ಕುಣಿಗಲ್: ಬಾಲ್ಯ ವಿವಾಹವನ್ನು ತಡೆದ ಅಧಿಕಾರಿಗಳು
Team Udayavani, Jun 21, 2022, 1:07 PM IST
ಕುಣಿಗಲ್: ತುಮಕೂರು ತಾಲೂಕು ಹೆಬ್ಬೂರು ಹೋಬಳಿ ದೊಡ್ಡಯ್ಯನಕಟ್ಟೆ ಪಾಳ್ಯದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ಕಾರ್ಯಚರಣೆ ನಡೆಸಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಬ್ಬೂರು ಹೋಬಳಿ ರಾಜಾಪುರ ಗ್ರಾಮದ ಯುವಕ ಕುಣಿಗಲ್ ಪಟ್ಟಣದ ವಾರ್ಡ್ ನಂ 1 ಬಿದನಗೆರೆ ಗ್ರಾಮದ ಯುವತಿಯೊಂದಿಗೆ ನಿಶ್ಚಿತವಾಗಿದ್ದ.
ತಾಲೂಕಿನ ಹೆಬ್ಬೂರು ಹೋಬಳಿ ದೊಡ್ಡಯ್ಯನಕಟ್ಟೆ ಪಾಳ್ಯ ಗ್ರಾಮದ ಲಕ್ಷ್ಮಿವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಪ್ರಥಮ ಶಾಸ್ತ್ರ ಹಾಗೂ ಬುಧವಾರ ಮುಹೂರ್ತ ಇಟ್ಟುಕೊಳ್ಳಲಾಗಿತ್ತು, ಯುವತಿಗೆ 17 ವರ್ಷ 2 ತಿಂಗಳಾಗಿದ್ದು ಯುವತಿಗೆ 18 ವರ್ಷ ತುಂಬದ ಹಿನ್ನೆಲೆಯಲ್ಲಿ ಬಾಲ್ಯ ವಿವಾಹವಾಗಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದರು.
ನೀಡಿದ ದೂರಿನ ಅನ್ವಯ ಸಿಡಿಪಿಓ ಅನುಷಾ, ಪಿಎಸ್ಐ ಲಕ್ಷ್ಮಣ್ , ಬಾಲ್ಯ ವಿವಾಹವಾದರೆ ಕಾನೂನು ಪ್ರಕಾರ ಕಠಿಣ ಕ್ರಮಕ್ಕೆ ಒಳಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅಧಿಕಾರಿಗಳು, ಬಳಿಕ ವಧು ಹಾಗೂ ವರನ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಂಡು ವಿವಾಹವನ್ನು ತಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.