ಕೊಬ್ಬರಿ ನಗರಿಯಲ್ಲಿ ಸಂಭ್ರಮದ ಹೊಸ ವರ್ಷ
Team Udayavani, Jan 2, 2021, 8:45 PM IST
ತಿಪಟೂರಿನ ಶ್ರೀ ಶಿವಲಿಂಗೇಶ್ವರ ಬೇಕರಿಯಲ್ಲಿ ಹೊಸವರ್ಷಕ್ಕಾಗಿ ವಿವಿಧ ಹಾಗೂ ಆಕರ್ಷಕ ಕೇಕ್‌ಗಳು ಸಿದ್ಧಗೊಂಡಿದ್ದವು. ವಿದ್ಯಾರ್ಥಿಗಳು, ಸಾರ್ವಜನಿಕರು, ಸ್ವೀಟ್ ಪ್ರಿಯರು ಮುಗಿಬಿದ್ದಿದ್ದು ಕಂಡು ಬಂತು.
ತಿಪಟೂರು: 2020 ಹಳೆ ವರ್ಷಕ್ಕೆ ವಿದಾಯ ಹೇಳಿ ನೂತನ ವರ್ಷ 2021ನ್ನು ಕಲ್ಪತರು ನಾಡಿನ ಕೊಬ್ಬರಿ ನಗರೀಗರು ಸಂಭ್ರಮ ಹಾಗೂ ಸಡಗರಗಳಿಂದ ಸ್ವಾಗತಿಸಿದರು.
ನಗರದ ಬಿ.ಹೆಚ್. ರಸ್ತೆ ಸೇರಿದಂತೆ ಎಲ್ಲೆಡೆ ಬೇಕರಿಗಳು, ಸ್ವೀಟ್‌ಸ್ಟಾಲ್ ಮತ್ತು ಹೋಟೆಲ್‌ಗಳು, ಬಾರ್ ಅಂಡ್ ರೆಸ್ಟೋರೆಂಟ್‌ಗಳು ಹೊಸ ವರ್ಷದ ಪ್ರಯುಕ್ತ ಆಕರ್ಷಕ ವಿದ್ಯುತ್ ದೀಪಾಲಂಕಾರ, ಬಣ್ಣಬಣ್ಣದ ತರಹೇವಾರಿ ಬಲೂನ್‌ಗಳೊಂದಿಗೆ ಕಂಗೊಳಿಸುತ್ತಿದ್ದವು. ಬೇಕರಿಗಳಲ್ಲಿ ವಿವಿಧ ಬಗೆಯ ಆಕರ್ಷಕಕೇಕ್‌ಗಳನ್ನು ತಯಾರಿಸಿಮಾರಾಟಕ್ಕಿಡಲಾಗಿತ್ತು. ಕೇಕ್, ಸ್ವೀಟ್, ಜ್ಯೂಸ್, ಕೂಲ್‌ಡ್ರಿಂಕ್ಸ್ ಮಾರಾಟಬಲು ಜೋರಾಗಿಯೆ ನಡೆಯಿತು.
ಆಕರ್ಷಕ ಉಡುಗೆ-ತೊಡುಗೆಗಳಿಂದ ನಗರದ ಪಾರ್ಕ್‌ಗಳು, ಹೋಟೆಲ್, ಬೇಕರಿಗಳ ಹೆಂಗಳೆಯರಿಂದ ಹೊಸವರ್ಷದ ಶುಭಾಶಯಗಳು ವಿನಿಮಯವಾಗುತ್ತಿದ್ದವು. ಕೋವಿಡ್ ದಿಂದ ಇಷ್ಟು ತಿಂಗಳ ಕಾಲ ಮುಚ್ಚಲಾಗಿದ್ದ ಶಾಲಾ ಕಾಲೇಜುಗಳನ್ನು ಹೊಸ ವರ್ಷವಾದ ಮೊದಲ ದಿನವಾದ ಶುಕ್ರವಾರ ಪ್ರಾರಂಭಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕೇಕ್ ಕತ್ತರಿಸುವ ಮೂಲಕ ಶುಭಾಶಯ ವ್ಯಕ್ತಪಡಿಸಿದರು.
ನಗರದಲ್ಲಿರುವ ಗ್ರಾಮ ದೇವತೆ ಶ್ರೀ ಕೆಂಪಮ್ಮದೇವಿ, ಶ್ರೀ ಕಲ್ಲೇಶ್ವರ ಸ್ವಾಮಿ, ಶ್ರೀ ಮಲ್ಲಿಕಾರ್ಜುನಸ್ವಾಮಿ, ಶ್ರೀಲಕ್ಷ್ಮೀವೆಂಕಟೇಶ್ವರ ಸ್ವಾಮಿ, ಶ್ರೀ ಪಾಂಡುರಂಗಸ್ವಾಮಿ, ಸಾಯಿಬಾಬ ಮಂದಿರ, ರಾಮ ಮಂದಿರ, ಕೆಇಬಿ ರಾಮಮಂದಿರಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ,ಪೂಜೆಗಳು ನಡೆದವು. ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡಿಇಷ್ಟಾರ್ಥ ಸಿದ್ಧಿಗಾಗಿ ಪಾರ್ಥನೆ ಸಲ್ಲಿಸಿದರು. ತಿಪಟೂರು ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿ ದೇವಸ್ಥಾನದಲ್ಲಿ ಶ್ರೀ ಅಮ್ಮನವರು ವಿಶೇಷ ಹೂವುಗಳ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದರು. ದೇವಸ್ಥಾನಗಳಲ್ಲಿ ಸಾಲುಸಾಲು ಭಕ್ತರ ದಂಡು ಹರಿದು ಬಂದು ದೇವರುಗಳ ದರ್ಶನ ಪಡೆದು ಪುನೀತರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಹೊಸ ಸೇರ್ಪಡೆ
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.