ಚೆಕ್ ಡ್ಯಾಂ ನಿರ್ಮಾಣಕ್ಕೆ ವಿರೋಧ
Team Udayavani, Jun 2, 2020, 6:51 AM IST
ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ಹಾಗಲವಾಡಿ ದೊಡ್ಡಕೆರೆಗೆ ನೈಸರ್ಗಿಕವಾಗಿ ನೀರು ಹರಿದು ಬರುವ ರಾಜಗಾಲುವೆಗೆ ಅಡ್ಡಲಾಗಿ ಚೆಕ್‌ಡ್ಯಾಂ ನಿರ್ಮಿಸಲು ಮುಂದಾಗಿರುವ ಸರ್ಕಾ ರದ ಕ್ರಮವನ್ನು ಖಂಡಿಸಿ ಸೋಮವಾರ ಹಾಗಲವಾಡಿ ರೈತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟಿಸಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸರ್ಕಾರದ ವಿರುದ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ರೈತ ಮುಖಂಡ ಹಾಗಲವಾಡಿ ಶಂಕರ್ ಮಾತನಾಡಿ, ಹಾಗಲವಾಡಿ ಹೋಬಳಿ ಹೇಮಾವತಿ ನೀರಿನಿಂದವಂಚಿತವಾಗಿದ್ದು, ಕಳೆದ 20 ವರ್ಷ ಗಳಿಂದ ಬರದ ಬವಣೆಯನ್ನು ಎದುರಿಸುತ್ತಿದ್ದೇವೆ.
ಹಾಗಲವಾಡಿ ದೊಡ್ಡಕೆರೆ ನೈಸರ್ಗಿಕವಾಗಿ ಹರಿದು ಬರುವ ನೀರು ಸಹ ಚೆಕ್‌ಡ್ಯಾಂ ನಿರ್ಮಾಣದಿಂದ ಬರದೇ ಹೋದರೆ ಈ ಭಾಗದ ರೈತರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಕೆನಾಲ್ ಕಾಮಗಾರಿ ಕುಂಟುತ್ತ ಸಾಗುತ್ತಿದ್ದು, ಯೋಜನೆಯನ್ನು ಚುರುಕು ಗೊಳಿಸಬೇಕಿದೆ. ಅಲ್ಲಿಯವರೆಗೆ ದೊಡ್ಡ ಕೆರೆ ಸಂಪರ್ಕ ಕಲ್ಪಿಸುವ ರಾಜಗಾಲುವೆಗೆ ಚೆಕ್‌ಡ್ಯಾಂ, ಬಂಡ್‌ಗಳನ್ನು ನಿರ್ಮಿಸುವ ಯೋಜನೆ ಕೈಬಿಡದೇ ಹೋದರೆ ಸುತ್ತಮುತ್ತಲಿನ 15ಕ್ಕೂ ಹೆಚ್ಚು ಹಳ್ಳಿಗಳ ರೈತರು, ಸಾರ್ವಜನಿಕರು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.
ಈ ನಿಟ್ಟಿನಲ್ಲಿ ಸರ್ಕಾರ ಚೆಕ್‌ಡ್ಯಾಂ ನಿರ್ಮಾಣಕ್ಕೆ ಮುಂದಾಗಬಾರದು ಎಂದು ಒತ್ತಾಯಿಸಿದರು. ಮಳೆ ನೀರನ್ನೇ ಅವಲಂಬಿಸಿರುವ ಹಾಗಲವಾಡಿ ದೊಡ್ಡಕೆರೆಗೆ ಬರುವ ನೀರಿನಿಂದ ರೈತರು ಉಸಿರಾಡುತ್ತಿದ್ದು, ರಾಜ್ಯ ಸರ್ಕಾರ ಚೆಕ್‌ಡ್ಯಾಂ ನಿರ್ಮಿಸು ವುದನ್ನು ಕೈಬಿಡದೇ ಹೋದರೆ ರೈತರು ಹೋರಾಟಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.