ಕೇಂದ್ರದ ವಿರುದ್ಧ ಆಕ್ರೋಶ
ಅವೈಜ್ಞಾನಿಕ ದಂಡ, ಮೋಟಾರ್ ವಾಹನ ಮಸೂದೆ ತಿದ್ದುಪಡಿ ವಾಪಸ್ ಪಡೆಯಲು ಆಗ್ರಹ
Team Udayavani, Aug 28, 2019, 1:39 PM IST
ತುಮಕೂರಿನಲ್ಲಿ ಆಟೋ ಚಾಲಕರ ಫೆಡರೇಷನ್ ಆಫ್ ಆಟೋ ಡ್ರೈವರ್ ಯೂನಿಯನ್ ಸಿಐಟಿಯು ನೇತೃತ್ವದಲ್ಲಿ ಆಟೋ ಚಾಲಕರು ಪ್ರತಿಭಟನೆ ನಡೆಸಿದರು.
ತುಮಕೂರು: ಅವೈಜ್ಞಾನಿಕ ದುಬಾರಿ ದಂಡ, ಕೇಂದ್ರ ಮೋಟಾರ್ ವಾಹನ ಮಸೂದೆ ತಿದ್ದುಪಡಿ ವಾಪಸ್ ಪಡೆಯಬೇಕು, ಆಟೋ ಚಾಲಕರಿಗೆ ಕಲ್ಯಾಣ ಯೋಜನೆ, ಆಟೋ ಚಾಲಕರಿಗೆ ನಿಗದಿಪಡಿಸಿರುವ ವಿದ್ಯಾರ್ಹತೆ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಆಟೋ ಚಾಲಕರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಆಟೋ ಚಾಲಕರ ಫೆಡರೇಷನ್ ಆಫ್ ಆಟೋ ಡ್ರೈವರ್ ಯೂನಿಯನ್ ಸಿಐಟಿಯು ನೇತೃತ್ವದಲ್ಲಿ ಆಟೋ ಚಾಲಕರು ಕೇಂದ್ರ ಸರ್ಕಾರದ ಧೋರಣೆ ಖಂಡಿಸಿದರು.
ಆಟೋ ಚಾಲಕರ ಮುಖಂಡ ಸಿದ್ದರಾಜು ಮಾತನಾಡಿ, ಆಟೋ ಚಾಲಕರಿಗೆ ಮನೆ, ಉತ್ತಮ ವೈದ್ಯಕೀಯ ಸೌಲಭ್ಯ, ವೃದ್ಧಾಪ್ಯ ಸಮಯದಲ್ಲಿ ಕನಿಷ್ಠ ಪಿಂಚಣಿ ಸೌಲಭ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ನೀಡದೆ ವಂಚಿಸಲಾಗುತ್ತಿದೆ ಎಂದು ದೂರಿದರು.
ದುಬಾರಿ ದಂಡ: ಮೋಟಾರು ಕಾಯ್ದೆಗೆ ತಿದ್ದುಪಡಿ ತಂದು ಆಟೋ ಚಾಲಕರ ಆದಾಯ ಕಿತ್ತುಕೊಳ್ಳುವ ಕೆಲಸ ಮಾಡಲಾಗು ತ್ತಿದೆ. ಸಣ್ಣ ತಪ್ಪಿಗೂ 10 ಪಟ್ಟು ದಂಡ ಹೆಚ್ಚಿಸಿ ರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಟೋ ಚಾಲಕ ರಂಗಪ್ಪ ಮಾತನಾಡಿ, 15 ವರ್ಷದ ಹಳೆಯ ಆಟೋ ರದ್ದುಪಡಿ ಸುತ್ತಿದ್ದು, ಹಳೆ ಆಟೋಗಳಿಗೆ ಕಂಪನಿಗಳಿಂದ ದರ ನಿಗದಿಪಡಿಸಬೇಕು. ಸರ್ಕಾರ 50 ಸಾವಿರ ರೂ. ಪ್ರೋತ್ಸಾಹಧನ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ನೀಡಬೇಕು. 15 ವರ್ಷ ಹಳೆಯ ಆಟೋ ನಿಷೇಧಿಸುವುದಾದರೆ ಹಳೆಯ ಆಟೋಗಳಿಗೆ ನಿಗದಿತ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.
ಮುಖಂಡ ಮಂಜುನಾಥ್ ಮಾತನಾಡಿ, ಆಟೋ ಚಾಲಕರಿಗೆ ಮನೆ, ಕಾಲನಿ ನಿರ್ಮಿಸಿಕೊಡಬೇಕು. ಜೊತೆಗೆ ದುಬಾರಿ ಆರ್‌ಟಿಒ ಶುಲ್ಕ, ದುಬಾರಿ ವಾಹನ ವಿಮಾ ಪಾಲಿಸಿ ಹೆಚ್ಚಳ ಹಾಗೂ ದುಬಾರಿ ದಂಡ ಭರಿಸಲಾಗದೆ ಚಾಲಕರು ಕಂಗಾಲಾಗಿದ್ದು, ಕೂಡಲೇ ಇವರಿಗೆ ಕಾಲನಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಭವಿಷ್ಯನಿಧಿ, ಪಿಂಚಣಿ ಯೋಜನೆ ಜಾರಿ ಮಾಡಿ: ಸಿಐಟಿಯು ಜಿಲ್ಲಾ ಮುಖಂಡ ಎನ್.ಕೆ. ಸುಬ್ರಹ್ಮಣ್ಯ ಮಾತನಾಡಿ, ಅಸಂಘ ಟಿತ ಕಾರ್ಮಿಕರಾದ ಆಟೋ ಚಾಲಕರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಭವಿಷ್ಯನಿಧಿ ಜಾರಿ ಹಾಗೂ ಪಿಂಚಣಿ ಯೋಜನೆ ಜಾರಿ ಗೊಳಿಸಬೇಕು.
ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ಸಾರಿಗೆ ಕಾರ್ಮಿಕರಿಗೆ ಭವಿಷ್ಯನಿಧಿ ಹಾಗೂ ಪಿಂಚಣಿ ಯೋಜನೆ ಜಾರಿ ಮಾಡಿದ್ದು, ಅದೇ ರೀತಿ ಇಲ್ಲೂ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರವು ಆಟೋ ಚಾಲಕರಿಗೆ ಇಎಸ್‌ಐ ಸೌಲಭ್ಯ ನೀಡಲು ತೀರ್ಮಾ ನಿಸಿದ್ದು, ಅದನ್ನು ಜಾರಿ ಮಾಡಲು ರಾಜ್ಯ ಸರ್ಕಾರ ಗಮನಹರಿಸಬೇಕೆಂದು ಒತ್ತಾ ಯಿಸಿದರು. ಅಪರ ಜಿಲ್ಲಾಧಿಕಾರಿ ಚನ್ನ ಬಸಪ್ಪಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಆಟೋ ಚಾಲಕರು ಮತ್ತು ಆರ್‌ಟಿಓ ಅಧಿಕಾರಿಗಳ ಜಂಟಿ ಸಭೆ ಕರೆದು ಇಎಸ್‌ಐ ಸೌಲಭ್ಯ ಸೇರಿದಂತೆ ಸ್ಥಳೀಯ ಮಟ್ಟದ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಮುಖಂಡರಾದ ಇಂತಿಯಾಜ್ ಪಾಷ, ತಿಮ್ಮೇಗೌಡ, ಸಿದ್ದರಾಮಯ್ಯ, ಪ್ರಕಾಶ್, ಶ್ರೀನಿವಾಸ್, ಲಿಂಗಪ್ಪ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koratagere: ಕಾರು-ಬೈಕ್ ಭೀಕರ ಅಪಘಾತ: ಓರ್ವ ಸವಾರ ಸ್ಥಳದಲ್ಲೇ ಸಾವು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್!
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Koratagere; ಲಾರಿ- ಕಾರಿನ ನಡುವೆ ಭೀಕರ ಅಪಘಾ*ತ: ಯುವಕರಿಬ್ಬರ ಸಾ*ವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.