ಅಂದು ಸಿನಿಮಾ ಕಲಾವಿದ ಇಂದು ಆಯುರ್ವೇದ ಪಂಡಿತ
Team Udayavani, Nov 1, 2019, 5:45 PM IST
ಹುಳಿಯಾರು: ಕಂದಿಕೆರೆ ನಾಟಕದ ನಂಜಪ್ಪ ಮನೆಯಿಂದ ಹೊರಹೊಮ್ಮಿದ ಅಪ್ರತಿಮ ರಂಗ ಪ್ರತಿಭೆ ಹುಳಿಯಾರ್ ಮಂಜು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದೆ. ನಿಜನಾಮ ಕೆ.ಆರ್. ಬಸವರಾಜ ಪಂಡಿತ್ ಆಗಿದ್ದರೂ ರಂಗಭೂಮಿ ಹಾಗೂ ಸಿನಿಮಾ ರಂಗದಲ್ಲಿ ಹುಳಿಯಾರ್ ಮಂಜು ಎಂದೇ ಚಿರಪರಿಚಿತ. ಹೆಸರು ಬದಲಾವಣೆ ಹಿಂದೆ ತಂದೆ ಶಿಕ್ಷಕ ಕೆ.ಎನ್. ರುದ್ರಯ್ಯ ಹಾಗೂ ತಾಯಿ ಲಿಂಗಮ್ಮ ಪಾತ್ರ ಮಹತ್ತರವಾದದ್ದು, ತಾತ ನಂಜಪ್ಪರೊಂದಿಗಿನ ರಂಗಭೂಮಿ ಒಡನಾಟ ರಂಗಭೂಮಿ ಆಕರ್ಷಿಸಿತ್ತು.
ಆದರೆಹೆತ್ತವರಿಗೆ ಮಗ ಬಣ್ಣ ಹಚ್ಚುವುದು ಇಷ್ಟವಿರಲಿಲ್ಲ. ರಂಗಕರ್ಮಿಗಳ ಕಷ್ಟ ಬಲ್ಲವರಾಗಿದ್ದರಿಂದ ಮಗ ಕಷ್ಟ ಪಡದಿರಲಿ ಎಂಬ ಕಾಳಜಿ ಅವರಲ್ಲಿತ್ತು. ಆದರೆ ಹೆತ್ತವರು ಎಷ್ಟೇ ತಡೆದರೂ ಬಸವರಾಜು ಬದಲು ಹುಳಿಯಾರ್ ಮಂಜುಆಗಿ ಕದ್ದು ಮುಚ್ಚಿ ರಂಗಭೂಮಿ ಸಖ್ಯ ಬೆಳೆಸಿಕೊಂಡಿದ್ದರು. ತಾವೇ ನಾಟಕ ರಚಿಸುವ, ಗೆಳೆಯರಿಗೆ ನಾಟಕ ಕಲಿಸುವ, ಅಭಿನಯಿಸುವ ತ್ರಿಪಾತ್ರಧಾರಿ ಯಾಗಿದ್ದರು. ಈ ಆಸಕ್ತಿ ಇವರಿಗೆ 17 ವರ್ಷಕ್ಕೆ ಗುಬ್ಬಿ ಕಂಪನಿ ಸೇರಲು ಪ್ರೇರೇಪಿಸಿತು. ಎಡೆಯೂರು ಸಿದ್ಧಲಿಂಗ ಮಹಾತ್ಮೆ, ಲವಕುಶ, ಸದಾರಮೆ ನಾಟಕಗಳಲ್ಲಿ ಅಭಿನಯಿಸಿದರು.
ನಂತರ ಗುಬ್ಬಿ ವೀರಣ್ಣ ಪುತ್ರಿ ಮಾಲತಮ್ಮ ಸಹಕಾರದಿಂದ 1971ರಲ್ಲಿ “ಮನೆ ಬೆಳಕು’ ಚಿತ್ರದಲ್ಲಿ ಸಹನಟನಾಗಿ ಸಿನಿಮಾ ಕ್ಷೇತ್ರಕ್ಕೆ ಧುಮುಕಿದರು. ಅಲ್ಲಿ ಹುಣಸೂರು ಕೃಷ್ಣಮೂರ್ತಿ, ಜಿ.ವಿ. ಐಯ್ಯರ್, ವೈ.ಆರ್. ಸ್ವಾಮಿ, ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ವಿಜಯ್‌ರಂತಹ ದಿಗ್ಗಜರ ಗರಡಿಯಲ್ಲಿ ಪಳಗಿದರು. ಮನೆಬೆಳಕು, ತಾಯಿಗಿಂತ ದೇವರಿಲ್ಲ, ಆಟೋ ರಾಜ, ಅನುಪಮ, ಮಯೂರ, ಬಬ್ರುವಾಹನ ಹೀಗೆ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಹನಟ ಹಾಗೂ ಸಹನಿರ್ದೇಶಕನಾಗಿ ಛಾಪು ಮೂಡಿಸಿದರು.
ಹೊಸದುರ್ಗದ ಜಮೀನಾªರ್ ನಂಜಪ್ಪ ಪುತ್ರಿ ರಾಜಮ್ಮ ಅವರನ್ನು 1981ರಲ್ಲಿ ಕೈ ಹಿಡಿದ ನಂತರ 20 ವರ್ಷ ಸಿನಿಮಾ ರಂಗದ ನಂಟು ಬಿಟ್ಟು ತಂದೆ ಜೊತೆಗೆ ಆಯುರ್ವೇದವೈದ್ಯಕೀಯ ಸೇವೆ ಆರಂಭಿಸಿದರು. ತಂದೆ ನಿಧನದ ನಂತರ ಹುಳಿಯಾರಿನಲ್ಲಿ ಆರೋಗ್ಯ ಮಂದಿರ ಸ್ಥಾಪಿಸಿ ಗಿಡಮೂಲಿಕೆ ಗಳ ಪರಿಚಯ, ಉಪಯೋಗದ ಅರಿವು ಮೂಡಿಸುತ್ತಿದ್ದಾರೆ.
ವಿವಿಧ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ತೆರಳಿ ಔಷಧ ಸಸ್ಯಗಳ ಪರಿಚಯದ ಕಾರ್ಯಾಗಾರ ನಡೆಸುತ್ತಾರೆ. ಇವರ ಸೇವೆ ಗುರುತಿಸಿ ಪ್ರಶಸ್ತಿ, ಸನ್ಮಾನ ಸಿಕ್ಕಿದೆ. ಪ್ರಸ್ತುತ ಹುಳಿಯಾರಿನಲ್ಲಿ ವಾಸವಾಗಿರುವ ಇವರು ವಿವಿಧ ಸಂಘ-ಸಂಸ್ಥೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.
-ಎಚ್.ಬಿ. ಕಿರಣ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್!
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Koratagere; ಲಾರಿ- ಕಾರಿನ ನಡುವೆ ಭೀಕರ ಅಪಘಾ*ತ: ಯುವಕರಿಬ್ಬರ ಸಾ*ವು
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾದ ಪ್ರಕರಣ: ಇಬ್ಬರು ಶಿಕ್ಷಕರು ಅಮಾನತು
Tumkur: ಮಧುಗಿರಿ ಡಿವೈಎಸ್ಪಿ ವಿರುದ್ಧ ಮತ್ತೊಬ್ಬ ಸಂತ್ರಸ್ತೆಯಿಂದ ವಿಡಿಯೋ ಆರೋಪ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.