ಗ್ರಾಮಾಭಿವೃದ್ದಿಯಿಂದ ಜನಪರ ಕಾರ್ಯ
Team Udayavani, Jun 4, 2021, 7:07 PM IST
ಚಿಕ್ಕನಾಯಕನಹಳ್ಳಿ: ಶ್ರೀ ಧರ್ಮಸ್ಥಳಗ್ರಾಮಾಭಿವೃದ್ಧಿ ಯೋಜನೆಯಿಂದಅನೇಕ ಸಮಾಜಮುಖೀ ಕೆಲಸವನ್ನುಡಾ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಮಾಡಲಾಗುತ್ತಿದ್ದು, ಹಸಿವುಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಆಹಾರ ಕಿಟ್ ನೀಡಲಾಗುತ್ತಿದೆಎಂದು ತಾಲೂಕು ಯೋಜನಾಧಿಕಾರಿ ಪ್ರೇಮಾನಂದ ತಿಳಿಸಿದರು.
ಪಟ್ಟಣದ ತಾಲೂಕು ಆಸ್ಪತ್ರೆಯ ಡಿಗ್ರೂಪ್ ನೌಕರರಿಗೆ ಹಾಗೂ ಚಾಲಕರಿಗೆಆಹಾರ ಕಿಟ್ ನೀಡಿ ಮಾತನಾಡಿದಅವರು, ಕೋವಿಡ್ ಸಂದರ್ಭದಲ್ಲಿರಾಜ್ಯಾದ್ಯಂತ ಜಿಲ್ಲಾ ಹಾಗೂ ತಾಲೂಕುಆಸ್ಪತ್ರೆಗಳಿಗೆ ಆಕ್ಸಿಜನ್, ವೆಂಟಿಲೇಟರ್,ಆಕ್ಸಿಜನ್ ಸಾಂದ್ರಕ ಹಾಗೂ ಇನ್ನಿತರಸೌಲಭ್ಯ ಒದಗಿಸಲಾಗಿದೆ. ರಾಜ್ಯದ ಎಲ್ಲತಾಲೂಕುಗಳಲ್ಲಿ ಕೋವಿಡ್ ಸೋಂಕಿತರಿಗಾಗಿ ಉಚಿತ ವಾಹನ ವ್ಯವಸ್ಥೆಯೋಜನೆ ವತಿಯಿಂದ ಒದಗಿಸಲಾಗಿದೆಎಂದರು.
ಬಡ ಕುಟುಂಬಗಳಿಗೆಆಹಾರದ ಕಿಟ್, ಮಾಸಾಶನ ಔಷಧಮುಂತಾದ ಜನಪರ ಕಾರ್ಯ ಕ್ರಮಗಳನ್ನು ಈಗಾಗಲೇ ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಜನೆಯಿಂದ ಹಮ್ಮಿಕೊಳ್ಳಲಾಗಿದೆ. ತಾಲೂಕಿನಲ್ಲಿ 224 ಸೋಂಕಿತರಿಗೆ ಉಚಿತ ವಾಹನದ ಸೌಲಭ್ಯ, 54ನಿರ್ಗತಿಕ ಕುಟುಂಬಗಳಿಗೆ ಆಹಾರಕಿಟ್ ನೀಡಿದ್ದು, ಮುಂದಿನ ದಿನಗಳಲ್ಲಿಪೂಜ್ಯರ ಮಾರ್ಗದರ್ಶನದಲ್ಲಿ ಹೆಚ್ಚುಕೆಲಸ ಕಾರ್ಯ ಮಾಡಲಾಗುತ್ತದೆಎಂದರು.ತಾಲೂಕುಆರೋಗ್ಯಾಧಿಕಾರಿಡಾ ನವೀನ್, ಆಸ್ಪತ್ರೆ ಆಡಳಿತಾಧಿಕಾರಿಡಾ. ವಿಜಯ ಭಾಸ್ಕರ್ ಹಾಗೂಆರೋಗ್ಯ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು
Pavagada: ರಸ್ತೆ ಅಪಘಾತದಲ್ಲಿ ಮಂಡ್ಯ ಮೂಲದ ಬೊಲೆರೋ ಚಾಲಕ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.