ಗ್ರಾಪಂ ಸದಸ್ಯರ ಆರೋಪಕ್ಕೆ ಕಾಲ್ಕಿತ್ತ ಪಿಡಿಒ
Team Udayavani, Jul 4, 2017, 10:17 AM IST
ಕುಣಿಗಲ್: ಸದಸ್ಯರ ಗಮನಕ್ಕೆ ಬಾರದಂತೆ ಪಿಡಿಒ ಮತ್ತು ಅಧ್ಯಕ್ಷರು ಗ್ರಾಮಸಭೆ ಮಾಡುತ್ತಿರುವುದನ್ನು ಖಂಡಿಸಿ ಗ್ರಾಪಂ ಸದಸ್ಯರೇ ಪ್ರತಿಭಟಿಸಿ ವಾಗ್ವಾದ ನಡೆಸಿದ ಪರಿಣಾಮ ಹೆದರಿದ ಪಿಡಿಒ ಸಭೆಯಿಂದ ಕಾಲ್ಕಿತ್ತ ಘಟನೆ ನಡೆದಿದೆ.
ತಾಲೂಕಿನ ಕೊತ್ತಗೆರೆ ಹೋಬಳಿ ತರೇದಕುಪ್ಪೆ ಗ್ರಾಪಂನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಿಡಿಒ ಚಂದ್ರಹಾಸ್ ಕೆಲ ಸದಸ್ಯರನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡು ಕೆಲಸ ಮಾಡುವ ಮೂಲಕ ಉಳಿದ ಕೆಲ ಸದಸ್ಯರ ಕೆಂಗಣ್ಣಿಗೆ
ಗುರಿಯಾಗಿದ್ದರಿಂದ ಕಾಂಗ್ರೆಸ್ ಬೆಂಬಲಿತ ಸದಸ್ಯರ ಒಂದು ಗುಂಪು ಪಿಡಿಒ ವರ್ತನೆ ಖಂಡಿಸಿ ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ಪಿಡಿಒ ವಿರುದ್ಧ ಗ್ರಾಪಂ ಸದಸ್ಯರಾದ ಹರೀಶ್, ಸತೀಶ್, ನಾರಾಯಣ್, ದಯಾನಂದ್,
ಯಶೋಧಮ್ಮ, ಶಾಂತಮ್ಮ ಆರೋಪಿಸಿ ಪಕ್ಷ ಬೇಧ ಮಾಡುವ ಈ ಅಧಿಕಾರಿಯನ್ನು ಬೇರೆಡೆಗೆ ವರ್ಗ ಮಾಡುವಂತೆ ಆಗ್ರಹಿಸಿದರು. ಅಲ್ಲದೆ ಕುಡಿಯುವ ನೀರು ಸೇರಿದಂತೆ 14ನೇ ಹಣಕಾಸನ್ನು ಸಮರ್ಪಕವಾಗಿ ನಿರ್ವಹಿಸದೆ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುವ ಪಿಡಿಒ ಸಾಮಾನ್ಯ ಜನರ ನೋವು ಕೇಳುವುದನ್ನು ಮರೆತಿದ್ದಾರೆಂದು
ದೂರಿದರು.
ಸದಸ್ಯ ಹರೀಶ್ ಮಾತನಾಡಿ, ಪಿಡಿಒ ಅವರು ಗ್ರಾಮ ಸಭೆ ಮಾಡಲು ನಮಗೆ ತಿಳಿಸದೇ ತರಾತುರಿಯಲ್ಲಿ ಇರುವ 13
ಸದಸ್ಯರ ಗುಂಪಿನಲ್ಲಿಯೇ ಗುಂಪುಗಾರಿಕೆ ಮಾಡುವ ಮೂಲಕ ಅಧಿಕಾರ ನಡೆಸುತ್ತಿದ್ದಾರೆ, ಎಲ್ ಚುನಾಯಿತ ಸದಸ್ಯರನ್ನು ಪರಿಗಣನೆಗೆ ಪಡೆಯದೇ ಕೆಲವರನ್ನು ಓಲೈಸುವ ಮೂಲಕ ಬೇಜವಾಬ್ದಾರಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಿತ್ಯ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ
ಜಾರಿಗೊಳಿಸಲು ವಿಫಲರಾಗಿದ್ದಾರೆ. ಪಂಚಾಯ್ತಿ ಮುಂಭಾಗವೇ ಚರಂಡಿಗಳು ಕಟ್ಟಿಕೊಂಡು ಗಬ್ಬು ನಾರುತ್ತಿವೆ. ಇರುವ
ಒಂದು ಸಾರ್ವಜನಿಕ ತಂಗುದಾಣದಲ್ಲಿ ಜನರು ನಿಲ್ಲಲಾಗದೇ ಬರೀ ದನ ಎಮ್ಮೆಗಳ ತಾಣವಾಗಿದೆ ಎಂದು ಕಿಡಿಕಾರಿದರು.
ಅಧ್ಯಕ್ಷೆ ಮುದ್ದಹನುಮಮ್ಮ ಮಾತನಾಡಿ, ಅಧಿಕಾರಿಗಳು ಕೆಲಸ ಮಾಡುತ್ತಿದ್ದು ಸದಸ್ಯರು ವೃಥಾ ಆರೋಪ ಮಾಡುತ್ತಿದ್ದಾರೆಂದು ದೂರಿದರು. ಗ್ರಾಪಂ ಒಳ ನಡೆಯುತ್ತಿದ್ದ ವ್ಯಾಜ್ಯ ಬೀದಿಗೆ ಬಂದ ಪರಿಣಾಮ ಗ್ರಾಮದ
ಕೆಲವರಿಗೆ ಪುಕ್ಕಟ್ಟೆ ಮನರಂಜನೆಯಾದರೆ ಮತ್ತೆ ಕೆಲವು ಯುವಕರು ಮತ್ತು ಹಿರಿಯರು ಮಧ್ಯ ಪ್ರವೇಶಿಸಿದರು.
ನಂತರ, ವಾಗ್ವಾದ ಮಾಡುವ ಮೂಲಕ ಪಂಚಾಯ್ತಿಯಲ್ಲಿ ಕುಡಿಯಲು ನೀರಿಲ್ಲ ಸಮರ್ಪಕ ಕೆಲಸಗಳು ಆಗುತ್ತಿಲ್ಲ ಜನ
ಸಾಮಾನ್ಯರ ಕೆಲಸ ಆಗದೇ ಬರಿ ಅಧಿಕಾರ, ಹಣ ಉಳ್ಳವರ ಕೆಲಸ ಮಾಡಲಾಗುತ್ತಿದೆ ಎಂದು ದೂರಿ ಆರೋಪಿಸಿದರು.
ಮುಖಂಡರಾದ ಶಿವರಾಮಯ್ಯ, ಪಾಪಣ್ಣ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.