ಕೇಂದ್ರ ಮಂತ್ರಿಯಾಗಿ ಕ್ಷೇತ್ರಕ್ಕೆ ಬಂದ ಮೊದಲ ದಿನವೇ ಸೋಮಣ್ಣ ಡಿಸಿ, ಅಧಿಕಾರಿಗಳಿಗೆ ತರಾಟೆ
Team Udayavani, Jun 14, 2024, 1:12 PM IST
ತುಮಕೂರು: ಮಂತ್ರಿಯಾಗಿ ಬಂದ ಮೊದಲ ದಿನವೇ ಡಿಸಿ, ಸಿಇಒಗೆ ಕೇಂದ್ರದ ಮಂತ್ರಿ ವಿ. ಸೋಮಣ್ಣ ತರಾಟೆ ತೆಗೆದುಕೊಂಡ ಘಟನೆ ನಡೆಯಿತು.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಜಿ ಪ್ರಭುಗೆ ಕರೆ ಮಾಡಿ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು.
ಮಧುಗಿರಿ ತಾಲೂಕು ಚಿನ್ನೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಸಾಕಷ್ಟು ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಅವರ ಆರೋಗ್ಯ ವಿಚಾರಿಸಲು ತೆರಳಿದ ವೇಳೆ ಯಾವುದೇ ಅಧಿಕಾರಿಗಳು ಇಲ್ಲದ್ದನ್ನು ಕಂಡು ವಿ.ಸೋಮಣ್ಣ ಗರಂ ಆದರು. ಜಿಲ್ಲಾಸ್ಪತ್ರೆಯಲ್ಲೇ ಕರೆ ಮಾಡಿ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು
ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರಿಗೆ ಕರೆ ಮಾಡಿದ ಸೋಮಣ್ಣ, ಅಮ್ಮಾ ಯಾರೂ ಗತಿ ಇಲ್ವಲ್ಲಮ್ಮಾ. ನಾನು ಮಂತ್ರಿ ಫಸ್ಟ್ ಟೈಮ್ ಬಂದಿದಿನಿ. ಆಸ್ಪತ್ರೆಗೆ ಬರ್ತಿದಿನಿ ನೀವು ಇಲ್ಲ. ನಿಮ್ಮ ಸಿಇಒನೂ ಇಲ್ಲ. ನೀರಾವರಿ ಇಲಾಖೆಯವರೂ ಯಾರೂ ಇಲ್ಲ. ಯಾವನೂ ಇಲ್ಲ ಎಂದರು.
ಮುಂದುವರೆದು ಮಾತನಾಡಿ, ಒಬ್ಬ ಡಿಎಸ್ ಇದಾರೆ. ಮಧುಗಿರಿಯಲ್ಲಿ ಗಿಡ ನೆಡೋದು ದೊಡ್ಡದಾ? ನಾನು ಆಸ್ಪತ್ರೆಗೆ ಬಂದೊಗ್ತಿನಿ ಅಂದ್ರಿ ಆಯ್ತಮ್ಮಾ ಅಂದೆ. ತಾವೇ ಹೇಳುದ್ರೋ ಇಲ್ವಮ್ಮಾ? ಕಾಂಟ್ರವರ್ಸಿ ಮಾಡಕೋಬೇಡಿ ಅಮ್ಮ. ದಯವಿಟ್ಟು ಕಾಂಟ್ರುವರ್ಸಿ ಮಾಡಕೋಬೇಡಿ. ನಾನು ಇವರೆಲ್ಲರಿಗಿಂತ ಸರ್ವಿಸ್ ಇದೆ. ನಾನು ಬಂದಿದಿನಿ ಅಂದರೆ ರಿಸೀವ್ ಮಾಡಿಕೊಳ್ಳೋಕೆ ಅಟ್ಲಿಸ್ಟ್ ಒಬ್ಬ ಗತಿ ಇಲ್ಲವಲ್ಲ. ತಾವೇ ಮಂತ್ರಿಯಾಗಿ ನಾನು ಡಿಸಿಯಾಗಿ ಏನು ಮಾಡ್ತಿದ್ರಿ? ಹೇಳಮ್ಮ ಎಂದು ಕೇಳಿದರು.
ಮುಂದುವರೆದು, ಆ ಪ್ರಭು ನಿನ್ನೆ ಕಾಲ್ ಮಾಡಿದಾಗ ಮೇಡಂ ಅಸ್ಪತ್ರೆಗೆ ಬರ್ತಾರೆ ಅಂದ್ರು. ಆಯ್ತಪ್ಪ ಅಂದೆ. ನಾನು ಬಂದಿದಿನಿ, ಯಾವೊಬ್ಬ ಅಧಿಕಾರಿನೂ ಇಲ್ಲ. ನೀವೇ ಹೇಳಿದ್ರಲ್ಲಮ್ಮ ಆಸ್ಪತ್ರೆಗೆ ಬರ್ತಿನಿ ಅಂದ್ರಲ್ಲ. ಆಯ್ತು ಬಾ ಅಮ್ಮ ಅಂದೆ. ನನ್ ಪ್ರಜೆನ್ಸಿಲಿ ಇರಬೇಕೋ ಬೇಡ್ವೋ? ನಾನು ಮಂತ್ರಿ ಅಲ್ವಾ? ಸೆಂಟ್ರಲ್ ಗೌರ್ನಮೆಂಟ್ ಲೆಕ್ಕ ಇಲ್ವಾ? ನಿಮಗೆಷ್ಟು ಭಯ ಇರಬೇಕು? ನನಗೆ ಹರ್ಟ್ ಆಯ್ತಮ್ಮ. ಬರ್ತಿನಿ ಅಂದು ಬರ್ಲಿಲ್ಲ. ಬರಬೇಕಾಗಿದ್ದು ನಿಮ್ ಡ್ಯೂಟಿ ಅಲ್ವಾ? ಜಿಲ್ಲಾಧಿಕಾರಿ ಅಂದ್ರೆ ಸ್ಟೇಟ್ ಅಷ್ಟೇ ಸೀಮಿತನಾ? ಸೆಂಟ್ರಲ್ ಗವರ್ನ್ಮೆಂಟ್ ಏನೇನು ಇಲ್ವಾ? ನನಗೆ ರಿಪೋರ್ಟ್ ಕಳುಹಿಸಿ ಸಂಜೆ ಒಳಗೆ ಎಂದು ಖಾರವಾಗಿಯೇ ಬೈದರು.
ಯಾವನೂ ಇಲ್ಲ, ಜಿಪಂ ಸಿಇಒಗೆ ಹಿಗ್ಗಾಮುಗ್ಗಾ ತರಾಟೆ: ಜಿಲ್ಲಾ ಪಂಚಾಯತ್ ಸಿಇಒಗೆ ಕರೆ ಮಾಡಿದ ವಿ.ಸೋಮಣ್ಣ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ನಾನು ಆಸ್ಪತ್ರೆಗೆ ಬಂದಿದಿನಿ. ಯಾವನೂ ಬಂದಿಲ್ಲ. ಡಿಎಚ್ಒಗೂ ಕುಡಿಯುವ ನೀರಿಗೂ ಏನ್ ಸಂಬಂಧ ಅಪ್ಪಾ? ನೀರು ಕೊಡೋರು ಯಾರಪ್ಪ? ಚಿನ್ನೇನಹಳ್ಳಿಗೆ ನಾನು ಬರ್ತಿನಿ ಅಂತಾ ಹೇಳಿಲ್ಲ. ಇಲ್ಲಿ ಯಾವನೂ ಗತಿ ಇಲ್ಲ. ಒಬ್ಬ ಅಧಿಕಾರಿ ಇಲ್ಲ. ನನ್ ಟೂರ್ ಪ್ರೋಗ್ರಾಂ ನಲ್ಲಿ ಚಿನ್ನೇನಹಳ್ಳಿಗೆ ಬರ್ತಿನಿ ಅಂತೇಳಿಲ್ಲ. ಯಾವುದಕ್ಕೋ ಏನು ಯಾರೊ ಬರ್ತಾರಂತಾ ಹೋಗಿಬಿಟ್ಟು ನನಗೆ ಮಕ್ ಮಲ್ ಟೋಪಿ ಹಾಕ್ತಿದ್ದೀರಾ? ನನಗೆ ಹಂಗೆ ಮಾಡೊಕೆ ಆಗಲ್ಲ. ದಯವಿಟ್ಟು ಬೇಡ. ನಾನು ಎಂಪಿಯಾಗಿ ಮಾತಾಡುತ್ತಿದ್ದೇನೆ. ಇಬ್ಬರು ಬಿಟ್ರೆ ಯಾರೂ ಗತಿಯಿಲ್ಲ. ಇದಾಗಬಾರದು. ಇದು ಒಳ್ಳೆಯದಲ್ಲ. ಜನರಿಗೆ ಈ ತರ ಮಾಡಬೇಡಿ. ಬಾರಪ್ಪ ಅಂದೆ. ಇನ್ಯಾರೋ ಬರ್ತಾರಂತ ಹೋಗಿದಿರಾ? ನನಗೆ ಹೇಳಬೇಡಿ. ನೀವು ಕೂಡ ಬ್ಯಾಕ್ ರೌಂಡ್ ನಲ್ಲಿ ಬಂದಿದಿರಾ ಅನ್ನೊದನ್ನ ಅರ್ಥ ಮಾಡಿಕೊಳ್ಳಿ. ಡಿಸಿನೂ ಇಲ್ಲ. ಯಾವನೂ ಇಲ್ದ್ರಿ ಎಂದರು.
ತುಮಕೂರು: ನೂತನ ಸಚಿವ ವಿ. ಸೋಮಣ್ಣ ಶ್ರೀಕ್ಷೇತ್ರ ಸಿದ್ದಗಂಗಾ ಮಠಕ್ಕೆ ಭೇಟಿ
ತುಮಕೂರು: ಸಚಿವರಾದ ಬಳಿಕ ಮೊದಲ ಬಾರಿಗೆ ತುಮಕೂರು ಕ್ಷೇತ್ರಕ್ಕೆ ವಿ. ಸೋಮಣ್ಣ ಭೇಟಿ ನೀಡಿದರು.
ಶ್ರೀ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಶ್ರೀಗಳ ಗೆದ್ದುಗೆ ದರ್ಶನ ಪಡೆದು, ಆಶೀರ್ವಾದ ಪಡೆದರು. ಬಳಿಕ ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗಸ್ವಾಮಿಯ ಆಶೀರ್ವಾದ ಪಡೆದರು.
ಈ ವೇಳೆ ಮಾಜಿ ಸಂಸದ ಜಿ.ಎಸ್. ಬಸವರಾಜ್, ಶಾಸಕರಾದ ಜಿ.ಬಿ ಜ್ಯೋತಿ ಗಣೇಶ್, ಬಿ. ಸುರೇಶ್ ಗೌಡ ಭಾಗಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumakuru: ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ 50ಎಕರೆ ಭೂಮಿ ಮಂಜೂರು: ಸಿಎಂ
Tumkur: ಬಸ್ ಪಲ್ಟಿಯಾಗಿ ಮೂವರು ಸಾವು
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Koratagere: ಕಂದಾಯ ಇಲಾಖೆ ಸಿಬ್ಬಂದಿ ಸೇರಿ ನಾಲ್ವರ ಮೇಲೆ ಹೆಜ್ಜೇನು ದಾಳಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.