ಆಧಾರ್ ನೋಂದಣಿಗೆ ಜನರ ಪರದಾಟ
Team Udayavani, Oct 26, 2019, 4:06 PM IST
ಕೊರಟಗೆರೆ: ಆಧಾರ್ ನೋಂದಣಿ ಮತ್ತು ತಿದ್ದುಪಡಿಗೆ ಟೋಕನ್‌ಗಾಗಿ ರಾತ್ರಿಯಿಂದ ಬೆಳಗ್ಗೆಯವರೆಗೆ ಸರದಿ ಸಾಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ತಾಲೂಕಿನಲ್ಲಿ ಸೃಷ್ಟಿಯಾಗಿದೆ.
ಪಟ್ಟಣದ ಎಸ್‌ಬಿಐ ಬ್ಯಾಂಕ್ ಮುಂದೆ ಆಧಾರ್ ನೋಂದಣಿ ಮತ್ತು ತಿದ್ದುಪಡಿಗಾಗಿ ಟೋಕನ್ ಪಡೆಯಲು ಪ್ರತಿನಿತ್ಯ ಸುಮಾರು 200ರಿಂದ 300 ಜನ ಸರದಿ ಸಾಲಿನಲ್ಲಿ ನಿಲ್ಲು ವಂತಾಗಿದೆ. ಆದರೆ ದಿನಕ್ಕೆ ಕೇವಲ ದಿನಕ್ಕೆ 25 ಮಂದಿಗಷ್ಟೇ ಟೋಕನ್ ನೀಡ ಲಾಗುತ್ತಿದ್ದು, ಉಳಿದವರು ಬರಿಗೈಲಿ ಮನೆಗೆ ವಾಪಸ್ ಹೋಗಬೇಕು. ರಾತ್ರಿ 8 ಗಂಟೆಯಿಂದ ಬೆಳಗ್ಗೆ ಎಸ್‌ಬಿಐ ಬ್ಯಾಂಕ್ ತೆರೆಯುವವರೆಗೆ ಮಕ್ಕಳು ಹೆಣ್ಣು, ಮಕ್ಕಳು, ವೃದ್ಧರು ಮತ್ತು ಯುವಕರು ಟೋಕನ್ ಪಡೆಯಲು ಕ್ಯೂ ನಿಲ್ಲುತ್ತಾರೆ.
ಮಳೆ, ಗಾಳಿ, ಚಳಿ ಎನ್ನದೆ ಬ್ಯಾಂಕ್ ಮುಂದೆ ರಾತ್ರಿಯೇ ಬಂದು ಕೂರುತ್ತಾರೆ. ಪ್ರತಿನಿತ್ಯ ವಿದ್ಯಾರ್ಥಿಗಳು ಶಾಲಾ- ಕಾಲೇಜು ಬಿಟ್ಟು, ಸಾರ್ವಜನಿಕರು, ರೈತರು ದಿನ ನಿತ್ಯ ಚಟುವಟಿಕೆ ಮುಂದುವರೆಸಲಾಗದೆ ಸಾಲಿನಲ್ಲಿ ನಿಂತು ಟೋಕನ್ ಪಡೆಯುವಂತಹ ಪರಿಸ್ಥಿತಿ ಉಂಟಾಗಿದೆ. ಸಮಸ್ಯೆಯು ತಾಲೂಕಿನಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಕ್ಷೇತ್ರದ ಜನಪ್ರತಿ ನಿಧಿಗಳು, ದಂಡಾಧಿಕಾರಿಗಳು ಮತ್ತು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಕೊಡಲೇ ಕ್ರಮ ತೆಗೆದುಕೊಂಡು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ನೋಂದಣಿ ಕೇಂದ್ರ ಪ್ರಾರಂಭಿಸ ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್!
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Koratagere; ಲಾರಿ- ಕಾರಿನ ನಡುವೆ ಭೀಕರ ಅಪಘಾ*ತ: ಯುವಕರಿಬ್ಬರ ಸಾ*ವು
ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿಯಾದ ಪ್ರಕರಣ: ಇಬ್ಬರು ಶಿಕ್ಷಕರು ಅಮಾನತು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.