![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 26, 2019, 11:21 AM IST
ಮಾಂಸಕ್ಕಾಗಿ ನವಿಲು ಶಿಕಾರಿಯಾಡುತ್ತಿದ್ದ ಸೆಣಬ ಗ್ರಾಮದ ಶ್ರೀನಿವಾಸನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವುದು.
ಕುಣಿಗಲ್: ಹಣ ಮತ್ತು ಮಾಂಸಕ್ಕಾಗಿ ನವಿಲುಗಳನ್ನು ನಿರಂತರವಾಗಿ ಬೇಟೆಯಾಡುತ್ತಿರುವುದು ಪ್ರಾಣಿ ಪ್ರಿಯರ ಆಕ್ರೋ ಶಕ್ಕೆ ಕಾರಣವಾಗಿದ್ದು ಓರ್ವ ಆರೋಪಿ ಯನ್ನು ಅರಣ್ಯಾಧಿಕಾರಿಗಳು ಬಂಧಿಸಿ, ಆತನಿಂದ ನವಿಲು ಮಾಂಸ, ಬಂದೂಕು ಜಪ್ತಿ ಮಾಡಿದ್ದಾರೆ.
ತಾಲೂಕಿನ ವಿವಿಧ ಅರಣ್ಯ ಪ್ರವೇಶದ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಅಕ್ರಮ ಕಲ್ಲು ಗಣಿ ನಡೆಯುತ್ತಿದೆ. ಈ ಪ್ರದೇಶದಲ್ಲಿ ನವಿಲು ಗಳು ಹೆಚ್ಚಾಗಿ ವಾಸವಾಗಿವೆ. ಆದರೆ, ಗಣಿಗಳ ಸಿದ್ದಿಮದ್ದುಗಳ ಶಬ್ದಕ್ಕೆ ನವಿಲು ಗಳು ಹೃದಯಾಘಾತಕ್ಕೆ ಒಳಗಾಗಿ ಸಾವನ್ನ ಪ್ಪುತ್ತಿವೆ. ಇನ್ನೊಂದೆಡೆೆ ಮಾಂಸಕ್ಕಾಗಿಯೂ ನವಿಲು ಶಿಕಾರಿ ನಡೆಯುತ್ತಿದೆ.
ಒಂದು ನವಿಲನ್ನು 1700 ರೂ.ನಿಂದ 2800 ರೂ. ವರೆಗೂ ಮಾರಾಟ ಮಾಡುತ್ತಿ ದ್ದಾರೆ. ನಂಬಿಕಸ್ಥ ಮಧ್ಯವರ್ತಿಗಳ ಮೂಲಕ ಗುಪ್ತ ವ್ಯವಹಾರ ನಡೆಸುವ ಬೇಟೆಗಾರರು, ನವಿಲು ಮಾಂಸ ಪೂರೈಸುತ್ತಿದ್ದಾರೆ. ನವಿಲು ಶಿಕಾರಿ ಮಾಡಿ ಗರಿ ಮತ್ತು ತಲೆ ತೆಗೆದು ಮಾಂಸವನ್ನು ಯಾರಿಗೂ ಗೊತ್ತಿಲ್ಲದಂತೆ ಮಾರುತ್ತಿದ್ದಾರೆ.ತಾಲೂಕಿನಲ್ಲಿ ನವಿಲುಗಳ ನಿಖರ ಗಣತಿ ಮಾಡಿಲ್ಲವಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜಿನ ಪ್ರಕಾರ 25 ಸಾವಿರಕ್ಕೂ ಅಧಿಕ ನವಿಲುಗಳಿವೆ ಎನ್ನಲಾ ಗಿದೆ. ತಾಲೂಕಿನ ರಾಮಭಾಣ ಹಂತದ ತೋಟದ ಸಾಲು ಪಟ್ಟಣದ ಸ್ಟಡ್ ಫಾರಂ ಹಾಗೂ ಹೇರೂರು ಬಿಳಿದೇವಾ ಲಯ ಹುಲ್ಲುಗಾವಲು ಪ್ರದೇಶ, ಹುಲಿ ಯೂರುದುರ್ಗ ಅರಣ್ಯ ಪ್ರದೇಶ ಸೇರಿ ದಂತೆ ತಾಲೂಕಿನ ಎಲ್ಲಾ ಕಡೆ ನವಿಲುಗಳು ಕಾಣಿಸಿಕೊಳ್ಳುತ್ತಿವೆ.
ನೀರಾವರಿ ಪ್ರದೇಶದ ಹಸಿರು ಪ್ರದೇಶ ದಲ್ಲಿ ನವಿಲುಗಳು ವಿಹರಿಸುತ್ತಿದ್ದು ತೋಟ ಗಳಲ್ಲಿಯೇ ಸಿಗುವ ನವಿಲಿನ ಮೊಟ್ಟೆಗಳು ಮಾಲೀಕರ ಆಹಾರವಾಗುತ್ತವೆ.
ನವಿಲುಗಳ ಮೇಲೆ ವಿಕೇಂಡ್ ಮೋಜು ಮಸ್ತಿಯಲ್ಲಿ ತೊಡಗುವವರ ಕಣ್ಣು ಬಿದ್ದಿದ್ದು, ತಮ್ಮ ಕ್ರೇಜ್ ಹಾಗೂ ಬಾಯಿ ರುಚಿಗಾಗಿ ನವಿಲು ಮಾಂಸಕ್ಕೆ ಮುಗಿ ಬಿದ್ದಿದ್ದಾರೆ. ಇದರ ಲಾಭ ಪಡೆದು ಹಣ ಮಾಡಲು ತಾಲೂಕಿನ ಕೆಲವು ಕಿಡಿ ಗೇಡಿಗಳು ನವಿಲು ಬೇಟೆಗೆ ಮುಂದಾಗಿ ದ್ದಾರೆ. ಮಾಂಸಕ್ಕಾಗಿ ನವಿಲು ಬೆೇಟೆ ಯಾ ಡುತ್ತಿದ್ದ ತಾಲೂಕಿನ ಹುಲಿಯೂರುದರ್ಗ ಹೋಬಳಿ ಸೆಣಬ ಗ್ರಾಮದ ಶ್ರೀನಿವಾಸ್‌ನನ್ನು ಬಂಧಿಸಲಾಗಿದೆ. ಗ್ರಾಮದ ಸುತ್ತು ಮುತ್ತ ತೋಟ ಹಾಗೂ ಅರಣ್ಯ ಪ್ರದೇಶ ಗಳಲ್ಲಿ ನವಿಲುಗಳು ವಿಹಾರದಲ್ಲಿದ್ದಾಗ ನಾಡ ಬಂದೂಕಿನಿಂದ ಗುಂಡು ಹೊಡೆದು ಕೊಂದು ನಂತರ ಮನೆಯಲ್ಲಿ ಅಡುಗೆ ಮಾಡುತ್ತಿದ್ದ. ಬಂಧಿತನಿಂದ 2.5 ಕೆ.ಜಿ. ನವಿಲು ಮಾಂಸ, ನಾಡ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
● ಕೆ.ಎನ್.ಲೋಕೇಶ್
Congress: ಹೈಕಮಾಂಡ್ ಒಪ್ಪಿಗೆ ಮೇರೆಗೆ ಶೋಷಿತರ ಸಮಾವೇಶ: ಕೆ.ಎನ್.ರಾಜಣ್ಣ
Madhugiri: 90 ಲಕ್ಷದ ಬೆಳೆ ವಿಮೆ ಹಣ ಅಕ್ರಮ ತನಿಖೆಗೆ ಆಗ್ರಹ
Tumkur: ಪರಂ, ರಾಜಣ್ಣ ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್
Koratagere: ಗುಡಿಸಲಿಗೆ ಆಕಸ್ಮಿಕ ಬೆಂ*ಕಿ; 4 ಮೇಕೆಗಳು ಸಜೀವ ದಹನ; ಇಬ್ಬರಿಗೆ ಗಾಯ
Koratagere: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್; ಓರ್ವ ಆರೋಪಿ ಬಂಧನ
You seem to have an Ad Blocker on.
To continue reading, please turn it off or whitelist Udayavani.