![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jul 6, 2021, 3:02 PM IST
ತುಮಕೂರು: ಕೋವಿಡ್ 2ನೇ ಅಲೆಯ ಪಾಸಿಟಿವಿಟಿ ದರ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಕಲ್ಪತರು ನಾಡು ಸಂಪೂರ್ಣ ಅನ್‌ಲಾಕ್ ಆಗಿರುವುದರಿಂದ ಜಿಲ್ಲಾದ್ಯಂತ ಜನ ಕೊರೊನಾ ಮರೆತು ಸೋಮವಾರ ಎಂದಿನಂತೆ ಸಂಚರಿಸಿದರು.
3ನೇ ಅಲೆಯ ಕೋವಿಡ್ ಸೋಂಕಿನ ಭೀತಿ ನಡುವೆಯೇ ಜಿಲ್ಲೆ 2ನೇ ಅಲೆಯ 3ನೇ ಅನ್ ಲಾಕ್ ಆಗಿದೆ. ಈಗ 3ನೇಅಲೆ ಭೀತಿಯಿದ್ದರೂ ಜಿಲ್ಲೆಯಲ್ಲಿ ಜನ ಕೋವಿಡ್ ಮರೆತು ಮಾಸ್ಕ್ಧರಿಸದೇ ಸಂಚರಿಸಿದರು. ಬಹುತೇಕ ಎಲ್ಲಾ ಅಂಗಡಿಗಳು ತೆರೆದಿದ್ದ ಹಿನ್ನೆಲೆಯಲ್ಲಿ ನಗರಸೇರಿದಂತೆ ಜಿಲ್ಲಾದ್ಯಂತ ಜನ ಕೋವಿಡ್ ನಿಯಮ ಮೀರಿ ಓಡಾಡಿದರು.
ನಿಯಮ ಪಾಲಿಸಿ: ಕೋವಿಡ್ ನಿಯಮವನ್ನು ತಪ್ಪದೇ ಎಲ್ಲರೂ ಪಾಲಿಸಬೇಕು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದರೂ ಜಿಲ್ಲೆಯಲ್ಲಿ ಕೋವಿಡ್ ನಿಯಮ ಪಾಲನೆ ಆಗುತ್ತಿಲ್ಲ. ಜಿಲ್ಲೆಯಲ್ಲಿ ಜನ ಮುಂದೆ 3ನೇ ಅಲೆ ಬರುತ್ತದೆ ಎನ್ನುವುದನ್ನೂ ಮರೆತು ಜನರು ಮಾಸ್ಕ್ ಧರಿಸದೇ ದೈಹಿಕ ಅಂತರ ಕಾಯ್ದು ಕೊಳ್ಳದೇ ಅಡ್ಡಾಡುತ್ತಿದ್ದಾರೆ. ಆದರೆ ಯಾವುದೇ ಅಧಿಕಾರಿಗಳು ನಿಯಂತ್ರಣಕ್ಕೆ ಮುಂದಾಗಿಲ್ಲ.ಜಿಲ್ಲೆಯಲ್ಲಿ ಕಡಿಮೆಯಾಗಿರುವ ಕೊರೊನಾಹೀಗೇ ಮುಂದುವರಿಯಬೇಕಾದರೆ ತಪ್ಪದೇ ಪ್ರತಿಯೊಬ್ಬರೂ ಕೋವಿಡ್ ನಿಯಮ ಪಾಲಿಸಬೇಕಿದೆ.
ರಸ್ತೆಗಳು ಎಲ್ಲೆಲ್ಲೂ ಜಾಮ್ ಜಾಮ್: ಕೋವಿಡ್ 3ನೇ ಅನ್‌ಲಾಕ್ ಆಗಿರುವ ಹಿನ್ನೆಲೆಯಲ್ಲಿ ಸೋಮವಾರ ತುಮಕೂರು ನಗರದ ತುಂಬಾ ವಾಹನಗಳು ತೀವ್ರವಾಗಿ ಸಂಚಾರ ಆರಂಭವಾಗಿರುವ ಹಿನ್ನೆಲೆಯಲ್ಲಿ ನಗರದ ರಸ್ತೆಗಳು ವಾಹನಗಳಿಂದ ತುಂಬಿ ಹೋಗಿದ್ದವು. ವಾಹನಗಳು ಅಧಿಕವಾಗಿ ಬೀದಿಗೆ ಬಂದಿದ್ದರಿಂದ ನಗರದ ಬಹುತೇಕ ರಸ್ತೆಗಳು ಜಾಮ್ ಆಗಿದ್ದವು. ಒಂದೊಂದು ರಸ್ತೆಗಳಲ್ಲಿ ಅರ್ಧ ಗಂಟೆ ಕಾಯಬೇಕಾದ ಪರಿಸ್ಥಿತಿ ಕಂಡು ಬಂದಿತು.
ತುಮಕೂರು ನಗರದೆಲ್ಲೆಡೆ ನಿರ್ಲಕ್ಷ್ಯದ ಓಡಾಟ :
ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಸೋಂಕು ಮರೆತು ಬೀದಿಗೆ ಬಂದು ನಿರ್ಲಕ್ಷ್ಯದಿಂದ ಜನರ ಓಡಾಟ ಹೆಚ್ಚಿದೆ. ಜಿಲ್ಲೆಯ ಜನ ಸೋಂಕು ಮರೆತು ಎಂದಿನಂತೆ ರಸ್ತೆಗಳಲ್ಲಿ ಸಂಚಾರ ಮಾಡುತ್ತಿದ್ದಾರೆ. ಸಾವಿರಾರು ವಾಹನಗಳು ರಸ್ತೆಗಿಳಿದಿವೆ. ಈ ವೇಳೆ ಕೆಲವರು ಮಾಸ್ಕ್ ಧರಿಸದೇ ಕೊರೊನಾ ನಿಯಮ ಬಿಟ್ಟು ಅಡ್ಡಾಡುತ್ತಿದ್ದಾರೆ. ಇವರಿಗೆ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಜಿಲ್ಲಾಡಳಿತ ಇದಕ್ಕೆ ಕಡಿವಾಣ ಹಾಕದಿದ್ದರೆ ಮತ್ತೆ ಜಿಲ್ಲೆಯಲ್ಲಿ ಸೋಂಕು ಹೆಚ್ಚುವ ಸಾಧ್ಯತೆ ನಿಶ್ಚಳವಾಗಿದೆ.
Congress: ಹೈಕಮಾಂಡ್ ಒಪ್ಪಿಗೆ ಮೇರೆಗೆ ಶೋಷಿತರ ಸಮಾವೇಶ: ಕೆ.ಎನ್.ರಾಜಣ್ಣ
Madhugiri: 90 ಲಕ್ಷದ ಬೆಳೆ ವಿಮೆ ಹಣ ಅಕ್ರಮ ತನಿಖೆಗೆ ಆಗ್ರಹ
Tumkur: ಪರಂ, ರಾಜಣ್ಣ ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್
Koratagere: ಗುಡಿಸಲಿಗೆ ಆಕಸ್ಮಿಕ ಬೆಂ*ಕಿ; 4 ಮೇಕೆಗಳು ಸಜೀವ ದಹನ; ಇಬ್ಬರಿಗೆ ಗಾಯ
Koratagere: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್; ಓರ್ವ ಆರೋಪಿ ಬಂಧನ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.