ಕೋಳಿ ಫಾರಂನಿಂದ 20 ಗ್ರಾಮಗಳಿಗೆ ಸಾಂಕ್ರಾಮಿಕ ರೋಗ : ಗುಳೆಗೆ ಸಿದ್ದರಾದ ರೈತಾಪಿವರ್ಗ

ದೇವಾಲಯದಲ್ಲಿ ಮದುವೆ - ಶುಭ ಸಮಾರಂಭಗಳೇ ಸ್ಥಗೀತ

Team Udayavani, Aug 27, 2022, 9:03 AM IST

ಕೋಳಿ ಫಾರಂನಿಂದ 20 ಗ್ರಾಮಗಳಿಗೆ ಸಾಂಕ್ರಾಮಿಕ ರೋಗ : ಗುಳೆಗೆ ಸಿದ್ದರಾದ ರೈತಾಪಿವರ್ಗ

ಮದುವೆಯ ಊಟ -ತಿಂಡಿಯಲ್ಲಿ ನೋಣಗಳ ರಾಶಿ..

ಕೊರಟಗೆರೆ: ನಾಮಫಲಕವೇ ಇಲ್ಲದ ಖಾಸಗಿ ಕೋಳಿಫಾರಂ.. ಭದ್ರತೆಯೇ ಇಲ್ಲದ ಕೋಳಿಫಾರಂನಲ್ಲಿ ಬಾಲಕಾರ್ಮಿಕರ ಕೆಲಸ.. ಸ್ವಚ್ಚತೆಯೇ ಇಲ್ಲದ ಕೋಳಿಫಾರಂನಲ್ಲಿ ದುರ್ವಾಸನೆ ಹೆಚ್ಚಾಗಿ ನೋಣಗಳ ಸಾಮ್ರಾಜ್ಯವೇ ಸ್ಥಾಪನೆ.. ಸಾಂಕ್ರಾಮಿಕ ರೋಗದ ಬೀತಿಯಿಂದ ಗುಳೆ ಹೊರಡಲು ಮುಂದಾದ ರೈತಾಪಿವರ್ಗ.. ಎರಡು ವರ್ಷದ ಸಮಸ್ಯೆಯ ವಿರುದ್ದ ಕ್ರಮಕೈಗೊಳ್ಳದೇ ಮೌನಕ್ಕೆ ಶರಣಾದ ಗ್ರಾಪಂ ಮತ್ತು ಆರೋಗ್ಯ ಇಲಾಖೆಯ ಒಳಮರ್ಮವೇನು ಎಂಬುದೇ ಯಕ್ಷಪ್ರಶ್ನೆ.

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಬಿ.ಡಿ.ಪುರ ಗ್ರಾಪಂ ವ್ಯಾಪ್ತಿಯ ತೊಗರಿಘಟ್ಟ ಗ್ರಾಮದ ಸುಪ್ರಸಿದ್ದ ಶ್ರೀಆದಿತಿಮ್ಮಪ್ಪ ದೇವಾಲಯದ ಸಮೀಪ ಕಳೆದ 2 ವರ್ಷದ ಹಿಂದೇ ಗೀತಾ ಕೋಳಿ ಪಾರಂ ನಿರ್ಮಾಣವಾಗಿದೆ. ಕೋಳಿಫಾರಂನ ನಿರ್ವಹಣೆ ವಿಫಲದಿಂದ ಅನೈರ್ಮಲ್ಯ ಹೆಚ್ಚಾಗಿ ನೋಣಗಳ ಹಾವಳಿಗೆ 20 ಕ್ಕೂ ಅಧಿಕ ಗ್ರಾಮದ ಸಾವಿರಾರು ಜನರಿಗೆ ಕೆಮ್ಮು-ನೆಗಡಿ ಮತ್ತು ಜ್ವರದ ಜೊತೆಯಲ್ಲಿ ಸಾಂಕ್ರಾಮಿಕ ರೋಗವು ಹರಡುತ್ತೀದೆ.

15 ಶೆಡ್ ಗಳ ಮೊಟ್ಟೆ ಕೋಳಿಯ ಗೊಬ್ಬರವನ್ನು ತೆರವುಗೊಳಿಸಿ 3ತಿಂಗಳು ಕಳೆದಿವೆ. ಕೋಳಿಯ ಗೊಬ್ಬರದ ದುರ್ವಾಸನೆಯಿಂದ ಅನೈರ್ಮಲ್ಯ ಹೆಚ್ಚಾಗಿ ರಾಶಿ ರಾಶಿ ನೋಣಗಳ ಸಾಮ್ಯಾಜ್ಯವೇ ನಿರ್ಮಾಣ ಆಗಿವೆ. ಕೆಮ್ಮು-ನೆಗಡಿ ಮತ್ತು ಜ್ವರ ಹೆಚ್ಚಾಗಿ ಸಾಂಕ್ರಾಮಿಕ ರೋಗದಿಂದ ಈಗಾಗಲೇ ರೈತರು ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ. ಮಾಲೀಕನ ನಿರ್ಲಕ್ಷ ಮತ್ತು ವ್ಯವಸ್ಥಾಪಕ ನಿರ್ವಹಣೆ ವಿಫಲತೆಯಿಂದ ೨೦ಕ್ಕೂ ಅಧಿಕ ಗ್ರಾಮದ ಗ್ರಾಮಸ್ಥರು ಊರೇ ಬಿಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

3 ಲಕ್ಷ ಮೊಟ್ಟೆಕೋಳಿ ಸಾಕಾಣಿಗೆ ಆರೋಗ್ಯ, ಕಾರ್ಮಿಕ, ಬೆಸ್ಕಾಂ, ಆದಾಯ, ಕಂದಾಯ ಮತ್ತು ಸ್ಥಳೀಯ ಗ್ರಾಪಂಯ ಪರವಾನಗಿ ಪಡೆದಿರಬೇಕಿದೆ. ಪರವಾನಗಿ ಪಡೆದಿರುವ ಯಾವುದೇ ದಾಖಲೆಗಳು ವ್ಯವಸ್ಥಾಪಕರ ಬಳಿ ಇಲ್ಲ. ದಾವಣಗೆರೆ ಮೂಲದ ಮಾಲೀಕ ಕೋಳಿಪಾರಂನಲ್ಲಿ ವಾಸವಿಲ್ಲ. ಪರವಾನಗಿಯ ಅಮಾಲೀಕ ಕೋಳಿಪಾರಂನಲ್ಲಿ ವಾಸವಿಲ್ಲ. ಪರವಾನಗಿಯ ಅವಧಿಯೇ ಮುಗಿದಿದೆ. ಸಾಂಕ್ರಾಮಿಕ ರೋಗ ಹರಡುತ್ತೀರುವ ಕೋಳಿಫಾರಂ ವಿರುದ್ದ ಸ್ಥಳೀಯರು ತಹಶೀಲ್ದಾರ್ ಮತ್ತು ಗ್ರಾಪಂಗೆ ದೂರು ನೀಡಿದ್ದರೂ ಕ್ರಮ ಮಾತ್ರ ವಿಫಲವಾಗಿದೆ.

ಗುಳೆ ಹೊರಡಲು ಸಿದ್ದರಾದಗ್ರಾಮಸ್ಥರು..
ನೋಣಗಳ ಹಾವಳಿ ಹೆಚ್ಚಾಗಿ ಬೊಮ್ಮಲದೇವಿಪುರ, ಶಿರಿಗೋನಹಳ್ಳಿ, ತೊಗರಿಘಟ್ಟ, ಶಕುನಿತಿಮ್ಮನಹಳ್ಳಿ, ಕಳ್ಳಿಪಾಳ್ಯ, ಮುದ್ದನಹಳ್ಳಿ, ದುಗ್ಗೇನಹಳ್ಳಿಯ ಗ್ರಾಮಸ್ಥರಿಗೆ ಸೇರಿ 20 ಗ್ರಾಮಗಳಿಗೆ ಸಮಸ್ಯೆ ಎದುರಾಗಿದೆ.

ಕೋಳಿಫಾರಂ ಮುಚ್ಚಿಸಿ ಅಥವಾ ನಾವೇ ಗ್ರಾಮ ಬಿಟ್ಟು ಹೋಗುತ್ತೇವೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಆದಿತಿಮ್ಮಪ್ಪ ಸನ್ನಿಧಿಯಲ್ಲಿ ಮದುವೆ, ನಾಮಕರಣ ಸೇರಿದಂತೆ ತಿಂಗಳಿಗೆ 10ಕ್ಕೂ ಅಧಿಕ ಶುಭ ಸಮಾರಂಭ ನಡೆಯುತ್ತವೆ. ಭಕ್ತರು ತಿನ್ನುವ ಊಟ ಮತ್ತು ತಿಂಡಿಯಲ್ಲಿ ನೋಣವೇ ಸೀಗುತ್ತೀವೆ. ತರಕಾರಿಯ ಮೇಲೆ ನೋಣಗಳ ರಾಶಿಯೇ ಬಂದು ನಿಲ್ಲುತ್ತೀರುವ ಪರಿಣಾಮ ಶುಭ ಸಮಾರಂಭವೇ ಸ್ಥಗೀತವಾಗಿವೆ.

ಬಾಲ ಕಾರ್ಮಿಕರಿಂದ ಕೂಲಿ ಕೆಲಸ..

ಹೊರರಾಜ್ಯದ 40 ಕ್ಕೂ ಅಧಿಕ ಕಾರ್ಮಿಕರ ಜೊತೆ 20 ಕ್ಕೂ ಅಧಿಕ ಪುಟಾಣಿ ಮಕ್ಕಳು ಮತ್ತು ಬಾಲಕಾರ್ಮಿಕರು ಇದ್ದಾರೆ. ಬಾಲಕಾರ್ಮಿಕರಿಗೆ ಸಮರ್ಪಕ ಭದ್ರತೆ ಮತ್ತು ಸೌಲಭ್ಯವೇ ಮರೀಚಿಕೆ ಆಗಿದೆ. ಅಕ್ಷರದ ಜ್ಞಾನ ಮತ್ತು ಭಾಷೆಯ ಪರಿಚಯವೇ ಇಲ್ಲದ ಇವರ ನೋವಿನ ಕತೆ ಕಾರ್ಮಿಕ ಇಲಾಖೆ ಕೇಳಬೇಕಿದೆ. ಕೋಳಿ ಸಾಕಾಣಿಕೆಗೆ ಮಾಲೀಕ ಗ್ರಾಪಂಯ ಅನುಮತಿ ಪಡೆದಿರೋದು ಕೇವಲ ೧ಶೇಡ್‌ಗೆ ಮಾತ್ರ. ಆದರೇ ನಿರ್ಮಾಣ ಮಾಡಿರೋದು 10 ಶೆಡ್. ವ್ಯವಸ್ಥಾಪಕ ಹೇಳ್ತಿರೋದು 80 ಸಾವಿರ ಕೋಳಿ ಆದರೇ ಕೋಳಿ ಸಾಕಾಣಿಕೆಯ ನಿಜವಾದ ಅಂಕಿಅಂಶ ಇರೋದು 3ಲಕ್ಷಕ್ಕೂ ಅಧಿಕ. ಪ್ರತಿನಿತ್ಯ 1 ಲಕ್ಷಕ್ಕೂ ಅಧಿಕ ಮೊಟ್ಟೆಗಳ ವಹಿವಾಟು ನಡೆಯುತ್ತದೆ. ಆದಾಯ ಇಲಾಖೆಗೆ ವಂಚಿಸುವ ಕೆಲಸವು ನಡೆಯುತ್ತೀದೆ.

ಅನೈರ್ಮಲ್ಯ ಹೆಚ್ಚಾಗಿ ನೋಣಗಳ ಸಾಮ್ರಾಜ್ಯವೇ ಸೃಷ್ಟಿಯಾಗಿದೆ. ನೋಣಗಳ ಹಾವಳಿಗೆ ರೈತರ ಕೃಷಿಬೆಳೆ ನಾಶವಾಗಿವೆ. ಕೆಮ್ಮು-ಜ್ವರದಿಂದ ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುತ್ತೀದೆ. ಆದಿತಿಮ್ಮಪ್ಪ ದೇವಾಲಯದಲ್ಲಿ ಶುಭ ಸಮಾರಂಭ ಸ್ಥಗೀತವಾಗಿವೆ. ತಹಶೀಲ್ದಾರ್ ಮತ್ತು ಗ್ರಾಪಂಗೆ ದೂರು ನೀಡಿದ್ದೇವೆ. ಕೋಳಿಫಾರಂ ಮುಚ್ಚಿಸದಿದ್ದರೇ ನಾವೇಲ್ಲರೂ ಊರು ಬೀಡುತ್ತೇವೆ.

– ಜನಾರ್ಧನ. ಸ್ಥಳೀಯ ರೈತ. ತೊಗರಿಘಟ್ಟ

ಗೀತಾ ಕೋಳಿಫಾರಂನಲ್ಲಿ 36 ಕಾರ್ಮಿಕ ಕುಟುಂಬಗಳಿವೆ. 3 ತಿಂಗಳಿಗೆ ಒಮ್ಮೆ ಗೊಬ್ಬರ ವಿಲೇವಾರಿ ಮಾಡುತ್ತೇವೆ. ಮಳೆ ಹೆಚ್ಚಾದ ಪರಿಣಾಮ ಸಮಸ್ಯೆ ಸೃಷ್ಟಿಯಾಗಿದೆ. ಕೋಳಿ ಸಾಕಾಣಿಕೆಯ ಪರವಾನಗಿಯ ದಾಖಲೆಗಳು ನಮ್ಮ ಮಾಲೀಕರ ಬಳಿ ಇವೆ. ಅನೈರ್ಮಲ್ಯ ಮತ್ತು ನೋಣಗಳ ಸಮಸ್ಯೆಯ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಂಡು ತಕ್ಷಣ ನಾಮಫಲಕ ಹಾಕುತ್ತೇವೆ.

– ಅಮರ್‌ನಾಥ್. ವ್ಯವಸ್ಥಾಪಕ. ಗೀತಾ ಕೋಳಿಫಾರಂ. ತೊಗರಿಘಟ್ಟ.

ಕೋಳಿಫಾರಂನಿಂದ ಜನರಿಗೆ ಸಮಸ್ಯೆಯಾಗಿ ಸ್ಥಳೀಯರು ದೂರು ನೀಡಿದ್ದಾರೆ. ನಾನೇ ಖುದ್ದಾಗಿ ಬೇಟಿ ನೀಡಿ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ನೋಣಗಳ ಸಮಸ್ಯೆಯ ಗ್ರಾಪಂ ಯಿಂದ ಗೀತಾ ಕೋಳಿಫಾರಂಗೆ ನೊಟೀಸ್ ಜಾರಿ ಮಾಡಲಾಗಿದೆ. ನೋಣಗಳ ಸಮಸ್ಯೆ ಮತ್ತು ಅನೈರ್ಮಲ್ಯ ಸರಿಪಡಿಸದಿದ್ದರೇ ಮಾಲೀಕನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುತ್ತೇನೆ.

– ನಾಹಿದಾ ಜಮ್ ಜಮ್ ತಹಶೀಲ್ದಾರ್. ಕೊರಟಗೆರೆ

– ಸಿದ್ದರಾಜು. ಕೆ.ಕೊರಟಗೆರೆ

ಟಾಪ್ ನ್ಯೂಸ್

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

BJP FLAG

BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?

1-USAA

America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್‌

mob

Bengaluru; ಮೊಬೈಲ್‌ಗಾಗಿ ಜಗಳ ಮಾಡಿದ ಮಗನ ಹೊಡೆದು ಕೊಂ*ದ ಅಪ್ಪ !

Dinesh-Gundurao

Covid Scam: ನ್ಯಾ.ಕುನ್ಹಾ ವರದಿಯಲ್ಲಿ ಕೋವಿಡ್‌ ಅವ್ಯವಹಾರ ಉಲ್ಲೇಖ: ದಿನೇಶ್‌ ಗುಂಡೂರಾವ್‌

1-manipura

Manipur ಉದ್ವಿಗ್ನ: ಇಬ್ಬರು ಸಚಿವರು,ಐವರು ಶಾಸಕರ ಮನೆಗಳಿಗೆ ಬೆಂಕಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

BJP FLAG

BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?

mob

Bengaluru; ಮೊಬೈಲ್‌ಗಾಗಿ ಜಗಳ ಮಾಡಿದ ಮಗನ ಹೊಡೆದು ಕೊಂ*ದ ಅಪ್ಪ !

Dinesh-Gundurao

Covid Scam: ನ್ಯಾ.ಕುನ್ಹಾ ವರದಿಯಲ್ಲಿ ಕೋವಿಡ್‌ ಅವ್ಯವಹಾರ ಉಲ್ಲೇಖ: ದಿನೇಶ್‌ ಗುಂಡೂರಾವ್‌

tractor

Farmers; ಶೂನ್ಯ ಬಡ್ಡಿಯ ಕೃಷಿ ಸಾಲಕ್ಕೆ ಬಡ್ಡಿ ಕಟ್ಟಲು ಸೂಚನೆ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

8

ಗಂಭೀರ್‌ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್‌ ಪೇನ್‌

udupi-Kota-Mee

Udupi: ಕಸ್ತೂರಿ ರಂಗನ್‌ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ

siddanna-2

Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು

BJP FLAG

BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.