ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಸೂಚನೆ
Team Udayavani, Mar 6, 2021, 5:15 PM IST
ಹುಳಿಯಾರು: ಹುಳಿಯಾರು ಎಪಿಎಂಸಿಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಪಟ್ಟಣದಲ್ಲಿ ಕೆಟ್ಟಿರುವ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತಕ್ಷಣ ದುರಸ್ತಿ ಮಾಡಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರು ಪಪಂ ಮುಖ್ಯಾಧಿಕಾರಿ ಮಂಜುನಾಥ್ ಅವರಿಗೆ ಸೂಚನೆ ನೀಡಿದರು.
ಹುಳಿಯಾರು ಎಪಿಎಂಸಿಯಲ್ಲಿನ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಭೇಟಿ ಸಂದರ್ಭದಲ್ಲಿಹುಳಿಯಾರಿನ ಶುದ್ಧ ಕುಡಿವ ನೀರಿನ ಘಟಕಗಳು ಕೆಟ್ಟು ವರ್ಷಗಳೇ ಕಳೆದಿದ್ದರೂ ದುರಸ್ತಿ ಮಾಡದಪರಿಣಾಮ ಹೆಚ್ಚು ಹಣ ಕೊಟ್ಟು ಖಾಸಗಿಯವರಿಂದನೀರು ಖರೀದಿಸಿ ಕುಡಿಯುವಂತ್ತಾಗಿದೆ ಎಂದು ಸಾರ್ವಜನಿಕರು ದೂರಿದರು.
ಜಿಲ್ಲಾಧಿಕಾರಿಗಳು ತಕ್ಷಣ ಪಪಂ ಮುಖ್ಯಾಧಿಕಾರಿಗಳನ್ನು ಕರೆಸಿ ಕುಡಿವ ನೀರಿನ ಘಟಕ ದುರಸ್ತಿಮಾಡಿಸದೆ ನಿರ್ಲಕ್ಷಿÂಸಿರುವ ಬಗ್ಗೆ ಪ್ರಶ್ನಿಸಿದರು.ಘಟಕಗಳೆಲ್ಲವೂ ಆರ್‌ಡಿಪಿಆರ್ ವ್ಯಾಪ್ತಿಯಲ್ಲಿದ್ದು,ನಮಗೆ ಇದೂವರೆವಿಗೂ ಹಸ್ತಾಂತರಿಸಿರುವುದಿಲ್ಲ. ಅವರು ಹಸ್ತಾಂತರಿಸಿದರೆ ದುರಸ್ತಿ ಮಾಡಿಸುವುದಾಗಿತಿಳಿಸಿದರು. ಅಲ್ಲದೆ 70 ಸಾವಿರಕ್ಕೂ ಹೆಚ್ಚು ಹಣ ದುರಸ್ತಿಗೆ ಬೇಕಾಗುತ್ತದೆ ನಮ್ಮಲ್ಲಿ ಕಂದಾಯ ವಸೂಲಿಯಾಗದಿರುವುದರಿಂದ ಅಷ್ಟು ಹಣ ವ್ಯಯಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಾಧಿಕಾರಿಗಳು ಸಮಜಾಯಿಸಿ ನೀಡಿದರು.
ಜಿಲ್ಲಾಧಿಕಾರಿಗಳು ಎಪಿಎಂಸಿಯಿಂದಲೇ ಜಿಪಂಸಿಇಒಗೆ ಕರೇ ಮಾಡಿ ಹುಳಿಯಾರು ಪಪಂ ಆಗಿಮೇಲ್ದರ್ಜೆಗೇರಿದ್ದರೂ ಶುದ್ಧ ನೀರಿನ ಘಟಕಗಳನ್ನುಅವರಿಗೆ ಹಸ್ತಾಂತರಿಸಿಲ್ಲ. ಪರಿಣಾಮ ಶುದ್ಧ ಕುಡಿವನೀರಿಗೆ ನಿವಾಸಿಗಳು ಪರದಾಡುತ್ತಿದ್ದು, ತಕ್ಷಣ ಇಒಅವರಿಗೆ ಹಸ್ತಾಂತರಿಸಲು ಸೂಚಿಸುವಂತೆತಿಳಿಸಿದರು. ಅಲ್ಲದೆ ಮುಖ್ಯಾಧಿಕಾರಿಗಳಿಗೆ ಆರ್‌ಡಿಪಿಆರ್ ಅವರು ಹಸ್ತಾಂತರಿಸುವರೆಗೂ ಕಾಯಬೇಡಿ ತಕರಾರು ಮಾಡಬೇಕಿರುವ ನಾನೇಹೇಳುತ್ತಿದ್ದೇನೆ ತಕ್ಷಣ ದುರಸ್ತಿ ಮಾಡಿ ಜನರಿಗೆ ಶುದ್ಧ ನೀರು ಕೊಡಿ ಎಂದರು.
ನಿಮಗೆ ಲಿಖೀತವಾಗಿ ಬೇಕಿದ್ದರೆ ಹೇಳಿ ಇಲ್ಲೇ ಆಡಳಿತಾಧಿಕಾರಿಗಳಾದ ತಹಶೀಲ್ದಾರ್ ಸಹ ಇದ್ದುಇಬ್ಬರೂ ಸೇರಿ ನಡಾವಳಿ ಮಾಡಿ ನನಗೊಂದು ಪತ್ರಕೊಡಿ ಈಗಲೇ ದುರಸ್ತಿ ಮಾಡಲು ಸಹಿ ಹಾಕಿಕೊಡುತ್ತೇನೆ. ದುರಸ್ತಿಗೆ ಹಣಕ್ಕೆ ಚಿಂತಿಸಬೇಡಿ ಎಸ್‌ಎಫ್‌ಸಿ ಹಣ ಬಳಕೆ ಮಾಡಿ, ನಾನು ಅಪ್ರೂವಲ್ ಕೊಡುತ್ತೇನೆ. ಕುಡಿಯುವ ನೀರು ಕೊಡಲು ಹೀಗೆ ನಿರ್ಲಕ್ಷಿಸಬಾರದು. ಹೇಗಾದರೂ ಸರಿ ಜನರಿಗೆ ನೀರು ಕೊಡುವ ನಿಟ್ಟಿನಲ್ಲಿ ಚಿಂತಿಸಬೇಕು ಎಂದು ಕಿವಿ ಮಾತು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ವಿದ್ಯೆಯ ಸಾಧನೆಗೆ ಸಾಧಿಸುವ ಗುರಿ ಒಂದೇ ಮುಖ್ಯ
ಜಟ್ಟಿ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗಂಗಾದೇವಿ ಅಧ್ಯಕ್ಷೆ
Koratagere: ಮದ್ಯಪಾನದಿಂದ ಕುಟುಂಬದಲ್ಲಿ ದಿನ ಅಶಾಂತಿ ಉಂಟಾಗಿ ನೆಮ್ಮದಿ ಇಲ್ಲದಂತಾಗಿದೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
Perfect: ಎಡ್ ಶಿರನ್ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್ ಆದ ಉಡುಪಿಯ ಹುಡುಗ | Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.