ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯಕ್ಕೆ ಅಭದ್ರತೆ; ಗೇಟ್ ಹತ್ತಿ ಎಸ್ಕೇಪ್ ಆದ ವಿದ್ಯಾರ್ಥಿನಿ!

ರಾತ್ರಿ 11ಕ್ಕೆ ಹೊರಕ್ಕೆ ಮುಂಜಾನೆ 5 ಕ್ಕೆ ಒಳಗೆ..

Team Udayavani, Jul 16, 2023, 1:36 PM IST

6-koratagere1

ಕೊರಟಗೆರೆ: ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಸಿಗಲೆಂದು ಪೋಷಕರು ಹಗಲು-ರಾತ್ರಿ ಎನ್ನದೇ ದುಡಿದು ಕಷ್ಟಪಡ್ತಾರೇ. ಶಾಲಾ-ಕಾಲೇಜಿನಲ್ಲಿ ಶಿಕ್ಷಕರು ಮಕ್ಕಳ ಉತ್ತಮ ಶಿಕ್ಷಣಕ್ಕಾಗಿ ಶ್ರಮಿಸ್ತಾರೇ. ಆದರೇ ಇಲ್ಲೊಂದು ವಸತಿ ಶಾಲೆಯಲ್ಲಿ ತಡರಾತ್ರಿ ವಿದ್ಯಾರ್ಥಿನಿಯೇ ಗೇಟ್ ಹತ್ತಿ ಹೊರಗಡೆ ಹೋಗ್ತಾಳೇ.. ರಾತ್ರಿಯಿಡಿ ಹೊರಗಡೆ ಇದ್ದು ಮತ್ತೇ ಮುಂಜಾನೇ ಅದೇ ನಿಲಯಕ್ಕೆ ಯಾರ ಭಯವೂ ಇಲ್ಲದೇ ವಾಪಸ್ ಬರ್ತಾಳೇ.. ಹಾಗಾದ್ರೇ ಸಮಾಜ ಕಲ್ಯಾಣ ಇಲಾಖೆಯ ಪಾತ್ರವೇನು ಎಂಬುದೇ ಯಕ್ಷಪ್ರಶ್ನೆ..?

ಕೊರಟಗೆರೆ ಪಟ್ಟಣದ ಹೃದಯ ಭಾಗದಲ್ಲಿರುವ ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ತಡರಾತ್ರಿ 11 ಗಂಟೆ 21 ನಿಮಿಷಕ್ಕೆ ಇಂತಹದೊಂದು ಘಟನೆ ನಡೆದಿದೆ.

ವಸತಿ ನಿಲಯದ ವಾರ್ಡನ್ ಶೃತಿ.ಜಿ ತಮ್ಮ ಕರ್ತವ್ಯ ಮುಗಿಸಿ 6 ಗಂಟೆಗೆ ಮನೆಗೆ ಹೋದ ನಂತರ ಕಾವಲುಗಾರ ಇರುವ ವೇಳೆ ಲೋಪ ಉಂಟಾಗಿದೆ. ಸ್ಥಳೀಯ ವ್ಯಕ್ತಿಯೊಬ್ಬರು ಈ ಘಟನೆಯನ್ನು ಚಿತ್ರೀಕರಣ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ವಿದ್ಯಾರ್ಥಿನಿಗಾಗಿ ರಾತ್ರಿಯಿಡಿ ಹುಡುಕಾಟ…

ವಿದ್ಯಾರ್ಥಿ ನಿಲಯದಿಂದ ಎಸ್ಕೇಪ್ ಆದ ಕೇಲವೇ ಕ್ಷಣದಲ್ಲಿಯೇ ಕಾವಲುಗಾರ್ತಿ ಲಲಿತಮ್ಮಗೆ ದೂರವಾಣಿ ಕರೆ ಬರುತ್ತದೆ. ತಕ್ಷಣ ಎಚ್ಚೆತ್ತ ವಾರ್ಡನ್ ಶೃತಿ ಸ್ಥಳಕ್ಕೆ ಆಗಮಿಸಿ ಕೊರಟಗೆರೆ ಪಟ್ಟಣದ ಕಾಲೇಜು ಮೈದಾನ, ಗೊರವನಹಳ್ಳಿ ರಸ್ತೆ, ಊರ್ಡಿಗೆರೆ ಕ್ರಾಸ್, ಡಿಗ್ರಿ ಕಾಲೇಜು ಸೇರಿದಂತೆ ಹತ್ತಾರು ಕಡೆಗಳಲ್ಲಿ ರಾತ್ರಿಯಿಡಿ ಹುಡುಕಾಡಿದರೂ ಸಿಕ್ಕಿಲ್ಲ. ನಂತರ ಮುಂಜಾನೆ 5 ಗಂಟೆ 15 ನಿಮಿಷಕ್ಕೆ ಯಾರ ಭಯವು ಇಲ್ಲದೇ ಮತ್ತೇ ವಿದ್ಯಾರ್ಥಿನಿ ನಿಲಯಕ್ಕೆ ಹಿಂತಿರುಗಿ ಕೊಠಡಿಯೊಳಗೆ ಸೇರಿಕೊಂಡಿದ್ದಾಳೆ.

ಕೊರಟಗೆರೆ ತಹಶೀಲ್ದಾರ್ ಮುನಿಶಾಮಿ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಮಲ್ಲಿಕಾರ್ಜುನ್, ಕೊರಟಗೆರೆ ಪಿಎಸೈ ಚೇತನ್‌ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ನಿಲಯದಲ್ಲಿದ್ದ ವಿದ್ಯಾರ್ಥಿನಿಯನ್ನು ಪೋಷಕರ ಜವಾಬ್ದಾರಿಗೆ ನೀಡಿದೆ. ಕೊರಟಗೆರೆ ತಾಲೂಕು ದುಗ್ಗೆನಹಳ್ಳಿಯ ಆಟೋ ಚಾಲಕ ಆರ್ಯಗೌಡ(26) ಮತ್ತು ಟಾಟಾ ಎಸಿ ಆಟೋ ಪೊಲೀಸರ ಅತಿಥಿಯಾಗಿದೆ. ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ನೀಡಿದ ದೂರಿನನ್ವಯ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿನಿಯರ ವಿದ್ಯಾರ್ಥಿ ನಿಲಯಕ್ಕೆ ಅಭದ್ರತೆ; ಗೇಟ್ ಹತ್ತಿ ಎಸ್ಕೇಪ್ ಆದ ವಿದ್ಯಾರ್ಥಿನಿ...

358 ವಿದ್ಯಾರ್ಥಿಗಳ ರಕ್ಷಣೆ ಯಾರದ್ದು..?

ಕೊರಟಗೆರೆ ಪಟ್ಟಣದ ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ-50, ಬಾಲಕರ ವಿದ್ಯಾರ್ಥಿ ನಿಲಯ-70, ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ-90, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ-90 ಮತ್ತು ಅಕ್ಕಿರಾಂಪುರದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ-58 ಜನ ಸೇರಿ ಒಟ್ಟು 358 ಜನರಿರುವ ವಸತಿ ನಿಲಯದಲ್ಲಿ ಸಿಸಿಟಿವಿ ಲಭ್ಯವಿದ್ರು ವಿದ್ಯಾರ್ಥಿಗಳಿಗೆ ರಾತ್ರಿ ಪಾಳೆಯದ ಭದ್ರತೆಯಲ್ಲಿ ಲೋಪ ಉಂಟಾಗಿದೆ.

ರಾತ್ರಿ ವೇಳೆ ವಿದ್ಯಾರ್ಥಿ ನಿಲಯಕ್ಕೆ ಅಭದ್ರತೆ..

ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಕೊರಟಗೆರೆ ಪಟ್ಟಣ ಮತ್ತು ಅಕ್ಕಿರಾಂಪುರ ಸೇರಿ ಒಟ್ಟು 5 ವಿದ್ಯಾರ್ಥಿ ನಿಲಯಗಳಿವೆ. ಪ್ರಸ್ತುತ ವಾಸವಿರುವ 358 ಜನ ವಿದ್ಯಾರ್ಥಿಗಳಿಗೆ ಸಿಸಿಟಿವಿಯ ಭದ್ರತೆ ನೆಪಮಾತ್ರ.

ವಿದ್ಯಾರ್ಥಿಗಳ ಜವಬ್ದಾರಿ ಹೊತ್ತ ವಾರ್ಡನ್ ಸಂಜೆ 6 ಗಂಟೆಗೆ ತೆರಳುತ್ತಾರೆ. 7 ಗಂಟೆ ನಂತರ ಬರುವ ಕಾವಲುಗಾರ ಊಟ ಮಾಡಿದ ನಂತರ ವಿದ್ಯಾರ್ಥಿಗಳು ಮಲಗುವ ಮುಂಚೆಯೇ ಕೊಠಡಿ ಸೇರಿಕೊಳ್ಳುತ್ತಾರೆ. ವಿದ್ಯಾರ್ಥಿಗಳಿಗೆ ರಕ್ಷಣೆಯ ಜೊತೆಗೆ ಅಧಿಕಾರಿಗಳ ಭಯವಿಲ್ಲದೆ ಅಭದ್ರತೆ ಸೃಷ್ಟಿಯಾಗಿದೆ.

ರಾತ್ರಿ 11ಕ್ಕೆ ಹೊರಕ್ಕೆ ಮುಂಜಾನೆ 5ಕ್ಕೆ ಒಳಗೆ..

ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವಾಸವಿರುವ 17ವರ್ಷದ ವಿದ್ಯಾರ್ಥಿನಿ ಶುಕ್ರವಾರ ತಡರಾತ್ರಿ 11 ಗಂಟೆ 21 ನಿಮಿಷಕ್ಕೆ ನಿಲಯದ ಬಾಗಿಲಿನ ಗೇಟ್ ಹತ್ತಿ ಹೊರಗಡೆ ಹೋಗಿ, ಮುಂಜಾನೆ 5 ಗಂಟೆ 15 ನಿಮಿಷಕ್ಕೆ ಮತ್ತದೇ ಗೇಟ್ ಹತ್ತಿ ಒಳಗಡೆ ಬರುತ್ತಾಳೆ. ವಿದ್ಯಾರ್ಥಿನಿ ಹೊರಗಡೆ ಹೋಗುವ ದೃಶ್ಯ ನಿಲಯದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊರಗಡೆ ಬಂದ ನಂತರ ಆಟೋ ಹತ್ತಿ ಹೋಗುವ ದೃಶ್ಯ ಖಾಸಗಿ ವ್ಯಕ್ತಿಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಎರಡು ವಿಡೀಯೊಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗಿದೆ.

ವಿದ್ಯಾರ್ಥಿ ನಿಲಯದ ವಾರ್ಡನ್ ಮತ್ತು ಕಾವಲುಗಾರರಿಂದ ಭದ್ರತೆಯ ಲೋಪ ಆಗಿದೆ. ನಿಲಯದ ಇಬ್ಬರ ಮೇಲೆ ಕ್ರಮಕ್ಕೆ ಇಲಾಖೆಗೆ ಸೂಚಿಸಲಾಗಿದೆ. ಪೊಲೀಸರಿಂದ ಸಿಸಿಟಿವಿ ಮತ್ತು ಖಾಸಗಿ ವಿಡೀಯೊ ದೃಶ್ಯಾವಳಿಗಳ ಪರಿಶೀಲನೆ ನಡೆದಿದೆ. ಟಾಟಾಎಸಿ ಆಟೋ ಮತ್ತು ಆರೋಪಿ ಪೊಲೀಸರ ವಶದಲ್ಲಿದ್ದಾನೆ.  ಕೊರಟಗೆರೆ ಪೊಲೀಸರ ತನಿಖೆಯಿಂದ ಸತ್ಯಾಂಶ ಹೊರಗಡೆ ಬರಲಿದೆ. –ಮುನಿಶಾಮಿರೆಡ್ಡಿ, ತಹಶೀಲ್ದಾರ್, ಕೊರಟಗೆರೆ

ವಿದ್ಯಾರ್ಥಿನಿಯೇ ತಡರಾತ್ರಿ 11 ಗಂಟೆ ವೇಳೆ ಗೇಟ್ ಹತ್ತಿ, ಇಳಿದು ಕಾರಿಗೆ ಹತ್ತಿರುವ ವಿಡೀಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಾರ್ಡನ್ ಕರ್ತವ್ಯ ಮುಗಿಸಿ ಮನೆಗೆ ತೆರಳಿದ ನಂತರ ಕಾವಲುಗಾರ್ತಿ ಬಂದಿದ್ದಾರೆ. ರಾತ್ರಿ ವೇಳೆ ನಿದ್ರಿಸುವ ವೇಳೆ ಇಂತಹ ಘಟನೆ ನಡೆದಿದೆ. ಆರೋಪಿ ಆಟೋ ಚಾಲಕ ಈಗ ಪೊಲೀಸರ ವಶದಲ್ಲಿದ್ದಾನೆ. ಪೊಲೀಸರ ತನಿಖೆಯಿಂದ ನಿಲಯದ ಇನ್ನಷ್ಟು ಸತ್ಯಾಂಶ ಹೊರಗಡೆ ಬರಲಿದೆ. – ಕೃಷ್ಣಪ್ಪ ಎಸ್., ಜಂಟಿ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ, ತುಮಕೂರು

ಟಾಪ್ ನ್ಯೂಸ್

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

4-kunigal

Kunigal: ಕೆಂಪನಹಳ್ಳಿ ಗ್ರಾಮದಲ್ಲಿ ಸರಣಿ ಕಳ್ಳತನ

14-kunigal

Kunigal: ಟೈರ್ ಸ್ಪೋಟಗೊಂಡು ಕಾರು ಪಲ್ಟಿ: ಐಟಿ ಉದ್ಯೋಗಿ ದುರ್ಮರಣ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.