ಶ್ರೀಗಳ ಜತೆ ಇನ್ನೊಮ್ಮೆ ಪಾಟೀಲ್ ಮಾತುಕತೆ
Team Udayavani, Sep 15, 2017, 7:00 AM IST
ತುಮಕೂರು: ರಾಜ್ಯದಲ್ಲಿ ಭುಗಿಲೆದ್ದಿರುವ ವೀರಶೈವ-ಲಿಂಗಾಯತ ವಿವಾದದ ಬೆನ್ನಲ್ಲೇ ಗುರುವಾರ ಸಂಜೆ ಸಿದ್ಧಗಂಗಾ ಮಠಕ್ಕೆ ನೀರಾವರಿ ಸಚಿವ ಎಂ.ಬಿ.ಪಾಟೀಲ್ ದಿಢೀರ್ ಭೇಟಿ ನೀಡಿ, ಶ್ರೀಗಳ ಜತೆ ರಹಸ್ಯ ಮಾತುಕತೆ ನಡೆಸಿದ್ದಾರೆ.
ಖಾಸಗಿ ಕಾರಿನಲ್ಲಿ ಶಂಕರ ಬಿದರಿ ಜತೆ ಮಠಕ್ಕೆ ಆಗಮಿಸಿದ ಸಚಿವರು, ಹಳೆಯ ಮಠಕ್ಕೆ ತೆರಳಿ ಹಿರಿಯ ಶ್ರೀಗಳ ಜತೆ ರಹಸ್ಯ ಮಾತುಕತೆ ನಡೆಸಿ ಬಳಿಕ, ಕಿರಿಯ ಶ್ರೀಗಳ ಜತೆ ಮಾತುಕತೆ ನಡೆಸಿದರು. ಮಾತು ಕತೆಯ ವಿವರ ತಿಳಿದು ಬಂದಿಲ್ಲ. ನಂತರ ಮಾಧ್ಯಮಗಳ ಜತೆ ಮಾತನಾಡಿ, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ.ಗೊಂದಲವೆಲ್ಲ ಅಂತ್ಯಗೊಂಡಿದೆ. ಇದು ನಮ್ಮ ಮಠ,ಇವತ್ತಿಗೆ ಎಲ್ಲಾ ವಿವಾದಗಳು ಮುಕ್ತಾಯಗೊಂಡಿವೆ.
ಎಲ್ಲಾ ಸಿದ್ಧಗಂಗಾ ಶ್ರೀಗಳ ಅಣತಿಯಂತೆ ನಡೆಯುತ್ತವೆ ಎಂದು ಹೇಳಿದರು. ಕಿರಿಯ ಶ್ರೀಗಳು ಮಾತನಾಡಿ, ಇತ್ತೀಚಿನ ಬೆಳವಣಿಗೆಯಿಂದ ಬೇಸತ್ತು, ಶ್ರೀಗಳ ಆಶೀರ್ವಾದ ಪಡೆಯಲು ಸಚಿವರು ಬಂದಿದ್ದಾರೆ. ಸಚಿವರು ಕ್ಷಮಿಸಲಾರದಂತಹ ಗುರುದ್ರೋಹವೇನನ್ನೂ ಮಾಡಿಲ್ಲ. ಪಾಟೀಲರು ಕ್ಷಮೆ ಕೇಳುವ ಅಗತ್ಯ ಇಲ್ಲ.ಅವರು ಈಗ ನಿರಾಳರಾಗಿದ್ದಾರೆ ಎಂದರು.
ಸಿದ್ಧಗಂಗಾ ಶ್ರೀ ವಿರುದ್ಧ
ಮಾತಾಡಿದ್ರೆ ಸರ್ವನಾಶ
ಬಾಗಲಕೋಟೆ: ಸಿದ್ಧಗಂಗಾ ಶ್ರೀಗಳ ವಿರುದ್ಧ ಮಾತನಾಡಿದವರು ಸರ್ವನಾಶ ಆಗಿ ಹೋಗ್ತಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳು ಜಾತಿಭೇದ ಮರೆತು ಅನ್ನದಾನ, ವಿದ್ಯಾದಾನ ಮಾಡುತ್ತಿದ್ದಾರೆ.
ಅಂತಹ ಮಹಾ ಪುರುಷರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು. ಸಿದ್ದರಾಮಯ್ಯನವರ ಚೇಲಾಗಳು ಪ್ರತ್ಯೇಕ ಲಿಂಗಾಯತ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಶ್ರೀಗಳ ಹೆಸರಿಗೆ ಕಳಂಕತರುವ ಕೆಲಸ ಮಾಡುತ್ತಿರುವ ಸಚಿವರು ಸರ್ವನಾಶವಾಗಿ ಹೋಗುತ್ತಾರೆ ಎಂದರು.
ಮಾತೆ ಮಹಾದೇವಿ ವಿರುದ್ಧ ಪ್ರತಿಭಟನೆ
ತುಮಕೂರು: ಸಿದ್ಧಗಂಗಾ ಶ್ರೀಡಾ.ಶಿವಕುಮಾರ ಸ್ವಾಮೀಜಿ ಅವರ ಬಗ್ಗೆ ಮಾತೆ ಮಹಾದೇವಿ ಅವರು ಹಗುರವಾಗಿ
ಮಾತನಾಡಿರುವುದನ್ನು ಖಂಡಿಸಿ ಗುರುವಾರ ಮಠದ ಭಕ್ತರು, ನಾಗರಿಕರು ಹಾಗೂ ಮಠದ ಹಳೆಯ ವಿದ್ಯಾರ್ಥಿಗಳು ನಗರದ
ಟೌನ್‌ಹಾಲ್ ವೃತ್ತದಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು. ಮಾತೆ ಮಹಾದೇವಿ ಮತ್ತು ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಪ್ರತಿಭಟನೆ ನಡೆಸಿದ ಭಕ್ತರು, ಅವರ ವಿರುದಟಛಿ ಧಿಕ್ಕಾರ ಕೂಗಿದರು. ನಂತರ ಮಾನವ ಸರಪಳಿ ನಿರ್ಮಿಸಿ ಕೆಲಹೊತ್ತು ರಸ್ತೆ ತಡೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮಾತೆ ಮಹಾದೇವಿ ಯವರು ಕೂಡಲೇ ಶ್ರೀಗಳ ಪಾದಗಳಿಗೆ ಬಿದ್ದು ಕ್ಷಮೆಯಾಚಿಸಬೇಕು. ಎಂ.ಬಿ.ಪಾಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ, ರಾಮನಗರ, ಮಂಡ್ಯ ಸೇರಿದಂತೆ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು.
ಸಿದ್ಧಗಂಗಾ ಶ್ರೀಗಳ
ಮಾತೇ ಅಂತಿಮ
ಬೆಂಗಳೂರು: ವೀರಶೈವ ಮತ್ತು ಲಿಂಗಾಯತ ಇಬ್ಬರೂ ಒಟ್ಟಾಗಿ ಹೋಗಬೇಕೆಂದು ತುಮಕೂರಿನ ಸಿದ್ಧಗಂಗಾ ಶ್ರೀಗಳು ಹೇಳಿರುವ ಮಾತೇ ಅಂತಿಮ ಎಂದು ಪೌರಾಡ ಳಿತ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಷಯದಲ್ಲಿ ಎಲ್ಲರೂ ಒಟ್ಟಾಗ ಹೋಗಬೇಕೆಂದು ನಿರ್ಧರಿಸಿದ್ದೇವೆ. ಇನ್ನು ಮುಂದೆ ಒಡಕಿನ ಮಾತು ಬೇಡ, ಎಂ.ಬಿ.ಪಾಟೀಲರು ನಮ್ಮ ಸ್ನೇಹಿತರು ಎಂದು ಹೇಳಿದ್ದಾರೆ. ಸಿದ್ಧಗಂಗಾ ಶ್ರೀಗಳ ಕುರಿತು ಮಾತೆ ಮಹಾದೇವಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾ ಕರಿಸಿದ ಅವರು, ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳ ಬಗ್ಗೆ ಎಲ್ಲರಿಗೂ ಗೌರವವಿದೆ. ಅದಕ್ಕೆ ಯಾರೂ ಚ್ಯುತಿ ತರಬಾರದು. ಸಿದಟಛಿಗಂಗೆಯ ಆಡಳಿತಾಧಿಕಾರಿಯ ಆಡಿಯೋ ಸಿಡಿ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಖಂಡ್ರೆ ಹೇಳಿದರು.
ಸಿದ್ಧಗಂಗಾ ಶ್ರೀಗಳಿಗೆ ಕಾಂಗ್ರೆಸ್‌ನವರು ಅವಮಾನಿಸಿರುವ ಹಿನ್ನೆಲೆಯಲ್ಲಿ ಸ್ವತಃ ಮುಖ್ಯಮಂತ್ರಿಗಳೇ ರಾಜ್ಯದ ಜನತೆಯ ಹಾಗೂ ಶ್ರೀಗಳ ಕ್ಷಮೆಯಾಚಿಸಬೇಕು. ಶ್ರೀಗಳಿಗೆ ದೊಡ್ಡ ಹೆಸರಿದ್ದು, ಅವರಿಗೆ ನೆನಪಿನ ಶಕ್ತಿ ಕಡಿಮೆಯಾಗಿದೆ ಎಂದು ಹೇಳಿರುವುದು ಸರಿಯಲ್ಲ. ಇದು ಅವರಿಗೆ ಮಾಡಿದ ಅವಮಾನ. ಸಮಾಜ ವಿಭಜನೆ, ಸಂತರ ಬಗ್ಗೆ ಟೀಕೆಯನ್ನು ಬಿಜೆಪಿ ಸಹಿಸುವುದಿಲ್ಲ.
– ಮುರುಳೀಧರರಾವ್
ಬಿಜೆಪಿ ರಾಜ್ಯ ಉಸ್ತುವಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Naxal ಶರಣಾಗತಿ; ಚಿಕ್ಕಮಗಳೂರು ಡಿಸಿ ಕಚೇರಿ ಸುತ್ತಮುತ್ತ ಬಿಗಿ ಭದ್ರತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Naxalites ಶರಣಾಗತಿಯಲ್ಲಿ ಟ್ವಿಸ್ಟ್; ಚಿಕ್ಕಮಗಳೂರು ಬದಲು ಬೆಂಗಳೂರಿನಲ್ಲಿ ನಕ್ಸಲರ ಶರಣಾಗತಿ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.