ಮಧುಗಿರಿ: ತಾಲೂಕಿನಲ್ಲಿ ಭೀಕರ ಬರ ಗಾಲ ಎದುರಾಗಿದ್ದು, ಸಾಕಷ್ಟು ಕೊಳವೆ ಬಾವಿ ಕೊರೆಸಿದರೂ ನೀರಿನ ಲಭ್ಯತೆ ಕಡಿಮೆಯಿದೆ. ಆದರೂ ಸರ್ಕಾರವು ಜನ ಜಾನುವಾರುಗಳಿಗೆ ನೀರಿನ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಕೊಡಿಗೇನಹಳ್ಳಿ ಹಾಗೂ ಪುರವರ ಹೋಬಳಿಯಲ್ಲಿ ಆರಂಭವಾಗಿ ರುವ ಮೇವು ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ರೈತ ರೊಂದಿಗೆ ಸಮಸ್ಯೆಗಳ ಬಗ್ಗೆ ಹಾಗೂ ಪರಿ ಹಾರದ ಬಗ್ಗೆ ಚರ್ಚಿಸಿದರು.
ಮೈದನಹಳ್ಳಿ ಮೇವು ಬ್ಯಾಂಕ್‌ನಲ್ಲಿಯೂ ಭತ್ತದ ಮೇವು ವಿತರಣೆಗೆ ರೈತರು ಒತ್ತಾಯಿ ಸಿದರು. ಯಾವುದೇ ವೇಳೆ ಜನರಿಗೆ ಹಾಗೂ ಜಾನು ವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ 14 ನೇ ಹಣಕಾಸು ಅನುದಾನ ಸಮರ್ಪಕವಾಗಿ ಬಳಸಿಕೊಂಡು ಕ್ರಮ ಕೈಗೊಳ್ಳಲು ಸೂಚಿಸಿದರು.
ಪಶು ಇಲಾಖೆ ಸಹಾಯಕ ನಿರ್ದೇಶಕ ನಾಗಭೂಷಣ್, ತಾಲೂಕಿನಲ್ಲಿ ಸತತ ವಾಗಿ ಗ್ರಾಪಂ ಮಟ್ಟದಲ್ಲಿ ಮೇವು ವಿತರಣೆ ಸಮರ್ಪಕವಾಗಿ ನಡೆಯು ತ್ತಿದ್ದು, ರೈತರು ಸಂತೋಷದಿಂದ ಮೇವು ಪಡೆಯುತ್ತಿದ್ದು, ಎಲ್ಲಿಯೂ ಅಪಸ್ವರ ಉಂಟಾಗಿಲ್ಲ. ಮುಂದಿನ ದಿನಗಳ ಲ್ಲಿಯೂ ಇದೇ ಕಾರ್ಯ ನಿರ್ವಹಿಸು ವುದಾಗಿ ತಿಳಿಸಿದರು.
ಈ ವೇಳೆ ಉಪವಿಭಾಗಾಧಿಕಾರಿ ವೀಣಾ, ಪಶು ಇಲಾಖೆ ಸಹಾಯಕ ನಿರ್ದೇಶಕ ನಾಗಭೂಷಣ್, ಗ್ರಾಪಂ ಅಧ್ಯಕ್ಷ ಕಾಂತರಾಜು, ಪಿಡಿಒ ವೆಂಕಟಾ ಚಲಪತಿ, ಪಶುವೈದ್ಯ ಜಗದೀಶ್, ಭಾಗ್ಯಲಕ್ಷ್ಮೀ, ಕಂದಾಯಾಧಿಕಾರಿ ಶಿವಶಂಕರ್ ನಾಯ್ಕ ಹಾಗೂ ಇತರರಿದ್ದರು.