ಸರ್ಕಾರಿ ಆಸ್ಪತ್ರೆ ಗುತ್ತಿಗೆ ನೌಕರರಿಗೆ ಸಿಗುತ್ತಿಲ್ಲ ಸಂಬಳ!
ಐದು ತಿಂಗಳಿನಿಂದ ವೇತನ ನೀಡದೇ ನಿರ್ಲಕ್ಷ್ಯ
Team Udayavani, Sep 20, 2019, 5:45 PM IST
ಹುಳಿಯಾರು: ಹೋಬಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ತಾಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ಸಿಬ್ಬಂದಿಗೆ ಏಳೆಂಟು ತಿಂಗಳಿಂದ ಸಂಬಳ ನೀಡದೇ ನಿರ್ಲಕ್ಷಿಸಲಾಗಿದೆ.
ಚಿಕ್ಕನಾಯಕನಹಳ್ಳಿ ಜನರಲ್ ಆಸ್ಪತ್ರೆ ಸೇರಿ ಜೆ.ಸಿ.ಪುರ, ಹುಳಿಯಾರು, ದಸೂಡಿ, ಯಳನಡು, ಹಂದನಕೆರೆ, ಮತಿಘಟ್ಟ, ಶೆಟ್ಟಿಕೆರೆ, ತೀರ್ಥ ಪುರ, ತಿಮ್ಮನಹಳ್ಳಿ, ಕಂದಿಕೆರೆ, ಗೋಡೆಕೆರೆ ಆಸ್ಪತ್ರೆಗಳಲ್ಲಿ ಗುತ್ತಿಗೆ ನೌಕರರು ಕೆಲಸ ನಿರ್ವ ಹಿಸುತ್ತಿದ್ದಾರೆ. ಚಿ.ನಾ.ಹಳ್ಳಿಯಲ್ಲಿ 6 ಹಾಗೂ ಹುಳಿಯಾರಿನಲ್ಲಿ 4 ಸಿಬ್ಬಂದಿ ಬಿಟ್ಟರೆ ಉಳಿದ ಆಸ್ಪತ್ರೆಯಲ್ಲಿ ಒಬ್ಬರು ಅಥವಾ ಇಬ್ಬರು ಕೆಲಸ ನಿರ್ವಹಿಸುತ್ತಿದ್ದು ಒಟ್ಟು 25 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ.
ಆರೋಗ್ಯ ಸೇವೆಯಲ್ಲಿ ವ್ಯತ್ಯಯ: ಕಳೆದ ವರ್ಷ ಟೋಟಲ್ ಸೆಲ್ಯೂಷನ್‌ನಿಂದ ತಾಲೂಕಿನ ಆಸ್ಪತ್ರೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೌಕರರ ನಿಯೋಜಿಸ ಲಾಗಿದ್ದು, ಜೂನ್ 2019ರಿಂದ ಕಿಯೋನಿಕ್ಸ್ ವತಿಯಿಂದ ಹೊರ ಗುತ್ತಿಗೆ ಆಧಾರದ ಮೇಲೆ ನೇಮಿಸಿ ಕೊಳ್ಳಲಾಗಿದೆ. ಇವರೆಲ್ಲರಿಗೂ ಕಿಯೋನಿಕ್ಸ್ 10ರಿಂದ 11 ಸಾವಿರ ರೂ. ಸಂಭಾವನೆ ಪ್ರತಿ ತಿಂಗಳ 5ನೇ ತಾರೀಕಿನೊಳಗೆ ಸಂಭಾವನೆ ಕೊಡುವುದಾಗಿಯೂ ಭರವಸೆ ನೀಡಿ ನೇಮಕ ಮಾಡಿಕೊಂಡಿದೆ. ಹಿಂದಿನ ಟೋಟಲ್ ಸೆಲ್ಯೂಷನ್ 5 ತಿಂಗಳು ವೇತನ ನೀಡದೆ ನಿರ್ಲಕ್ಷಿಸಿದ್ದರೆ, ಕಿಯೋನಿಕ್ಸ್ 3 ತಿಂಗಳಿಂದ ವೇತನ ನೀಡದೆ ಸತಾಯಿಸುತ್ತಿದೆ. ಹಾಗಾಗಿಯೇ ಕೆಲವರು ಕೆಲಸವನ್ನೇ ಬಿಟ್ಟಿದ್ದಾರೆ. ಇದರಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾದರೂ ಮೇಲಧಿ ಕಾರಿಗಳು, ಜನಪ್ರತಿನಿಧಿಗಳು ಕಂಡೂ ಕಾಣದಂತೆ
ಮೌನಕ್ಕೆ ಶರಣಾಗಿದ್ದಾರೆ.
ಸಂಬಳವಿಲ್ಲದೆ ಶೋಚನೀಯ ಸ್ಥಿತಿ: ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ದಿನನಿತ್ಯ ಆಸ್ಪತ್ರೆ ಸ್ವತ್ಛತೆ, ವೈದ್ಯರಿಗೆ ಸಕಾಲಕ್ಕೆ ಟೀ, ಕಾಫಿ, ಬಿಸ್ಕೇಟ್, ರೋಗಿಗಳ ಬಗ್ಗೆ ಕಾಳಜಿ, ಲ್ಯಾಬೋ ರೇಟರಿಯಲ್ಲಿ ಉತ್ಪತ್ತಿಯಾದ ತ್ಯಾಜ್ಯ, ರಕ್ತ ಪರೀಕ್ಷೆ ಮಾಡುವ ಸ್ಲೆ çಡ್ ತೊಳೆಯುವುದು, ಆಸ್ಪತ್ರೆಯಲ್ಲಿನ ಬೆಡ್ ಸ್ವತ್ಛವಾಗಿಡುವುದು, ನೆಲ ಒರೆಸುವುದು ಸೇರಿ ಹತ್ತು ಹಲವಾರು ಕೆಲಸಗಳಲ್ಲಿ ತೊಡಗಿಕೊಂಡವರ ಸ್ಥಿತಿ ಸಂಬಳವಿಲ್ಲದೆ ಶೋಚನೀಯವಾಗಿದೆ.
ಸಾಲ ಪಡೆಯುವ ದುಸ್ಥಿತಿ: ಈ ಕೆಲಸವನ್ನೇ ನೆಚ್ಚಿಕೊಂಡಿರುವ ನೌಕರರ ಪಾಡು ಹೇಳತೀರದಾಗಿದೆ. ಮಕ್ಕಳ ಶಾಲೆಯ ಶುಲ್ಕ, ಪೋಷಕರ ಔಷಧೋಪಚಾರ ಹಾಗೂ ತಿಂಗಳ ರೇಷನ್ ತರುವುದಕ್ಕೂ ಕಷ್ಟವಾಗಿ ಮತ್ತೂಬ್ಬರ ಬಳಿ ಕೈಯೊಡ್ಡುವ ದುಸ್ಥಿತಿ ನಿರ್ಮಾಣ ವಾಗಿದೆ. ಐದಾರು ತಿಂಗಳಿಂದ ಸಾಲ ಮಾಡಿ ಸಂಸಾರ ತೂಗಿಸಿದ್ದು, ಈಗ ಕೆಲವರು ಸಾಲ ಹಿಂದಿರುಗಿಸು ವಂತೆಯೂ, ಹೊಸದಾಗಿ ಮತ್ಯಾರೂ ಸಾಲ ಕೊಡದಂತೆಯೂ ಆಗಿದ್ದು, ನಮ್ಮ ಬಗ್ಗೆ ತಲೆಕೆಡಿಸಿ ಕೊಳ್ಳುವವರೇ ಇಲ್ಲದಂತಾಗಿದೆ ಎಂದು ಕೆಲ ನೌಕರರು ಅಳಲು ತೋಡಿಕೊಂಡಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.