Pavagada: ರಸ್ತೆ ಅಪಘಾತ; ಇಬ್ಬರು ವಿದ್ಯಾರ್ಥಿಗಳು ಸಾವು
Team Udayavani, Aug 12, 2023, 2:08 PM IST
ಪಾವಗಡ: ದ್ವಿಚಕ್ರ ವಾಹನ ಹಾಗೂ ಬೊಲೆರೋ ಪಿಕ್ಅಪ್ ವಾಹನದ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ವಿದ್ಯಾರ್ಥಿ ಸ್ಥಿತಿ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಕಡಮಲಕುಂಟೆ ಗ್ರಾಮದ ಗೇಟ್ ಬಳಿ ಆ.12ರ ಶನಿವಾರ ನಡೆದಿದೆ.
ಪಾವಗಡ ಪಟ್ಟಣದ ಶ್ರೀ ಶನಿ ಮಹಾತ್ಮ ದೇವಸ್ಥಾನಕ್ಕೆ ಸ್ವಾಮಿಯ ದರ್ಶನಕ್ಕಾಗಿ ಆಂಧ್ರ ಪ್ರದೇಶದ ಚಿನ್ನಕೊಡಿಪಲ್ಲಿ ಗ್ರಾಮದಿಂದ ಬರುತ್ತಿದ್ದ ವಿದ್ಯಾರ್ಥಿಗಳಾದ ಈಶ್ವರ್(17), ಯಶ್ವಂತ್(17), ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬ ವಿದ್ಯಾರ್ಥಿ ರಾಮು ಗಂಭೀರ ಗಾಯಗೊಂಡಿದ್ದಾನೆ.
ಅಪಘಾತವಾದ ಸ್ಥಳದಿಂದ ಬೊಲೆರೋ ವಾಹನ ಸಮೇತ ಪರಾರಿಯಾಗಿದ್ದ ಚಾಲಕನನ್ನು ನಾಗಲಮಡಿಕೆ ಗ್ರಾಮಸ್ಥರ ಸಹಕಾರದಿಂದ ವಾಹನ ಹಾಗೂ ಚಾಲಕನನ್ನು ಗ್ರಾಮದಲ್ಲಿ ಹಿಡಿಯಲಾಗಿದೆ. ಪಾವಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.