5ನೇ ಬಾರಿಗೆ ಸಂಸತ್‌ ಪ್ರವೇಶಿಸಿ ಜಿಎಸ್‌ಬಿ ಇತಿಹಾಸ ಸೃಷ್ಟಿ

ಮತ್ತೆ ಅರಳಿದ ಕಮಲ • ಮೈತ್ರಿಯಿಂದ ಮಾಜಿ ಪ್ರಧಾನಿಗೆ ಸೋಲು • ಉಭಯ ನಾಯಕರಿಗೆ ಮುಖಭಂಗ

Team Udayavani, May 25, 2019, 5:22 PM IST

tk-tdy-1

ತುಮಕೂರು: 2019ರ ಲೋಕಸಭಾ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್‌.ಬಸವರಾಜ್‌ ತಮ್ಮ ಪ್ರತಿಸ್ಪರ್ಧಿ ಮೈತ್ರಿಪಕ್ಷದ ಅಭ್ಯರ್ಥಿ ಎಚ್.ಡಿ. ದೇವೇ ಗೌಡ ಅವರನ್ನು ಸೋಲಿಸಿ, ಬಿಜೆಪಿ ಪಕ್ಷ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲೂ ದಾಖಲೆ ಸಾಧಿಸಿದ್ದಾರೆ. ವಿಧಾನ ಸಭಾ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸುವ ಮೂಲಕ ಜೆಡಿಎಸ್‌- ಕಾಂಗ್ರೆಸ್‌ ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ. ಗೆದ್ದೇ ಗೆಲ್ಲುತ್ತೇವೆ ಎನ್ನುತ್ತಿದ್ದ ಉಭಯ ನಾಯಕರಿಗೆ ಈ ಸೋಲು ಮುಖಭಂಗವಾಗಿದೆ.

ಈ ಫ‌ಲಿತಾಂಶವನ್ನು ಆಧರಿಸಿ ಸೋಲು- ಗೆಲುವಿನ ಲೆಕ್ಕಾಚಾರದ ಚರ್ಚೆಗಳು ಜಿಲ್ಲೆಯಲ್ಲಿ ನಡೆಯುತ್ತಿದೆ. ಬಸವರಾಜು ಗೆಲುವಿಗೆ ಕಾರಣವೇನು? ಎಚ್. ಡಿ.ದೇವೇಗೌಡರು ಸೋತಿದ್ದೇಕೆ? ಮೈತ್ರಿ ಅಭ್ಯರ್ಥಿಗೆ ಎಲ್ಲಿ ಮತಗಳು ಬೀಳಲಿಲ್ಲ ಎನ್ನುವ ಬಗ್ಗೆ ಕಾರ್ಯ ಕರ್ತರು, ಮತದಾರರು ವಿಶ್ಲೇಷಣೆಗಳನ್ನು ಟೀ ಅಂಗಡಿ, ಹೋಟೆಲ್, ಅರಳೀಕಟ್ಟೆಗಳಲ್ಲಿ ಕುಳಿತು ವ್ಯಾಪಕ ಚರ್ಚೆಗಳೂ ನಡೆಯುತ್ತಿದೆ.

ಸೋಲು -ಗೆಲುವಲ್ಲಿ ಜಾತಿಯೇ ನಿರ್ಣಾಯಕ: ತುಮಕೂರು ಲೋಕಸಭಾ ಕ್ಷೇತ್ರದ ಫ‌ಲಿತಾಂಶದಲ್ಲಿ ಅಭಿವೃದ್ಧಿ, ಪಕ್ಷ ಸಿದ್ದಾಂತ ಇವೆ ಲ್ಲವನ್ನು ಮೀರಿ ಜಾತಿ ನಿರ್ಣಾ ಯಕ ಪಾತ್ರವಹಿಸಿರುವುದು ಕಂಡು ಬಂದಿದೆ. ಜಿಲ್ಲೆಯ ಎರಡು ಪ್ರಮುಖ ಜಾತಿ ಗಳಾದ ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾ ಯದ ಮತಗಳು ತಮ್ಮ ತಮ್ಮ ಸಮು ದಾಯದ ಅಭ್ಯರ್ಥಿ ಗಳಿಗೆ ಸಮೀಕರಣವಾ ದಂತೆ ಚಲಾ ವಣೆಯಾಗಿದ್ದು, ಅಭ್ಯರ್ಥಿ ಗೆಲ್ಲುವಲ್ಲಿ ಜಾತಿ ಪ್ರಧಾನ ಪಾತ್ರ ವಹಿಸಿರುವುದು ಕಂಡು ಬಂದಿದೆ. ಗೆಲುವಿನ ನಗೆ ಬೀರಿ ರುವ ಬಿಜೆಪಿ ಅಭ್ಯರ್ಥಿ ಜಿ.ಎಸ್‌.ಬಸವರಾಜ್‌ ವೀರ ಶೈವ ಸಮುದಾಯಕ್ಕೆ ಸೇರಿ ದವರಾಗಿದ್ದು, ಲಿಂಗಾಯಿತ ಸಮುದಾಯದ ಮತ ಪಕ್ಷಾತೀತವಾಗಿ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಜೊತೆಗೆ ಒಕ್ಕಲಿಗ, ಹಿಂದುಳಿದ ದಲಿತ ವರ್ಗಗಳ ಮತಗಳು ಮೋದಿ ಅಲೆಯಲ್ಲಿ ಮತ ಚಲಾಯಿಸಿರುವುದು ಅವರಿಗೆ ಗೆಲ್ಲುವಿಗೆ ಪ್ರಮುಖ ಕಾರವಾಗಿದೆ. ಇದರ ಜೊತೆಗೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಒಗ್ಗಟ್ಟು ಮೂಡದೇ ಇರುವುದು ಒಳ್ಳಂದೊಳ್ಳಗೆ ಒಳ ಏಟು ಕೊಟ್ಟು ದೇವೇಗೌಡರ ಸೋಲಿಗೆ ಕಾರಣ ವಾಯಿತು. ಜೆಡಿಎಸ್‌ ಪ್ರಾಬಲ್ಯ ಜಿಲ್ಲೆಯಲ್ಲಿದೆ, ಒಕ್ಕಲಿಗ ಮತಗಳು ಹೆಚ್ಚಾ ಗಿವೆ. ಅಲ್ಪಸಂಖ್ಯಾತರ ಮತ ಗಳು ಇತರೆ ಹಿಂದುಳಿದ ಮತಗಳನ್ನು ಪಡೆದು ಗೆಲ್ಲು ತ್ತೇನೆ ಎನ್ನುವ ವಿಶ್ವಾಸ ಹೊಂದಿದ್ದ ದೇವೇಗೌಡರಿಗೆ ನಿರಾಸೆಯಾಗಿದೆ.

ಪರಮೇಶ್ವರ್‌ಗೆ ಮುಖಭಂಗ: ಕಳೆದ ಬಾರಿಯ ಕಡಿಮೆ ಅಂತರದ ಸೋಲಿನ ಅನುಕಂಪವೂ ಬಸವ ರಾಜ್‌ಗೆ ಗೆಲುವಿಗೆ ಪ್ಲಸ್‌ ಪಾಯಿಂಟ್ ಆಗಿದ್ದು, ನರೇಂದ್ರ ಮೋದಿಯವರ 5 ವರ್ಷದ ಆಡಳಿತ ಮತ್ತು ಇಡೀ ದೇಶದಲ್ಲಿ ಮೋದಿಯ ಅಲೆ ಸುನಾಮಿಯಂತೆ ಬೀಸಿದ್ದು, ಅದು ಬಸವರಾಜ್‌ ಗೆಲ್ಲುವಿಗೆ ಹೆಚ್ಚು ಉಪ ಯೋಗವಾಗಿದೆ. ಈ ಅಲೆಯಲ್ಲಿ ಕಾಂಗ್ರೆಸ್‌ ಮುಖಂಡ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಎಷ್ಟೇ ಪ್ರಯತ್ನ ಮಾಡಿದರೂ ಮೈತ್ರಿ ಅಭ್ಯರ್ಥಿ ಎಚ್.ಡಿ.ದೇವೇಗೌಡರು ಗೆಲುವು ಸಾಧ್ಯವಾಗದೆ ಸೋಲಿನ ರುಚಿ ಉಂಡಿದ್ದು, ಪರಮೇಶ್ವರ್‌ ಅವರಿಗೆ ಮುಖ ಭಂಗವಾದಂತಾಗಿದೆ. ಅಲ್ಲದೇ ಕಾಂಗ್ರೆಸ್‌ನಿಂದ ಟಿಕೆಟ್ ಪಡೆಯುತ್ತೇನೆ ಎಂದು ಬಹಳ ನಿರೀಕ್ಷಿಸಿದ ಹಾಲಿ ಸಂಸದ ಎಸ್‌.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸಿದ್ದು, ಟಿಕೆಟ್ ವಂಚಿತ ಸಂಸದರು ಮೈತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮೈತ್ರಿ ಆರಂಭದಿಂದಲೇ ವಿರೋಧಿಸಿಕೊಂಡು ಬಂದಿದ್ದ, ಮಾಜಿ ಶಾಸಕ ಕೆ.ಎನ್‌.ರಾಜಣ್ಣ, ಹಾಗೇಯೆ ಜೆಡಿಎಸ್‌, ಕಾಂಗ್ರೆಸ್‌ ಹೊಂದಾ ಣಿಕೆ ಸರಿಯಾಗದೆ ಇದ್ದದ್ದು, ಈ ಫ‌ಲಿತಾಂಶ ಮೈತ್ರಿ ವಿರುದ್ಧವಾಗಿ ಬರಲು ಪ್ರಮುಖ ಕಾರಣವಾಗಿದೆ.

ಒಕ್ಕಲಿಗ ಮತಗಳು ಬಿಜೆಪಿಗೆ ಚಲಾವಣೆ: ಜೆಡಿಎಸ್‌ನ ಸಾಂಪ್ರದಾಯಿಕ ಒಕ್ಕಲಿಗ ಮತಗಳು ಕೂಡಿ ಈ ಬಾರಿ ಬಿಜೆಪಿಗೆ ಚಲಾವಣೆಯಾಗಿದೆ. ಇದು ಬಸವ ರಾಜ್‌ ಗೆಲುವಿಗೆ ಕಾರಣವಾಯಿತು. ಒಕ್ಕಲಿಗರೇ ಪ್ರಾಬಲ್ಯವಿರುವ ಮಧುಗಿರಿ, ತುಮಕೂರು ಗ್ರಾಮಾಂತರ, ಗುಬ್ಬಿ, ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್‌.ಬಸವರಾಜ್‌ಗೆ ಹೆಚ್ಚು ಮತಗಳು ಬಿದ್ದಿರು ವುದು ಗೌಡರ ಸೋಲಿಗೆ ಮುಖ್ಯ ಅಂಶವಾಗಿದೆ. ಮಧುಗಿರಿ, ಕೊರಟಗೆರೆ, ತುಮಕೂರು ವಿಧಾನ ಸಭಾ ಕ್ಷೇತ್ರಗಳಲ್ಲಿ ನಿರೀಕ್ಷೆಗೂ ಮೀರಿದ ಮತಗಳು ಬಿಜೆಪಿಗೆ ಬಿದ್ದಿವೆ. ಜೆಡಿಎಸ್‌ ಭದ್ರಕೋಟೆಯಾಗಿದ್ದ ಚಿ.ನಾ.ಹಳ್ಳಿ, ತುರುವೇಕೆರೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತಗಳು ಜೆಡಿಎಸ್‌ ಪಡೆದುಕೊಂಡಿದೆ. ಆದರೂ ಗೆಲುವು ಪಡೆಯುವಲ್ಲಿ ಮೈತ್ರಿ ವಿಫ‌ಲವಾಗಿದೆ.

● ಚಿ.ನಿ. ಪುರುಷೋತ್ತಮ್‌

ಟಾಪ್ ನ್ಯೂಸ್

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್‌: ಸಚಿವ ಡಾ| ಜಿ. ಪರಮೇಶ್ವರ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

1-huliraya

Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.