದ ಚಿಗುರು ಸುಗ್ಗಿ ಕಾಲದಲ್ಲಿ ಬರುವುದರಿಂದ ಸುಗ್ಗಿ ಪೂಜೆಗೆ ಹೆಚ್ಚಿನ ಬಳಕೆಗೆ ಬರುತ್ತದೆ.
ಪುರಾತನ ಕಾಲದಿಂದಲೂ ಸಹ ಶಿವನ ಪೂಜೆಗೆ ಇದನ್ನು ಇಟ್ಟು ಪೂಜಿಸಿದರೆ ಒಳಿತು ಎಂಬ ಭಾವನೆ ಪೂರ್ವಿಕರಲ್ಲಿ ಇರುವುದರಿಂದ ಕಾಡು ಮೇಡು ಹಾಗೂ ರೈತರ ಹೊಲ ಗದ್ದೆಗಳ ಬದುಗಳಲ್ಲಿ ಕೆಂಪನೆಯ ಚಿತ್ತಾರವಾಗಿ ಕಾಣುವಂತಹ ಮುತ್ತುಗದ ಹೂವುಗಳು ಬಹಳ ಆಕರ್ಷಣೀಯವಾಗಿ ಕಂಡು ಬರುತ್ತವೆ ಇದು ಬಹಳ ವಿಶಿಷ್ಟವಾಗಿದ್ದು ಇದರ ಎಲೆಯಲ್ಲಿ ಊಟದ ಎಲೆಗಳನ್ನ ಮಾಡುವುದು ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಸಾಕಷ್ಟು ಹೆಚ್ಚು ಬಳಕೆ ಮಾಡುವುದನ್ನು ನೋಡಬಹುದಾಗಿದೆ.
ಆರ್ಥಿಕವಾಗಿ ಲಾಭ
ಮದುವೆ ಹಾಗೂ ಶುಭಾ ಸಮಾರಂಭಗಳಲ್ಲಿ ಹಿಂದೆಯೆಲ್ಲ ಮುತ್ತುಗದ ಎಲೆಯಲ್ಲಿ ಊಟ ಮಾಡುತ್ತಿದ್ದರು. ನಮ್ಮ ಹಿರಿಯರು ಎಲೆಗಳನ್ನು ತಂದು ಹಂಚಿಕಡ್ಡಿಯಲ್ಲಿ ಎಲೆಗಳನ್ನು ಜೋಡಿಸಿ ಊಟಕ್ಕೆ ಒಪ್ಪಮಾಡಿ ಜೋಡಿಸಿಡುತ್ತಿದ್ದರು ಇದು ಎಷ್ಟು ದಿನವಾದರೂ ಬಳಸಲು ಯೋಗ್ಯವಾಗಿರುತ್ತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಮುತ್ತುಗದ ಎಲೆ ಮಾಯವಾಗುತ್ತಿರುವುದರಿಂದ ಈಗಿನ ಜನರು ಬಾಳೆ ಹಾಗೂ ಪ್ಲಾಸ್ಟಿಕ್ ಎಲೆಗಳ ಮೂಲಕ ಊಟ ಮಾಡಲಾಗುತ್ತಿದೆ.
ಕೆಲವೊಂದು ವರ್ಷದಲ್ಲಿ ಮುತ್ತುಗ ಅತಿ ಹೆಚ್ಚು ಹೂ ಬಿಟ್ಟರೆ ಮತ್ತೆ ಕೆಲವು ವರ್ಷದಲ್ಲಿ ಈ ಹೂವಿನ ಫಸಲು ಬಹುತೇಕ ಕಡಿಮೆ ಎಂದೇ ತಿಳಿಯಬಹುದು. ಶಿವನ ಪೂಜೆಗೆ ಬಳಕೆಯಾಗುವ ಈ ಹೂವನ್ನು ನೋಡಿ ರೈತರು ಮಳೆ ಬೆಳೆಯ ಲೆಕ್ಕಾಚಾರ ಹಿಂದೆ ಹಾಕುತ್ತಾರೆ ಈ ಹೂವು ಹೆಚ್ಚಾಗಿ ಬಿಟ್ಟರೆ ಈ ವರ್ಷ ಉತ್ತಮ ಮಳೆ ಬೆಳೆಯಾಗುತ್ತದೆ ಎಂಬ ನಂಬಿಕೆ ಕೂಡ.ಮುತ್ತುಗ ಧಾರ್ಮಿಕವಾಗಿ ಮೌಲ್ಯ ಪಡೆದಿದೆ.
ಮುತ್ತುಗದ ಎಲೆ .ಬೀಜ .ಹೂಗಳಿಂದ ಅನೇಕ ಖಾಯಿಲೆಗಳಿಗೆ ಉಪಯುಕ್ತವಾಗಿದೆ.
ದೇಶದ ಹಲವು ಭಾಗದಲ್ಲಿ ಇದರ ಸಣ್ಣ ಕೊಂಬೆಗಳನು ದರ್ಬೆ ಅರಳಿ ಇತ್ಯಾದಿ ಗಳ ಜೊತೆಯಲ್ಲಿ ದೇವರ ಹೋಮ ಹವನ ಆಚರಣೆ ಯಲ್ಲಿ ಬಳಕೆ ಮಾಡಲಾಗುತ್ತದೆ ಮುತ್ತುಗದ ಎಲೆಗಳಿಂದ ಊಟದ ತಟ್ಟೆಗಳು ದೊನ್ನೆಗಳು ಪ್ರಸಿದ್ಧತೆ ಪಡೆದಿತ್ತು ಅದರ ಕಾಂಡ ಹೂವು ಎಲೆ ಎಲ್ಲವೂ ಕೊಡ ಅನುಕೂಲವಾಗಿವೆ.
– ಸಿದ್ದರಾಜು.ಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.