ವಾರಕ್ಕೆರಡು ಬಾರಿ ತಾಲೂಕಿಗೆ ಭೇಟಿ ನೀಡಿ
Team Udayavani, Sep 8, 2020, 4:30 PM IST
ತುಮಕೂರು: ಲಾಕ್‌ಡೌನ್ ನಿಯಮಗಳ ಪಾಲನೆ ಮತ್ತು ಸ್ಮಾರ್ಟ್‌ಸಿಟಿ ಕಾಮಗಾರಿಗಳ ಹಿನ್ನೆಲೆಯಲ್ಲಿ ವ್ಯವಹಾರವಿಲ್ಲದೆ ಇರುವುದರಿಂದ ಬಾಡಿಗೆ ಮನ್ನಾ ಮಾಡುವಂತೆ ಒತ್ತಾಯಿಸಿ ಖಾಸಗಿ ಬಸ್ ನಿಲ್ದಾಣದ ಮಳಿಗೆಗಳ ಬಾಡಿಗೆದಾರರು ಮಹಾ ನಗರ ಪಾಲಿಕೆ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಮಳಿಗೆಗಳನ್ನು ಬಾಡಿಗೆ ಪಡೆದ ಕೆಲ ದಿನಗಳಲ್ಲೇ ಲಾಕ್ ಡೌನ್ ಘೋಷಿಸಲಾಯಿತು. ಸರ್ಕಾರಿ ಆದೇಶದಂತೆ ಮಳಿಗೆಗಳನ್ನು ಬಂದ್ ಮಾಡಿದೆವು. ಇದರ ನಡುವೆ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಲೇ ಇವೆ. ಅಂಗಡಿಗಳ ಬಾಗಿಲು ಮುಚ್ಚಿದ್ದು ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದೇವೆ. ಇದರಿಂದ ಚೇತರಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕು. ಹಾಗಾಗಿ ಬಾಡಿಗೆ ಮನ್ನ ಮಾಡಿ ವ್ಯಾಪಾರಿಗಳ ನೆರವಿಗೆ ಬರುವಂತೆ ಆಗ್ರಹಿಸಿದರು.
ಕಾಮಗಾರಿ ನಡೆಯುತ್ತಿರುವುದರಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಇರುವ ಅಂಗಡಿ ಮಳಿಗೆಗಳ ಬಾಡಿಗೆ ಹಣವನ್ನು ನಿಗಮವು ಮನ್ನಾ ಮಾಡಿ ಬಾಡಿಗೆದಾರರಿಗೆ ಅನುಕೂಲ ಮಾಡಿಕೊಟ್ಟಿದೆ. ಅದೇ ರೀತಿ ಖಾಸಗಿ ಬಸ್ ನಿಲ್ದಾಣದಲ್ಲಿನ ಮಳಿಗೆಗಳ ಬಾಡಿಗೆದಾರರೂ ಕೂಡಾ ವ್ಯವಹಾರವಿಲ್ಲದೆ ಸಂಕಷ್ಟದಲ್ಲಿದ್ದು ಮಾರ್ಚ್-ಆಗಸ್ಟ್ ವರೆಗಿನ ಬಾಡಿಗೆ ಮನ್ನ ಮಾಡಬೇಕು ಎಂದು ಮನವಿ ಮಾಡಿದರು. ವ್ಯಾಪಾರವಿಲ್ಲದೇ ಬಾಡಿಗೆ ಹಣವನ್ನು ಕಟ್ಟಲು ಸಾಧ್ಯವಿಲ್ಲ. ಪಾಲಿಕೆ ಮತ್ತು ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು. ಸೆಪ್ಟೆಂಬರ್ ನಿಂದ ಡಿಸೆಂಬರ್ 31ರವರೆಗೆ ಬಾಡಿಗೆ ಹಣದಲ್ಲಿ ಶೇ.10ರಷ್ಟು ಹಣವನ್ನು ಬಾಡಿಗೆ ರೂಪದಲ್ಲಿ ಕಟ್ಟಲು ಅವಕಾಶ ಮಾಡಿಕೊಡಬೇಕು. ಮಾಸಿಕ ಸೇವಾ ಸುಂಕವನ್ನು ಶೇ.18ರಷ್ಟು ಪಡೆಯುತ್ತಿದ್ದು ಅದನ್ನು ವರ್ಷಕ್ಕೊಮ್ಮೆ ಮಾತ್ರೆ ತೆಗೆದುಕೊಳ್ಳಬೇಕು. ಲಾಕ್‌ಡೌನ್‌ಗೂ ಹಿಂದೆ ಇದ್ದ ಬಾಡಿಗೆ ಹಣವನ್ನು ಕಟ್ಟಲು ಬಡ್ಡಿರಹಿತವಾಗಿ ಒಂದು ವರ್ಷ ಕಾಲಾವಕಾಶ ನೀಡಬೇಕೆಂದು ಆಗ್ರಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.