ಸೋಂಕಿತರ ನೆರವಿಗೆ ಹಳ್ಳಿಗಳತ್ತ ವೈದ್ಯರ ನಿಯೋಜನೆ
Team Udayavani, Jun 2, 2021, 7:29 PM IST
ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕನ್ನುಕೊರೊನಾ ಮುಕ್ತ ಮಾಡುವ ನಿಟ್ಟಿನಲ್ಲಿ ಹಾಗೂ ಕ್ಷೇತ್ರದಜನರ ಆರೋಗ್ಯ ರಕ್ಷಣೆಗೆ ಶ್ರೀ ಸಿದ್ದಾರ್ಥ ವೈದ್ಯಕೀಯಕಾಲೇಜು ಮತ್ತು ಆಸ್ಪತ್ರೆಯ ಸಮುದಾಯವೈದ್ಯಕೀಯ ವಿಭಾಗದ12 ಮಂದಿ ವೈದ್ಯರ ತಂಡವನ್ನುಕ್ಷೇತ್ರಕ್ಕೆ ನಿಯೋಜಿಸಿರುವುದಾಗಿ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಸಿದ್ದಾರ್ಥ ಕಾಲೇಜಿನ ವೈದ್ಯರ ಜತೆಗೆ ಸ್ಥಳೀಯಕಂದಾಯ,ಆರೋಗ್ಯಹಾಗೂಪಂಚಾಯತ್‌ಇಲಾಖೆಯೊಂದಿಗೆ ಹಮ್ಮಿಕೊಂಡಿರುವ ವೈದ್ಯರ ನಡೆ-ಹಳ್ಳಿಯಕಡೆಗೆ ಮತ್ತು ವೈದ್ಯಕೀಯಕಿಟ್ ವಿತರಣೆ ಯೋಜನೆಗೆಚಾಲನೆ ನೀಡಿ ಮಾತನಾಡಿದ ಅವರು, ಸಿದ್ದಾರ್ಥ ಆಸ್ಪತ್ರೆಯ ವೈದ್ಯರು ಜನತೆ ಆರೋಗ್ಯ ರಕ್ಷಣೆ ಮಾಡುವುದು ತಮ್ಮ ಮೊದಲ ಆದ್ಯತೆ ಆಗಬೇಕು. ವೈದ್ಯರು ಕೊರಟಗೆರೆ ತಾಲೂಕಿನ ಪ್ರತಿ ಹಳ್ಳಿಗೆ ಭೇಟಿ ನೀಡಲಿದ್ದು, ಅದಕ್ಕಾಗಿ ತಾಲೂಕಿನ ಜೆಟ್ಟಿ ಅಗ್ರಹಾರ ಪಂಚಾಯ್ತಿಯ 18ಹಳ್ಳಿಗಳನ್ನು ಅಯ್ಕೆ ಮಾಡಿಕೊಂಡು ಹಳ್ಳಿ ಜನರಲ್ಲಿಜಾಗೃತಿ ಮೂಡಿಸುವರು ಎಂದರು.
ವೈದ್ಯರಿಂದ ಜಾಗೃತಿ: ಸಿದ್ದಾರ್ಥ ಶಿಕ್ಷಣ ಸಂಸ್ಥೆಯಕಾರ್ಯದರ್ಶಿ ಡಾ.ಜಿ.ಪರಮೇಶ್ವರಸೂಚನೆ ಮೇರೆಗೆವೈದ್ಯರ ತಂಡ ಕೊರಟಗೆರೆ ತಾಲೂಕಿನ ಹಳ್ಳಿಹಳ್ಳಿಗೆಭೇಟಿ ನೀಡಿ ಜನರಿಗೆ ಕೊರೊನಾ ಸೋಕಿನ ಬಗ್ಗೆ ಅರಿವು ಮೂಡಿಸಿದರು. ಸಿದ್ದಾರ್ಥ ಕಾಲೇಜಿನ ವೈದ್ಯರು ಈವೇಳೆ ಕೊರೊನಾ ಸೋಂಕಿತರ ಮನೆಗೆ ತೆರಳಿ ಅಗತ್ಯಚಿಕಿತ್ಸೆ ಹಾಗೂ ಔಷಧ ನೀಡಿದರು.
ಕಂದಾಯ, ಪ್ರಾಥಮಿಕ ಆರೋಗ್ಯ ಸಿಬ್ಬಂದಿ, ಗ್ರಾಪಂ, ಸ್ಥಳೀಯ ಜನಪ್ರತಿನಿಧಿಗಳ ಹಾಗೂ ಆಶಾ ಕಾರ್ಯಕರ್ತೆಯರಸಹಕಾರದೊಂದಿಗೆ ಮನೆ ಮನೆಗೆ ತೆರಳಿ ಕ್ಷೇತ್ರದ ಜನರಸಂಕಷ್ಟದಲ್ಲಿ ಭಾಗಿಯಾಗಿ ಜೆಟ್ಟಿ ಅಗ್ರಹಾರ, ನವಲಕುರಿಕೆ, ದಮ್ಮರನಹಳ್ಳಿ ಪಾಳ್ಯ ಸೇರಿ 18 ಹಳ್ಳಿಗಳ 120ಮಂದಿ ಕೋವಿಡ್ ಶಂಕಿತರಿಗೆ ಔಷಧ ಮತ್ತು ವೈದ್ಯಕೀಯ ನೆರವು ನೀಡಿದರು.ಪಿಡಿಒ ಸುನಿಲ್ ಕುಮಾರ್ ಮತು ¤ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಸಮುದಾಯ ವೈದ್ಯಕೀಯ ವಿಭಾಗದ ವೈದ್ಯಡಾ.ರಾಜ ೇಶ್ ನೇತೃತ್ವದ ತಂಡ, ಎಂಜಿನಿಯರಿಂಗ್‌ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್‌ಡಾ.ಜಯಪ್ರಕಾಶ್ ಮತ್ತು ವೈದ್ಯರು ಮತ್ತು ಸಿಬ್ಬಂದಿ ಈಆಂದೋಲನದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ
Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು
ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ
Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.