ಮಕ್ಕಳ ಅನ್ನಕ್ಕೂ ಮುಖ್ಯ ಶಿಕ್ಷಕನ ಕೊಕ್ಕೆ
ವಿದ್ಯಾರ್ಥಿಗಳ ಪಡಿತರದಲ್ಲಿ ವಂಚನೆ | ಅವಧಿ ಮುಗಿದ ಹಾಲಿನ ಪೌಡರ್ ವಿತರಣೆ
Team Udayavani, Nov 22, 2020, 4:40 PM IST
ಕೊರಟಗೆರೆ: ಬಡವರ ಮಕ್ಕಳನ್ನು ಶಾಲೆಯತ್ತ ಕರೆತಂದು ವಿದ್ಯಾವಂತರನ್ನಾಗಿ ಮಾಡಲು ಸರ್ಕಾರ ಬಿಸಿಯೂಟದಂತಹ ಮಹತ್ತರ ಯೋಜನೆ ಜಾರಿಗೆ ತಂದಿದ್ದರೆ ಮಕ್ಕಳುತಿನ್ನುವಅನ್ನಕ್ಕೂಕೊಕ್ಕೆಇಡುವಂತಹ ಕೆಲಸ ಕೊರಟಗೆರೆ ಶಿಕ್ಷಣ ಇಲಾಖೆಯಲ್ಲಿ ನಡೆಯುತ್ತಿದೆ.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಲಾಕ್‌ಡೌನಿನಲ್ಲಿ ಮಕ್ಕಳು ಶಾಲೆಗೆ ಬಾರದಿದ್ದರೂ ಮನೆಯಲ್ಲಿಯೇಕಲಿಕೆ ಮಾಡಿಕೊಂಡು ಅಕ್ಕಿ, ಗೋಧಿ, ಬೆಳೆ, ಎಣ್ಣೆ, ಹಾಲಿನಪೌಡರ್ ನಂತಹ ಪೌಷ್ಟಿಕ ಆಹಾರವನ್ನು ಸೇವಿಸಲಿ ಎಂದು ಸರ್ಕಾರ ದಿಂದಅಕ್ಷರದಾಸೋಹಯೋಜನೆಯಡಿ ಬಿಡುಗಡೆಯಾಗಿದ್ದ ದಾಸ್ತಾನು ವಿತರಿಸದೆ ವಂಚಿಸಿಲಾಗುತ್ತಿದೆ.
ಲಾಕ್‌ಡೌನ್ ಮೊದಲಹಂತದ 53 ದಿನಗಳಿಗೆ 8ನೇ ತರಗತಿ ವಿದ್ಯಾರ್ಥಿಗೆ ತಲಾ 6 ಕೆ.ಜಿ. 750ಗ್ರಾಂ ಅಕ್ಕಿ, 1ಕೆ.ಜಿ. 200ಗ್ರಾಂ ಗೋಧಿ ಹಾಗೂ ಪ್ರತಿ ಮಗುವಿಗೆ ನೀಡಲು ನಿಗದಿಯಾಗಿರುವ ಪರಿವರ್ತನ ವೆಚ್ಚವಾದ 395ರೂ.ಗಳ ಬದಲಾಗಿ 4ಕೆ.ಜಿ. 600 ಗ್ರಾಂ ತೊಗರಿಬೆಳೆಯನ್ನು ವಿತರಿಸಬೇಕಿತ್ತು. ಆದರೆ, ಅಕ್ಕಿಯನ್ನು ಮಾತ್ರ ಸಮಪ್ರಮಾಣದಲ್ಲಿ ವಿತರಿಸಿ 1ಕೆ.ಜಿ. 200 ಗ್ರಾಂ ಗೋಧಿಯ ಬದಲಾಗಿ ಹೆಚ್ಚುವರಿ 1ಕೆ.ಜಿ. ಅಕ್ಕಿಯನ್ನು ಮಾತ್ರ ನೀಡುತ್ತಿದ್ದಾರೆ. ತೊಗರಿಬೆಳೆ ನೀಡುವ ಪ್ರಮಾಣದಲ್ಲಿ ಕೇವಲ 600 ಗ್ರಾಂ ವಿತರಿಸಿ ಇನ್ನೂಳಿದ 4ಕೆ.ಜಿ. ಬೆಳೆಯನ್ನು ನೀಡದೆ ಮುಖ್ಯಶಿಕ್ಷಕ ನರಸಿಂಹಮೂರ್ತಿ ಯಾಮರಿಸಿದ್ದಾರೆ ಜತೆಗೆ ಅವಧಿ ಮೀರಿದ ಹಾಲಿನ ಪುಡಿ ನೀಡಿದ್ದಾರೆ ಎಂದು ಪೋಷಕರು ಆರೋಪಸಿದ್ದಾರೆ.
ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು, ಅಕ್ಷಕ ದಾಸೋಹ ಸಹಾಯಕ ನಿರ್ದೇಶಕರಿಗೆ ಪರಿ ಶೀಲಿಸಿವರದಿನೀಡುವಂತೆ ಸೂಚಿಸಿದ್ದೇನೆ. ವರದಿಆಧಾರದ ಮೇಲೆ ಮುಖ್ಯ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಲಾಗುವುದು. –ಸುಧಾಕರ್. ಬಿಇಒ ಕೊರಟಗೆರೆ
ನನ್ನ ಮಗಳಿಗೆ ಆರೂವರೆ ಕೆ.ಜಿ. ಅಕ್ಕಿ, 600 ಗ್ರಾಂ ಬೆಳೆ, ಅವಧಿ ಮುಗಿದ ಒಂದು ಹಾಲಿನ ಪ್ಯಾಕೇಟ್ ನೀಡಿದ್ದಾರೆ. ಗೋಧಿ ಸೇರಿದಂತೆ ಸರ್ಕಾರದ ನಿಯಮ ಅನುಸಾರ ಸಮರ್ಪಕವಾಗಿ ಆಹಾರ ಪದಾರ್ಥ ವಿತರಿಸಿಲ್ಲ. – ಡಿ.ಎಲ್ ಮಲ್ಲಯ್ಯ. ದೇವರಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.